Get Updates
Get notified of breaking news, exclusive insights, and must-see stories!

ಎಎಪಿ ಗೆಲುವಿನ ಬಳಿಕ ಪಂಜಾಬ್‌ ಅತ್ಯುತ್ತಮ ನಿರ್ಧಾರ ಕೈಗೊಂಡಿದೆ ಎಂದ ಸಿಧು!

ಚಂಡೀಗಢ, ಮಾರ್ಚ್ 12: ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವು ಭರ್ಜರಿ ಗೆಲುವನ್ನು ಪಡೆದಿದೆ. ಈಗಾಗಲೇ ನೂತನ ಸಚಿವ ಸಂಪುಟವು ಪ್ರಮಾಣ ವಚನ ತೆಗೆದುಕೊಳ್ಳಲು ದಿನವು ಕೂಡಾ ಫಿಕ್ಸ್‌ ಆಗಿದೆ. ಈ ನಡುವೆ ಪಂಜಾಬ್‌ ಅತ್ಯುತ್ತಮ ನಿರ್ಧಾರ ಕೈಗೊಂಡಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ತಮ್ಮ ಪಕ್ಷಕ್ಕೆ ಆಮ್ ಆದ್ಮಿ ಪಕ್ಷದ ಎದುರು ಸೋಲು ಕಂಡ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಇದು ಬದಲಾವಣೆಯ ರಾಜಕೀಯ ಎಂದು ಹೇಳಿದ್ದಾರೆ. ಹಾಗೆಯೇ ಅತ್ಯುತ್ತಮ ನಿರ್ಧಾರವನ್ನು ಕೈಗೊಂಡ ಪಂಜಾಬ್‌ ಜನತೆಗೆ ಧನ್ಯವಾದಗಳು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

"ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಈ ಅತ್ಯುತ್ತಮ ನಿರ್ಧಾರಕ್ಕಾಗಿ ನಾನು ಪಂಜಾಬ್ ಜನರನ್ನು ಅಭಿನಂದಿಸುತ್ತೇನೆ," ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನವಜೋತ್ ಸಿಂಗ್ ಸಿಧು ಹೇಳಿದರು. ಜನರ ಧ್ವನಿ, ನಿರ್ಧಾರ ದೇವರ ನಿರ್ಧಾರ ಎಂದು ಕೂಡಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Punjab Took An Excellent Decision says Navjot Sidhu After AAPs Win

ಕಾಂಗ್ರೆಸ್‌ ಅಧ್ಯಕ್ಷರಾಗಿ ಈ ರೀತಿ ಹೇಳುವುದು ಸರಿಯೇ?

ಈ ಸಂದರ್ಭದಲ್ಲೇ ಮಾಧ್ಯಮಗಳು ಕಾಂಗ್ರೆಸ್ ಅಧ್ಯಕ್ಷರಾಗಿರುವ ನೀವು ಹೇಗೆ ಈ ರೀತಿ ಹೇಳಬಹುದು ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಜನರು ಬದಲಾವಣೆಯನ್ನು ಆರಿಸಿದ್ದಾರೆ ಮತ್ತು ಅವರು ಎಂದಿಗೂ ತಪ್ಪಾಗಿಲ್ಲ," ಎಂದು ಪ್ರತಿಪಾದಿಸಿದರು. "ಜನರ ಧ್ವನಿ ದೇವರ ಧ್ವನಿಯಾಗಿದೆ, ನಾವು ನಮ್ರತೆಯಿಂದ ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ತಲೆಬಾಗಬೇಕು," ಎಂದು ಹೇಳಿದರು.

ಇನ್ನು ಈ ಸಂದರ್ಭದಲ್ಲೇ ಯಾವುದೇ ಬೇಸರದ ಭಾವನೆಯನ್ನು ಕೂಡಾ ತೋರಿಸದ ನವಜೋತ್‌ ಸಿಂಗ್‌ ಸಿಧು, ಪಂಜಾಬ್‌ನ ಉನ್ನತಿ ನನ್ನ ಧ್ಯೇಯವಾಗಿದೆ. ನಾನು ಎಂದಿಗೂ ಅದರಿಂದ ದೂರ ಸರಿಯುವುದಿಲ್ಲ ಎಂದಿದ್ದಾರೆ.

"ಯೋಗಿಯು ಧರ್ಮಯುದ್ಧದಲ್ಲಿದ್ದಾಗ, ಅವರು ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸುತ್ತಾರೆ ಮತ್ತು ಎಲ್ಲಾ ಮಿತಿಗಳಿಂದ ಮುಕ್ತರಾಗುತ್ತಾರೆ. ಅವರು ಸಾವಿಗೆ ಸಹ ಹೆದರುವುದಿಲ್ಲ. ನಾನು ಇಲ್ಲಿ ಪಂಜಾಬ್‌ನಲ್ಲಿದ್ದೇನೆ ಮತ್ತು ಇಲ್ಲಿಯೇ ಇರುತ್ತೇನೆ. ಯಾರಾದರೂ ಉತ್ತಮ ಉದ್ದೇಶವನ್ನು ಹೊಂದಿರುವಾಗ ಹಾಗೂ ಪಂಜಾಬ್ ಅನ್ನು ಪ್ರೀತಿಸುತ್ತಿರುವಾಗ ಆಗ ಅವರು ಸೋಲು-ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ," ಎಂದು ಪ್ರತಿಪಾದಿಸಿದ್ದಾರೆ.

ಜನರೊಂದಿಗೆ ನನಗೆ ಆಧ್ಮಾತ್ಮಿಕ, ಹೃದಯದ ಸಂಬಂಧ ಎಂದ ಸಿಧು

"ಜನರೊಂದಿಗಿನ ನನ್ನ ಸಂಪರ್ಕವು ಸೀಮಿತವಾದ ಸಂಬಂಧವಲ್ಲ, ಅದು ಆಧ್ಯಾತ್ಮಿಕ ಮತ್ತು ಹೃದಯದ ಸಂಬಂಧವಾಗಿದೆ. ಜನರೊಂದಿಗಿನ ನನ್ನ ಸಂಬಂಧವು ಚುನಾವಣೆಯಲ್ಲಿ ಗೆಲುವು ಮತ್ತು ಸೋಲುಗಳಿಗೆ ಸೀಮಿತವಾಗಿಲ್ಲ. ನಾನು ಪಂಜಾಬ್ ಜನರಲ್ಲಿ ದೇವರನ್ನು ಮತ್ತು ಅವರ ಕಲ್ಯಾಣದಲ್ಲಿ ನನ್ನ ಕಲ್ಯಾಣವನ್ನು ಕಾಣುತ್ತೇನೆ," ಎಂದು ತಿಳಿಸಿದರು.

ನವಜೋತ್‌ ಸಿಂಗ್‌ ಸಿಧು ಅಮೃತಸರ ಪೂರ್ವ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಜೀವನಜ್ಯೋತ್ ಕೌರ್ ವಿರುದ್ಧ 6,000 ಮತಗಳ ಅಂತರದಿಂದ ಸೋತಿದ್ದಾರೆ. 32,929 ಮತಗಳನ್ನು ಪಡೆದರೆ, ಎಂಎಸ್ ಕೌರ್ 39,520 ಮತಗಳನ್ನು ಪಡೆದಿದ್ದಾರೆ. ಈ ಹಿಂದೆ ಕ್ರಿಕೆಟಿಗರಾಗಿದ್ದ ನವಜೋತ್‌ ಸಿಂಗ್‌ ಸಿಧು, ಈ ಹಿಂದೆ ಅಮೃತಸರದಿಂದ ಬಿಜೆಪಿ ಟಿಕೆಟ್‌ನಲ್ಲಿ ಮೂರು ಲೋಕಸಭಾ ಚುನಾವಣೆಗಳನ್ನು ಗೆದ್ದಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಅವರು ಅಮೃತಸರ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 42,000 ಮತಗಳ ಅಂತರದಿಂದ ಗೆದ್ದರು.

ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ನೈತಿಕ ಹೊಣೆಹೊತ್ತು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+