ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ: ಟಿವಿಕೆ ಸರ್ಕಾರಕ್ಕೆ ಜಯ
ನವದೆಹಲಿ: ತಮಿಳುನಾಡು ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧಿಸಿ ಹೊರಡಿಸಿದ್ದ ಆದೇಶಕ್ಕೆ ಇಂದು ಸೋಮವಾರ ಸುಪ್ರೀಂ ಕೊರ್ಟ್ ತಡೆ ನೀಡಿದೆ. ಈ ಮೂಲಕ ತಮಿಳನಾಡು ರಾಜ್ಯ ಸರ್ಕಾರಕ್ಕೆ ಜಯ ಸಿಕ್ಕಂತಾಗಿದೆ. ಮಧ್ಯಂತರ ತಡೆ ಆದೇಶದ ಜೊತೆಗೆ ಮೂಲ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಮೂಲಕ ನಿಯಮಗಳಡಿ ಮತ್ತು ಮಾರ್ಗಸೂಚಿಯನ್ವಯ ಪ್ರಾಣಿವಧೆ ಮಾಡಲು ಅವಕಾಶ ಸಿಕ್ಕಂತಾಗಿದೆ. ಏನಿದು ಪ್ರಕರಣ, ಅದರ ಹಿನ್ನೆಲೆ ಇಲ್ಲಿದೆ.
ಇದೇ ವರ್ಷ 2026ರ ಮೇ 27ರಂದು ಬಕ್ರೀದ್ ಹಬ್ಬಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಬಕ್ರೀದ್ ಸೇರಿದಂತೆ ಯಾವುದೇ ದಿನ ಹಸು, ಕರುಗಳನ್ನು ವಧೆ ಮಾಡುವಂತಿಲ್ಲ ಎಂದು ರಾಜ್ಯಾದ್ಯಂತ ಗೋಹತ್ಯೆ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಟಿವಿಕೆ ಪಕ್ಷದ ಮುಖಸ್ಥ, ಸಿಎಂ ಸಿ.ವಿಜಯ್ ಜೋಸೆಫ್ ಅವರ ನೇತೃತ್ವದ ತಮಿಳುನಾಡು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ನಿಯಮಗಳಡಿ ಪ್ರಾಣಿವಧೆಗೆ ಅವಕಾಶವಿದೆ: ವಾದ
ಈ ಅರ್ಜಿ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ವಿಕ್ರಮ್ ಸಾಥ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯಪೀಠವು ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ. ವಿಚಾರಣೆ ವೇಳೆ ತಮಿಳನಾಡು ರಾಜ್ಯ ಸರ್ಕಾರದ ಪರ ವಕೀಲರು, ಕೃಷಿಗೆ ಯಗ್ಯವಲ್ಲದ, ಹತ್ತು ವರ್ಷ ಮೇಲ್ಪಟ್ಟ, ಸಂತಾನಕ್ಕೆ ಯೋಗ್ಯ ಅಲ್ಲದ ಹಸುಗಳನ್ನು ವಧೆ ಮಾಡಲು ಅವಕಾಶ ಇದೆ. ಅದಕ್ಕೆ ಸೂಕ್ತ ನಿಯಮಗಳನ್ನು ಜಾರಿಗೆ ತರಲಾಗಿದೆ. ಸ್ಥಳೀಯ ಸಂಸ್ಥೆಗಳು ಅವುಗಳನ್ನು ಪಾಲಿಸುತ್ತವೆ. ಹೀಗಿದ್ದಾಗ ಸಂಪೂರ್ಣವಾಗಿ ನಿಷೇಧ ಮಾಡುವುದು ಸರಿಯಲ್ಲ ಎಂದು ವಾದ ಮಾಡಿದರು.
ಬ್ರಕೀದ್ ನಂತಹ ಸಂದರ್ಭಗಳಲ್ಲಿ ಕೊಯಮತ್ತೂರಿನಲ್ಲಿ ಸಾರ್ವಜನಿಕ ಸ್ಥಳದ ಬದಲಾಗಿ ನಿರ್ದಿಷ್ಟ ಜಾಗದಲ್ಲಿ ವಧೆ ಮಾಡಲು ಸೂಚನೆ ನೀಡುವಂತೆ ಹೈಕೋರ್ಟ್‌ಗೆ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಗಿತ್ತು. ನಿರ್ದಿಷ್ಟ ಜಾಗದಲ್ಲಿ ವಧೆಗೆ ಅವಕಾಶ ಮಾತ್ರ ನೀಡಿ ಸೂಚನೆ ನೀಡುವಂತೆ ಕೋರಲಾಗಿತ್ತು. ಆದರೆ ಹೈಕೋರ್ಟ್ ತನ್ನ ವ್ಯಾಪ್ತಿ ಮೀರಿ ತಮಿಳುನಾಡಿನಾದ್ಯಂತ ಯಾವುದೇ ದಿನ ಗೋಹತ್ಯೆ ಮಾಡುವಂತಿಲ್ಲ ಎಂದು ಆದೇಶಿಸಿದ್ದನ್ನು ಎಂದು ವಕೀಲರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ಈ ಮೇಲಿನಂತೆ ಆದೇಶಿಸಿತು.
ಹಾಸನದಲ್ಲಿ ಹಿಂದೂ ರೈತರಿಗೆ ಸಂಕಷ್ಟ, ಆಕ್ರೋಶ
ಕಾನೂನಿನ ಚೌಕಟ್ಟಿನೊಳಗೆ ಹಸುಗಳನ್ನು (ಎಮ್ಮೆ, ಆಕಳು, ದನ) ಖರೀದಿಸಿ ಕಸಾಯಿಖಾನೆಗೆ ಒಯ್ಯುವಾಗ ತಡೆಯಬಹುದು. ಹಿದಿದುಕೊಂಡು ಹೊಡೆಯಬಹುದು ಎಂದ ಕಾರಣಕ್ಕೆ ಈ ವರ್ಷ ಬ್ರಕೀದ್ ವೇಳೆ ಗೋವು ಖರೀದಿಸದೇ ಇರಲು ಕರ್ನಾಟಕ ಹಾಸನ ಮುಸ್ಲಿಮರು ನಿರ್ಧರಿಸಿದ್ದರು. ಈ ಮೂಲಕ ಶಾಂತಿ ಮತ್ತು ಸೌಹಾರ್ದಯುತವಾಗಿ ಹಬ್ಬ ಆರಣೆಗೆ ಮುಂದಾಗಿದ್ದರು. ಆದರೆ ಇದನ್ನು ಹಿಂದೂ ರೈತರೇ ವಿರೋಧಿಸಿದ್ದರು. ದನ ಖರೀದಿಸದೇ ಹೋದರೆ ನಮಗೆ ಸಾಕಷ್ಟು ಕಷ್ಟವಾಗಲಿದೆ ಎಂದು ಆಕ್ರೋಶ ಹೊರ ಹಾಕಿದ್ದರು.
ಈ ಬಾರಿಯ ಹಬ್ಬದ ಹಸು, ದನ ಖರೀದಿಸಿಲ್ಲ. ಮೇಕಗಳ ಮಾರಾಟವು ಕಡಿಮೆ ಆಗಿದೆ. ಮುಸ್ಲಿಮರು ಜಾನುವಾರು ಖರೀದಿಸದೇ ಇರಲು ನಿರ್ಧರಿಸಿದ್ದರಿಂದ ರೈತರಿಗೆ ಸಾಕಷ್ಟು ಸಂಕಷ್ಟವಾಗಿದೆ. ವಯಸ್ಸಾದ, ಕೃಷಿಗೆ ಯೋಗ್ಯವಲ್ಲ ಇನ್ನಿತರ ಕಾರಣಗಳಿಗೆ ಮಾರಾಟಕ್ಕೆ ಹೋದಾಗ ಖರೀದಿಸದಿದ್ದರೆ ನಷ್ಟವಾಗುತ್ತದೆ. ಎಲ್ಲ ಹಸುಗಳನ್ನು ನಾವೇ ಇಟ್ಟುಕೊಂಡು ಏನು ಮಾಡೋಣ ಎಂದು ರೈತರೊಬ್ಬರು ಪ್ರತಿಕ್ರಿಯಿಸಿದ್ದರು. ಇದೆಲ್ಲ ನೋಡಿದರೆ ಇಂದು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಹೆಚ್ಚು ಮಹತ್ವ ಬರುತ್ತದೆ. ಆದರೆ ಪ್ರಾಣಿವಧೆಗೆ ಅವಕಾಶ ಇದೆ ಎಂಬ ಕಾರಣಕ್ಕೆ ನಿಯಮ ಮೀರಿ, ಸ್ಥಳೀಯ ಸಂಸ್ಥೆಗಳ ಗಮನಕ್ಕೆ ತಾರದೇ ಜಾನುವಾರು ಸಾಗಾಟ, ವಧೆ ಮಾಡುವವರ ವಿರುದ್ಧವು ನಿಗಾ ಇಡಬೇಕಿದೆ.


Click it and Unblock the Notifications
