13ನೇ ವಯಸ್ಸಿಗೆ IIT, ಈಗ ಆಪಲ್‌ನಲ್ಲಿ ಉದ್ಯೋಗಿ: ಭಾರತದ ಕಿರಿಯ ಐಐಟಿ ಸಾಧಕ ಸತ್ಯಂ ಕುಮಾರ್ ಅವರ ಯಶಸ್ಸಿನ ಕಥೆ
ಹೊಸದನ್ನೇನಾದರೂ ಕಲಿಯಬೇಕೆಂದರೆ, ಅಥವಾ ಸಾಧನೆ ಮಾಡಬೇಕೆಂದರೆ ಮೊದಲು ನಾವು ನಮ್ಮ ಗಡಿಗಳನ್ನ ಮತ್ತೆ ಮೀತಿಗಳನ್ನಾ ಮೀರಲು ಪ್ರಯತ್ನಿಸಬೇಕು. ಇವೆಲ್ಲದರ ಜೊತೆಗೆ ಮುಖ್ಯವಾಗಿ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಎಲ್ಲಿಯವರೆಗೆ ನಮ್ಮನ್ನ ನಾವು ಕೀಳಾಗಿ ಕಾಣುತ್ತೇವೆಯೋ ಅಲ್ಲಿಯವರೆಗೆ ನಮ್ಮ ಬಳಿ ಯಾವ ಅವಕಾಶವೂ ಬಳಿ ಬರುವುದ್ದಿಲ್ಲ.
ಈ ಎಲ್ಲಾ ನೆಗೆಟಿವ್ ಯೋಚನೆಗಳನ್ನಾ ಬದಿಗೊತ್ತಿ, ಕಂಡ ಕನಸನ್ನಾ ಚಿಕ್ಕ ವಯಸ್ಸಿನಲ್ಲೇ ನನಸು ಮಾಡಿಕೊಂಡವರು ಬಿಹಾರದ ಪ್ರತಿಭೆ ಸತ್ಯಯಂ ಕುಮಾರ್. ಕೇವಲ 13ನೇ ವಯಸ್ಸಿಗೆ ಭಾರತದ ಐಐಟಿ-ಜೆಇಇ ಪರೀಕ್ಷೆಯನ್ನು ಪಾಸು ಮಾಡುವ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದನೆ. ಇಂದು ವಿಶ್ವದ ದಿಗ್ಗಜ ಟೆಕ್ ಕಂಪನಿಗಳಲ್ಲಿ ಒಂದಾಗಿರುವ 'ಆಪಲ್'ನಲ್ಲಿ ಉದ್ಯೋಗಿ. ಇದು ಬಡತನವನ್ನು ಮೆಟ್ಟಿ ನಿಂತು, ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿರುವ ಯುವಕನ ಕಥೆ.

ಸತ್ಯಂ ಕುಮಾರ್ ಅವರ ಬಾಲ್ಯ ಮತ್ತು ಶಿಕ್ಷಣ
1999 ಜುಲೈ 20ರಂದು ಬಿಹಾರದ ಭೋಜ್‌ಪುರ್ ಜಿಲ್ಲೆಯ ಬಖೋರಾಪುರ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ಸತ್ಯಂ ಕುಮಾರ್, ಇವರ ತಂದೆ ಸಿದ್ಧನಾಥ್ ಒಬ್ಬ ಬಡ ರೈತ. ಇವರ ಮನೆಯಲ್ಲಿ ಪುಸ್ತಕಗಳನ್ನಾಗಲಿ, ಟ್ಯೂಷನ್ ಶುಲ್ಕವನ್ನಾಗಲಿ ಭರಿಸುವಷ್ಟು ಹಣವಿರಲಿಲ್ಲ. ಆದರೆ, ಸತ್ಯಂ ಅವರಿಗೆ ವಿಜ್ಞಾನ ಮತ್ತು ಗಣಿತದ ಬಗ್ಗೆ ಅಪಾರ ಒಲವಿತ್ತು.
ಇವರ ಊರಿನಲ್ಲಿ ಕೇವಲ 8ನೇ ತರಗತಿಯವರೆಗೆ ಮಾತ್ರ ಶಾಲೆಯಿತ್ತು. ಆದರೆ ತನ್ನ ಅಸಾಧಾರಣ ಬುದ್ಧಿ ಶಕ್ತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಬೋರ್ಡ್‌ನಿಂದ ವಿಶೇಷ ಅನುಮತಿ ಪಡೆದು 12ನೇ ತರಗತಿಯನ್ನು ಸುಲಭವಾಗಿ ಪೂರ್ಣಗೊಳಿಸಿದರು. ಕೇವಲ 12ನೇ ವಯಸ್ಸಿಗೆ ಐಐಟಿ-ಜೆಇಇ ಪರೀಕ್ಷೆ ಬರೆದು 8,137ನೇ ರ್‍ಯಾಂಕ್ ಪಡೆದರು. ಆದರೆ, ಇಷ್ಟಕ್ಕೆ ಸೀಮಿತವಾಗದ ಸತ್ಯಂ, 13ನೇ ವಯಸ್ಸಿಗೆ ಮತ್ತೆ ಪರೀಕ್ಷೆ ಬರೆದು ಅಖಿಲ ಭಾರತ ಮಟ್ಟದಲ್ಲಿ 679ನೇ ರ್‍ಯಾಂಕ್ ಗಳಿಸಿದರು. ಈ ಮೂಲಕ 'ಭಾರತದ ಕಿರಿಯ ಐಐಟಿ ಸಾಧಕ' ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಐಐಟಿ ಕಾನ್ಪುರ ಯಶಸ್ಸಿನ ಕಥೆ
ಸತ್ಯಂ ತನ್ನ 14ನೇ ವಯಸ್ಸಿನಲ್ಲಿಯೇ ಕಾನ್ಪುರದ ಪ್ರತಿಷ್ಠಿತ ಐಐಟಿಗೆ ಪ್ರವೇಶ ಪಡೆದ ಅತ್ಯಂತ ಕಿರಿಯ ವಿದ್ಯಾರ್ಥಿ ಎನಿಸಿಕೊಂಡರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಹಾಗೂ ಎಂ.ಟೆಕ್ ವ್ಯಾಸಂಗ ಆರಂಭಿಸಿದರು. ಕಾಲೇಜಿನಲ್ಲಿ ತಮಗಿಂತ ವಯಸ್ಸಿನಲ್ಲಿ ಹಿರಿಯರಿದ್ದ ವಿದ್ಯಾರ್ಥಿಗಳಿಗಿಂತಲೂ ಮುಂಚೂಣಿಯಲ್ಲಿದ್ದ ಸತ್ಯಂ, ರೊಬೊಟಿಕ್ಸ್ ಕ್ಲಬ್‌ನಲ್ಲಿ ಲೀಡರ್ ಆಗಿ ಬೆಳೆದರು. ಮೆಷಿನ್ ಲರ್ನಿಂಗ್ ಪ್ರಾಜೆಕ್ಟ್‌ಗಳ ಮೇಲೆ ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರು. 2018ರಲ್ಲಿ ಪದವಿ ಪೂರ್ಣಗೊಳಿಸಿದಾಗ ಅವರಿಗೆ ಅಮೆಜಾನ್, ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ಗೂಗಲ್‌ನಂತಹ ದಿಗ್ಗಜ ಕಂಪನಿಗಳಿಂದ ಉದ್ಯೋಗದ ಆಫರ್‌ಗಳು ಬಂದಿದ್ದವು.
ಆಪಲ್ ಮೆಷಿನ್ ಲರ್ನಿಂಗ್ ರಿಸರ್ಚರ್ ಆಗಿ ಶುರುವಾದ ಪಯಣ
ಬಂದ ಅತ್ಯುತ್ತಮ ಆಫರ್‌ಗಳನ್ನು ಬದಿಗಿಟ್ಟು ಉನ್ನತ ವ್ಯಾಸಂಗದತ್ತ ಗಮನಹರಿಸಿದ ಸತ್ಯಂ, ಅಮೆರಿಕದ ಯೂನಿವರ್ಸಿಟಿ ಆಫ್ ಟೆಕ್ಸಾಸ್‌ನಲ್ಲಿ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಅಧ್ಯಯನ ಆರಂಭಿಸಿದರು. 24ನೇ ವಯಸ್ಸಿಗೆ ತಮ್ಮ ಪಿಎಚ್‌ಡಿ ಮುಗಿಸಿದ ಅವರು, ಬ್ರೈನ್-ಕಂಪ್ಯೂಟರ್ ಇಂಟರ್‌ಫೇಸ್ ತಂತ್ರಜ್ಞಾನದಲ್ಲಿ ಆಳವಾದ ಸಂಶೋಧನೆ ನಡೆಸಿದರು. ಪಾರ್ಶ್ವವಾಯು ಪೀಡಿತ ರೋಗಿಗಳು ಕೇವಲ ತಮ್ಮ ಆಲೋಚನೆಗಳ ಮೂಲಕ ಯಂತ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ರು.
Meet Satyam Kumar, the youngest IITian in India's history. Born into a farmer's family in Bihar, he cracked IIT-JEE at just 12 years old and improved his rank the very next year with an AIR of 670 at the age of 13.
— Vikas Alwys (@VikasAlwys) June 26, 2026
Born on 20 July 1999 in Bihar, Satyam's extraordinary talent… pic.twitter.com/WSXniQAXSd
2023ರಲ್ಲಿ, ಆಪಲ್ ಕಂಪನಿಯ ಸ್ವಿಟ್ಜರ್‌ಲ್ಯಾಂಡ್ ಕಚೇರಿಯಲ್ಲಿ ಸಿರಿ ಸ್ಪೀಚ್ ತಂಡದಲ್ಲಿ ಇಂಟರ್ನ್‌ಶಿಪ್ ಪಡೆದರು. ಇವರಲ್ಲಿರು ತಾಂತ್ರಿಕ ಜ್ಞಾನವನ್ನು ಮೆಚ್ಚಿದ ಕಂಪನಿಯು, ಅವರನ್ನು ಪೂರ್ಣಾವಧಿಯ ಅಡ್ವಾನ್ಸ್ಡ್ ಸ್ಪೀಚ್ ಮತ್ತು ಲ್ಯಾಂಗ್ವೇಜ್ ಮಾಡೆಲ್ಸ್ ರಿಸರ್ಚರ್‌ರಾಗಿ ನೇಮಿಸಿಕೊಂಡಿತು. ಪ್ರಸ್ತುತ ಅವರು ಭಾರತೀಯರಂತಹ ವಿಭಿನ್ನ ಇಂಗ್ಲಿಷ್ ಉಚ್ಚಾರಣೆಗಳನ್ನು 'ಸಿರಿ' ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡಲು ಪೈಥಾನ್ ಮತ್ತು ಟೆನ್ಸರ್‌ಫ್ಲೋ ಬಳಸಿ ವಿಶಿಷ್ಟ ತಂತ್ರಜ್ಞಾನವನ್ನು .
ಒಬ್ಬ ಸಾಮಾನ್ಯ ರೈತನ ಮಗ ತನ್ನೆಲ್ಲಾ ಆರ್ಥಿಕ ಹಾಗೂ ಸಾಮಾಜಿಕ ಮಿತಿಗಳನ್ನು ಮೀರಿ, ಶಿಸ್ತು ಮತ್ತು ತನ್ನ ನಿರಂತರ ಪ್ರಯತ್ನದಿಂದ ಇಂದು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವುದು ಪ್ರತಿಯೊಬ್ಬರಿಗೂ ಸಂತಸದ ವಿಷಯ. ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದರೆ, ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಸತ್ಯಂ ಕುಮಾರ್ ಅವರೇ ಉದಾಹರಣೆ.


Click it and Unblock the Notifications
