ಮಹಿಳಾ ಪೊಲೀಸ್ ಪೇದೆಯರ ಮೇಲೆ ಅತ್ಯಾಚಾರ

Posted By:
Subscribe to Oneindia Kannada

ಮಥುರಾ, ನವೆಂಬರ್, 9: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳಾ ಪೊಲೀಸ್ ಪೇದೆಯರ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂದ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿದೆ.

ಮೊದಲನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಪೊಲೀಸ್ ಪೇದೆಯೊಬ್ಬರು "ನರೇಂದ್ರ ಮತ್ತು ಬಬ್ಬಲ್ ಎಂಬುವವರು ನನ್ನನ್ನು ಬಲವಂತವಾಗಿ ಇಲ್ಲಿಯ ಕೃಷ್ಣನಗರದಲ್ಲಿರುವ ಉಪಾಹಾರಗೃಹಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ". ಎಂದು ಆರೋಪಿಸಿದ್ದಾರೆ.

ಈ ಮಹಿಳೆಯನ್ನು ಗ್ವಾಲಿಯರ್ ಪ್ರದೇಶಕ್ಕೆ ಪೊಲೀಸ್ ಪೇದೆಯಾಗಿ ನಿಯುಕ್ತಿ ಮಾಡಲಾಗಿತ್ತು. ಮಂಗಳವಾರ (ನ.8) ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.

Mathura: Two lady constables allegedly raped

ನರೇಂದ್ರ ಅವರನ್ನು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಈ ಸಂದರ್ಭದಲ್ಲಿ ಉಪಹಾರಾ ಗೃಹದ ಮಾಲಿಕ ಮತ್ತು ಬಬ್ಬಲ್ ಯಾರು ಓಳಗೆ ಬಾರದಂತೆ ಬಾಗಿಲ ಬಳಿ ನಿಂತಿದ್ದರು ಎಂದು ಮಹಿಳೆ ತಿಳಿಸಿರುವುದಾಗಿ ಮಥುರಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಎರಡನೇ ಪ್ರಕರಣದಲ್ಲಿ ಮತ್ತೊಬ್ಬ ಮಹಿಳಾ ಪೊಲೀಸ್ ಪೇದೆ ಪ್ರತಿಕ್ರಿಯೆ ನೀಡಿ ಸತ್ಯೇಂದ್ರ ಸಿಂಗ್ ಎಂಬ ಪೊಲೀಸ್ ಪೇದೆಯಿಂದ ಅತ್ಯಾಚಾರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಸತ್ಯೇಂದ್ರ ಸಿಂಗ್ ಎಂಬ ಪೊಲೀಸ್ ಪೇದೆ ಮಹಿಳೆಯನ್ನು ಮಥುರಾ ಜಂಕ್ಷನ್ ಬಳಿ ಬರುವಂತೆ ಹೇಳಿದರು. ಹೋದ ಬಳಿಕ ತಂಪು ಪಾನೀಯದಲ್ಲಿ ಮತ್ತುಪದಾರ್ಥ ಬೆರೆಸಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.

ಅಷ್ಟೇ ಅಲ್ಲದೆ ಸತ್ಯೇಂದ್ರ ಸಿಂಗ್ ನನ್ನನ್ನು ಮದುವೆಯಾಗುವುದಾಗಿ ಒಮ್ಮೆ ತಿಳಿಸಿದ್ದ ನಾನು ಅವನ ಮಾತನ್ನು ನಿರಾಕರಿಸಿದ್ದೆ ಆದ್ದರಿಂದಲೇ ಆತ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.

ಸಂತ್ರಸ್ತ ಪೊಲೀಸ್ ಪೇದೆಗಳನ್ನು ಗ್ವಾಲಿಯರ್ ನಲ್ಲಿ ಕೆಲಸಕ್ಕೆ ನಿಯುಕ್ತಿ ಮಾಡಲಾಗಿತ್ತು. ಸತ್ಯೇಂದ್ರ ಸಿಂಗ್ ಸಹ ಗ್ವಾಲಿಯರ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ಸಂತ್ರಸ್ತ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಎಸ್ಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A case has been registered against three persons including a police officer for allegedly raping two lady police constables in separate incidents in Mathura.
Please Wait while comments are loading...