ಬೆಂಗಳೂರು ಜನರೇ ಗಮನಿಸಿ; ತ್ಯಾಜ್ಯ ಘಟಕದ ಬಳಿ ಕೊಳವೆಬಾವಿ ನೀರಿನಲ್ಲಿ ಹಾನಿಕಾರಕ ಲೋಹ ಪತ್ತೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಒಂಬತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. ಇಲ್ಲಿನ ದೊಡ್ಡಬಿದರಕಲ್ಲು ಮಿಶ್ರ ತ್ಯಾಜ್ಯ ಸಂಸ್ಕರಾಣ ಘಟಕ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳು ಮಾಲಿನ್ಯಕಾರಕವಾಗಿವೆ ಎಂದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಬಂದ್ ಆಗಿರುವ ಸಂಸ್ಕರಣಾ ಘಟಕಗಳ ಭಾರೀ ಲೋಗಳು, ಲವಗಣಗಳಿಂದ ಅಂತರ್ಜಲ ಕಲುಷಿತಗೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೊಡ್ಡಬಿದರಕಲ್ಲು ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ತ್ಯಾಜ ಸಂಸ್ಕೃರಿಸಲಾಗುತ್ತಿದೆ. ಅದನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಘಟಕದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲದಲ್ಲಿ ಕಲುಷಿತ ನೀರು ಪತ್ತೆಯಾಗಿದೆ. ಜಿಬಿಎ ವ್ಯಾಪ್ತಿಯ ಎಲ್ಲ ತ್ಯಾಜ್ಯ ಸಂಸ್ಕರಣೆಗಳಿಗಾಗಿ ಅಂದಾಜು 97.82 ಲಕ್ಷ ಟನ್ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಅದರಲ್ಲಿ ದೊಡ್ಡಬಿದರಕ್ಕಲು ಘಟಕದ ಪಾತ್ರವು ದೊಡ್ಡದಿದೆ ಎಂದು 'ಡಿಎಚ್' ವರದಿ ಮಾಡಿದೆ.

51 ಕೊಳವೆ ಬಾವಿ ಮಾದರಿಗಳ ಪರೀಕ್ಷೆ
ಈ ಅಧ್ಯಯನವನ್ನು ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಎಂ. ಬಾಮಿನಿ ಮತ್ತು ಆರ್.ಕೆ. ಸೋಮಶೇಖರ್ ನಡೆಸಿದ್ದಾರೆ. ಈ ಭಾಗದ ನೀರಿನ ಮಾದರಿಯನ್ನು 2022 ಮತ್ತು 2024 ರ ನಡುವೆ ಸಂಗ್ರಹಿಸಲಾಗಿತ್ತು. ಸುಮಾರು 51 ಕೊಳವೆ ಬಾವಿಗಳಿಂದ ಸಂಗ್ರಹಿಸಲಾದ 120 ಅಂತರ್ಜಲ ಮಾದರಿಗಳನ್ನು ಅಧ್ಯಯನ ಮಾಡಿ ವರದಿ ತಯಾರಿಸಿದ್ದು, ಅದರಲ್ಲಿ ಅಂತರ್ಜದಲ್ಲಿ ಹಾನಿಕಾರಕ ಲವಣಾಂಶಗಳಿರುವುದು ದೃಢಪಟ್ಟಿದೆ.
ನೀರಲ್ಲಿ ಏನೆಲ್ಲ ಪತ್ತೆ
ನಿಯಮಗಳ ಪ್ರಕಾರ, ಅಂತರ್ಜಲದ ನೀರಿನಲ್ಲಿ ಮಿತಿಗಳ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಿದೆ. ನಿಕಲ್ ಸಾಂದ್ರತೆಯು 0.02 ರಿಂದ 0.12 ಮಿಗ್ರಾಂ/ಲೀಟರ್ ವರೆಗೆ ಇದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) 0.02 ಮಿಗ್ರಾಂ/ಲೀಟರ್ ಅನ್ನು ಹಾಗೂ ಕಠಿಣವಾದ ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗೂ ಹೆಚ್ಚಿದೆ. ಇನ್ನೂ ಮ್ಯಾಂಗನೀಸ್ ಶೇ.18.3ರಷ್ಟು ಮಾದರಿಗಳಲ್ಲಿ ಬಿಐಎಸ್ ಮಿತಿ ಹೆಚ್ಚಾಗಿದೆ. ಶೇ.ಡಾ 6.7ಕ್ಕೂ ಅಧಿಕ ಸೀಸ ಪ್ರಮಾಣ ಇದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಇದೆಲ್ಲ ಕಲುಷಿತ ನೀರಿನ ಪ್ರಭಾವವು ಕೆಲವು ಸಮಯದವರೆಗೆ ನೀರು ಸೇವಿಸುವವರ ಮೇಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಲವಣಾಂಶವು ವರದಿ ಆಗಿದೆ. ಮುಂಗಾರು ಅವಧಿಯಲ್ಲಿ ಸಂಗ್ರಹಿಸಿದ ಹೆಚ್ಚಿನ ಮಾದರಿಗಳಲ್ಲಿ ಬೈಕಾರ್ಬನೇಟ್ ಸಾಂದ್ರತೆ ದಾಖಲಾಗಿದೆ. ಮುಂಗಾರು ಪೂರ್ವ ಸಂಗ್ರಹಿಸಿದ್ದ ಮಾದರಿಗಳಲ್ಲಿ ಕ್ಲೋರೈಡ್ ಮತ್ತು ಸಲ್ಫೇಟ್ ಮಟ್ಟ ಅಧಿಕವಾಗಿದ್ದದು ದೃಢವಾಗಿತ್ತು.
ಅತ್ಯಧಿಕ ಲವಣಾಂಶಯುಕ್ತ ನೀರು ಮಣ್ಣಿನ ಆರೋಗ್ಯ ಮತ್ತು ಕೃಷಿ ಉತ್ಪಾದಕತೆಗೆ ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ತರಕಾರಿಗಳ ಪೈಕಿ "ಬೀನ್ಸ್ ಮತ್ತು ಟೊಮೆಟೊಗಳಂತಹ ಬೆಳೆಗಳಿಗೆ ಈ ನೀರುಣಿಸಿದರೆ ಇಳುವರಿ ತಗ್ಗುತ್ತದೆ. ಈ ಬಗ್ಗೆ ರೈತರು ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ನೀರಿನಲ್ಲಿ ರಾಸಾಯನಿಕಗಳು ಹೆಚ್ಚಿರುವುದು ವಿವಿಧ ಸಂಶೋಧನೆಗಳಿಂದ ಖಚಿತವಾಗಿದೆ.


Click it and Unblock the Notifications
