ಬಿಗ್ ಬಿ ಅಮಿತಾಬ್ ಮುಂದಿನ ರಾಷ್ಟ್ರಪತಿ?

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 30: ಬಾಲಿವುಡ್ಡಿನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಸಿನಿಮಾರಂಗದಿಂದ ನಿವೃತ್ತಿ ಘೋಷಿಸಲು ಮುಂದಾಗಿದ್ದಾರಾ? ಗೊತ್ತಿಲ್ಲ. ಬಿಗ್ ಬಿ ಹೆಸರು ಈಗ ಮುಂದಿನ ರಾಷ್ಟ್ರಪತಿಯಾಗುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂಬ ಸುದ್ದಿ ಲೀಕ್ ಆಗಿದೆ.

ಅಮಿತಾಬ್ ಅವರ ಗೆಳೆಯ ರಾಜಕಾರಣಿ ಅಮರ್ ಸಿಂಗ್ ಅವರು ಇಂಥದ್ದೊಂದು ಹುಬ್ಬೇರಿಸುವ ವಿಷಯವನ್ನು ಹೊರಹಾಕಿದ್ದಾರೆ. ಏಪ್ರಿಲ್ 1 ಮೂರ್ಖರ ದಿನಕ್ಕೂ ಮುನ್ನ ಅಮರ್ ಸಿಂಗ್ ಏನಾದರೂ ಕಾಮಿಡಿ ಮಾಡುತ್ತಿದ್ದಾರಾ? ಎಂದು ಫ್ಯಾನ್ಸಿಗೂ ಅನುಮಾನ ಕಾಡುತ್ತಿದೆ. [ಮಾತು ಉಳಿಸಿಕೊಂಡ ಬಿಗ್ ಬಿ, ಆಫರ್ ರಿಜೆಕ್ಟ್ ಮಾಡಿದ ಗೇಲ್!]

PM Modi to nominate Amitabh Bachchan's name for next President of India?

ಆದರೆ, ಅಮರ್ ಸಿಂಗ್ ಅವರಿಗೆ ಈ ಸುದ್ದಿ ಗೊತ್ತಾಗಿದೆಯಂತೆ ಅದನ್ನು ಎಲ್ಲರಿಗೂ ಹಂಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಇತ್ತೀಚೆಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ.[ವಿವಾದದಲ್ಲಿ ಬಾಲಿವುಡ್ ಸ್ಟಾರ್ ಬಿಗ್ ಬಿ!]

ಮೋದಿಗೆ ಬಿಗ್ ಬಿ ಪರಿಚಯಿಸಿದ್ದು ನಾನೇ: ಗುಜರಾತ್ ರಾಜ್ಯದ ರಾಯಭಾರಿಯಾಗಿ ಅಮಿತಾಬ್ ಬಚ್ಚನ್ ಅವರನ್ನು ನೇಮಿಸಲು ಹಾಗೂ ಮೋದಿ ಅವರಿಗೆ ಪರಿಚಯಿಸಿದ್ದು ನಾನೇ ಎಂದು ಜೀನ್ಯೂಸ್ ಇಂಡಿಯಾ 24X7 ಹೊಸ ಚಾನೆಲ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಣಬ್ ಮುಖರ್ಜಿ ಅವರು ಜುಲೈ 25, 2012ರಲ್ಲಿ ದೇಶದ 13ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಮರ್ ಸಿಂಗ್ ಅವರ ಹೇಳಿಕೆಗೂ ಮುನ್ನ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಅಮಿತಾಬ್ ಹೆಸರನ್ನು ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯಾಗಿ ಸೂಚಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Politician Amar Singh has revealed something which might surprise a lot and which may make many feel that it could a April Fool's Day joke. Amar Singh has said that he got to know that 'PM Narendra Modi is planning to propose Bollywood superstar Amitabh Bachchan's name for the next President of India'.
Please Wait while comments are loading...