CSK: ಸ್ಟೀಫನ್ ಫ್ಲೆಮಿಂಗ್ ವಿದಾಯ, ಸಿಎಸ್‌ಕೆ ಮುಖ್ಯ ಕೋಚ್ ಹುದ್ದೆ ಅಲಂಕರಿಸುವವರು ಇವ್ರಂತೆ

CSK New Coach: ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತರಬೇತುದಾರರಲ್ಲಿ ಒಬ್ಬರಾದ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಸಿಎಸ್‌ಕೆ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸೋಮವಾರ (ಜುಲೈ 13) ಕೆಳಗಿಳಿದಿದ್ದಾರೆ. ಇದೀಗ ಇವರ ಸ್ಥಾನಕ್ಕೆ ಭಾರತೀಯ ಮಾಜಿ ಕ್ರಿಕೆಟರ್ ಹೆಸರು ಕೇಳಿಬಂದಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸ್ಟೀಫನ್ ಫ್ಲೆಮಿಂಗ್ ಅವರು ಸಿಎಸ್‌ಕೆ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದು, ಫ್ರಾಂಚೈಸಿ ಜೊತೆಗಿನ ಅವರ 18 ವರ್ಷಗಳ ಸುದೀರ್ಘ ಮತ್ತು ಐತಿಹಾಸಿಕ ಒಡನಾಟ ಅಧಿಕೃತವಾಗಿ ಕೊನೆಗೊಂಡಿದೆ. ಈ ನಿರ್ಧಾರದ ಬೆನ್ನಲ್ಲೇ, 'ತಂಡದೊಂದಿಗೆ ಕಳೆದ ಪ್ರತಿ ಕ್ಷಣವೂ ಅಮೂಲ್ಯವಾಗಿದ್ದು, ನಾವು ಸಾಧಿಸಿದ ಎಲ್ಲದರ ಬಗ್ಗೆ ನನಗೆ ಹೆಮ್ಮೆಯಿದೆ,' ಎಂದು ಫ್ಲೆಮಿಂಗ್ ಭಾವುಕರಾಗಿ ಹೇಳಿದ್ದಾರೆ.

CSK Coach Change Stephen Fleming Steps Down Hemang Badani Emerges as Top Candidate Know details

ಸ್ಟೀಫನ್ ಫ್ಲೆಮಿಂಗ್ ಸಿಎಸ್‌ಕೆ ಸೇರಿದ್ದು ಯಾವಾಗ?

ಸ್ಟೀಫನ್ ಫ್ಲೆಮಿಂಗ್ ಮತ್ತು ಸಿಎಸ್‌ಕೆ ನಡುವಿನ ಸಂಬಂಧ 2008ರ ಐಪಿಎಲ್ ಉದ್ಘಾಟನಾ ಆವೃತ್ತಿಯಿಂದಲೇ ಆರಂಭವಾಗಿತ್ತು. ಮೊದಲ ಸೀಸನ್‌ನಲ್ಲಿ ಅವರು ಆಟಗಾರನಾಗಿ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದರು. ಬಳಿಕ 2009ರಲ್ಲಿ ಅವರು ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡರು. ಅಂದಿನಿಂದ ಇಂದಿನವರೆಗೆ ಒಂದೇ ಫ್ರಾಚೈಸಿ ಪರ ಮುಖ್ಯ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದು, ಇದು ಅಪರೂಪದ ದಾಖಲೆಯಾಗಿದೆ.

ಧೋನಿ, ಸ್ಟೀಫನ್ ಫ್ಲೆಮಿಂಗ್ ಬಾಂಧವ್ಯ..

ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ನಡುವಿನ ಬಾಂಧವ್ಯ ಮಾತ್ರ ಸಹೋದರರ ರೀತಿ ಇತ್ತು. ಮೈದಾನದ ಒಳಗೆ ಧೋನಿ ಅವರ ಚಾಣಾಕ್ಷ ನಿರ್ಧಾರಗಳು ಮತ್ತು ಹೊರಗೆ ಫ್ಲೆಮಿಂಗ್ ಅವರ ಅದ್ಭುತ ಕಾರ್ಯತಂತ್ರಗಳು ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದವು. ಇವರ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆಯ 5 ಬಾರಿ ಐಪಿಎಲ್ ಚಾಂಪಿಯನ್ (2010, 2011, 2018, 2021 ಮತ್ತು 2023) ಪಟ್ಟ ಅಲಂಕರಿಸಿತು. ಅಷ್ಟೇ ಅಲ್ಲದೆ ಎರಡು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿತು.

ಸಿಎಸ್‌ಕೆ ತಂಡ ಉತ್ತಮ ಪ್ರದರ್ಶನಕ್ಕೆ ಕಾರಣ ಏನು?

ಸಿಎಸ್‌ಕೆ ತಂಡವು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಫ್ಲೆಮಿಂಗ್ ಅವರ ಶಾಂತ ಸ್ವಭಾವ ಮತ್ತು ಆಟಗಾರರನ್ನು ಬೆಂಬಲಿಸುವ ಗುಣವೇ ಮುಖ್ಯ ಕಾರಣವಾಗಿತ್ತು. ಹರಾಜಿನ ವೇಳೆ ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು, ಫಾರ್ಮ್ ಕಳೆದುಕೊಂಡವರಿಗೆ ಸತತ ಅವಕಾಶ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಮತ್ತು ತಂಡದಲ್ಲಿ ಸದಾ ಸಕಾರಾತ್ಮಕ ವಾತಾವರಣ ಇರುವಂತೆ ನೋಡಿಕೊಳ್ಳುವುದರಲ್ಲಿ ನಿಸ್ಸೀಮರಾಗಿದ್ದರು. ಆಟಗಾರರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಗುರುತಿಸುವ ಅವರ ಶೈಲಿ ಸಿಎಸ್‌ಕೆಯನ್ನು ದೊಡ್ಡ ಬ್ರ್ಯಾಂಡ್ ಆಗಿ ಬೆಳೆಸಿತು ಅಂದ್ರ ತಪ್ಪಾಗಲಾರದು.

ಫ್ಲೆಮಿಂಗ್ ಕೊಡುಗೆ ಕೊಂಡಾಡಿದ ಫ್ರಾಂಚೈಸಿ

ಇದೀಗ ದೀರ್ಘಕಾಲದ ಯಶಸ್ಸಿನ ನಂತರ ತಂಡದಲ್ಲಿ ಹೊಸ ಆಲೋಚನೆಗಳು ಮತ್ತು ಯುವ ತರಬೇತುದಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಹಾಗೂ ವೈಯಕ್ತಿಕ ಕಾರಣಗಳಿಂದ ಫ್ಲೆಮಿಂಗ್ ಮುಖ್ಯ ಕೋಚ್ ಹುದ್ದೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಸಹ ಅವರ ಕೊಡುಗೆಯನ್ನು ಕೊಂಡಾಡಿದ್ದು, ಅವರಿಗೆ ಗೌರವಪೂರ್ವಕ ಬೀಳ್ಕೊಡುಗೆ ನೀಡಲು ಸಿದ್ಧತೆ ನಡೆಸಿದೆ.

ಫ್ಲೆಮಿಂಗ್ ಅವರ ನಿರ್ಗಮನವು ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸದಲ್ಲಿ ಒಂದು ಸುವರ್ಣ ಯುಗದ ಅಂತ್ಯವನ್ನು ಸೂಚಿಸುತ್ತದೆ. ಮುಂಬರುವ ಸೀಸನ್‌ಗಳಲ್ಲಿ ಸಿಎಸ್‌ಕೆ ಮುನ್ನಡೆಸಲಿರುವ ಹೊಸ ಕೋಚ್ ಯಾರು ಎಂಬ ಕುತೂಹಲ ಈಗ ಕ್ರಿಕೆಟ್ ವಲಯದಲ್ಲಿ ಮನೆಮಾಡಿದೆ. ಈ ಸಮಯದಲ್ಲೇ ಭಾರತೀಯ ಮಾಜಿ ಕ್ರಿಕೆಟರ್‌ವೊಬ್ಬರ ಹೆಸರು ಕೇಳಿಬಂದಿದೆ. ಮುಂಬರುವ ಸೀಸನ್‌ಗಳಿಗಾಗಿ ತಂಡವನ್ನು ಸಂಪೂರ್ಣವಾಗಿ ಪುನರ್ರಚಿಸಲು ಮುಂದಾಗಿರುವ ಮ್ಯಾನೇಜ್‌ಮೆಂಟ್ ಫ್ಲೆಮಿಂಗ್ ಅವರ ಸ್ಥಾನಕ್ಕೆ ಹೇಮಂಗ್ ಬದಾನಿ ಅವರನ್ನು ತರಲು ಚಿಂತನೆ ನಡೆಸಿದೆ.

ಬದಾನಿ ತರುವ ಉದ್ದೇಶ ಏನು?

ಬದಾನಿ ಅವರಿಗೆ ತರಬೇತುದಾರರಾಗಿ ದೇಶಿ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಅಪಾರ ಅನುಭವವಿದೆ. ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಚೆಪಾಕ್ ಸೂಪರ್ ಗಿಲ್ಲಿಸ್ ತಂಡವನ್ನು ಸತತ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ ಕೀರ್ತಿ ಇವರಿಗಿದೆ. ಅಲ್ಲದೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಫೀಲ್ಡಿಂಗ್ ಕೋಚ್ ಹಾಗೂ ಲಂಕಾ ಪ್ರೀಮಿಯರ್ ಲೀಗ್ ಸೇರಿದಂತೆ ವಿವಿಧ ಜಾಗತಿಕ ಲೀಗ್‌ಗಳಲ್ಲಿ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯದಲ್ಲೇ ಫ್ರಾಂಚೈಸಿಯು ಹೊಸ ಕೋಚಿಂಗ್ ಮ್ಯಾನೇಜ್‌ಮೆಂಟ್‌ನ ಅಧಿಕೃತ ವಿವರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಈ ಕ್ಷಣಕ್ಕಾಗಿಯೇ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+