ವರ್ಷಾಂತ್ಯದೊಳಗೆ ಸುನಾಮಿ! ಅತೀಂದ್ರಿಯ ಶಕ್ತಿಯ ಬಾಬು ಕಳಾಯಿಲ್ ಎಚ್ಚರಿಕೆ!

Posted By:
Subscribe to Oneindia Kannada
   ಡಿಸೆಂಬರ್ 31, 2017 : ಕೇರಳ ವಿಜ್ಞಾನಿ ಪ್ರಕಾರ, ಭಾರತ ದೊಡ್ಡ ನೈಸರ್ಗಿಕ ವಿಕೋಪ ಎದುರಿಸಬಹುದು | Oneindia Kannada

   ತಿರುವನಂತಪುರಂ, ಡಿಸೆಂಬರ್ 5: ಈ ವರ್ಷ ಅಂದರೆ 2017 ರ ಡಿಸೆಂಬರ್ 31 ರೊಳಗೆ ಅತ್ಯಂತ ಭೀಕರ ಭೂಕಂಪ ಮತ್ತು ಸುನಾಮಿಯನ್ನು ಭಾರತ ಸೇರಿದಂತೆ 11 ದೇಶಗಳು ಎದುರಿಸುತ್ತವೆ ಎಂಬ ಆಘಾತಕಾರಿ ಸುದ್ದಿಯನ್ನು ಕೇರಳದ ವಿಜ್ಞಾನಿಯೊಬ್ಬರು ನೀಡಿದ್ದಾರೆ.

   ವಿಶ್ವವನ್ನೇ ತಲ್ಲಣಿಸಿದ ಆ 10 ವದಂತಿಗಳು

   ನಾಲ್ಕು ದಿನಕ್ಕೊಮ್ಮೆ ಪ್ರಳಯದ ಗುಲ್ಲೆಬ್ಬಿಸುತ್ತಿರುವ ಈ ಕಾಲದಲ್ಲಿ ಯಾವುದನ್ನು ನಂಬಬೇಕೋ, ಬಿಡಬೇಕೋ ದೇವರೇ ಬಲ್ಲ. ಆದರೆ ಕೇರಳದ ಬಿ.ಕೆ.ರೀಸರ್ಚ್ ಅಸೋಸಿಯೇಶನ್ ನ ಬಾಬು ಕಳಾಯಿಲ್ ಎಂಬುವವರು ಅತೀಂದ್ರಿಯ ಶಕ್ತಿ ಮತ್ತು ಕೆಲ ವೈಜ್ಞಾನಿಕ ಅಧ್ಯಯನದಿಂದಾಗಿ ಡಿಸೆಂಬರ್ 31, ಯಾರೂ ನಿರೀಕ್ಷಿಸಿರದ ಮಟ್ಟಿನ ನೈಸರ್ಗಿಕ ವಿಕೋಪವೊಂದು ಸಂಭವಿಸುತ್ತದೆ ಎಂಬ ಬಾಂಬ್ ಸಿಡಿಸಿದ್ದಾರೆ.

   ಜಗತ್ತು ಅಂತ್ಯವಾಗುವ ಆ 8 ಸಂಭವನೀಯ ವರ್ಷಗಳು!

   ಅಷ್ಟೇ ಅಲ್ಲ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೂ ಅವರು ಪತ್ರ ಸಹ ಬರೆದಿದ್ದಾರೆ. ಈ ಪತ್ರವನ್ನು ಅವರು ಪ್ರಧಾನಿ ಮೋದಿಯವರಿಗೆ ಸೆಪ್ಟೆಂಬರ್ ನಲ್ಲೇ ಬರೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪತ್ರಕ್ಕೆ ಪ್ರಧಾನಿ ಕಡೆಯಿಂದ ಯಾವ ಪ್ರತಿಕ್ರಿಯೆ ಸಿಕ್ಕಿದೆ ಎಂಬ ಮಾಹಿತಿಯಿಲ್ಲ.

   ಯಾರು ಈ ಬಾಬು ಕಳಾಯಿಲ್?

   ಯಾರು ಈ ಬಾಬು ಕಳಾಯಿಲ್?

   ಬಾಬು ಕಳಾಯಿಲ್, ಅತೀಂದ್ರಿಯ ಶಕ್ತಿಯ ಕುರಿತು ಅಭ್ಯಸಿಸುತ್ತಿರುವ ಸಂಶೋಧಕ. ಬಿ.ಕೆ.ರೀಸರ್ಚ್ ಅಸೋಸಿಯೇಶನ್ ಎಂಬ ಸಂಸ್ಥೆ ಕಟ್ಟಿಕೊಂಡು ಅತೀಂದ್ರಿಯ ಶಕ್ತಿಯ ಮೂಲಕ ನೈಸರ್ಗಿಕ ವಿಕೋಪಗಳನ್ನು ಮುಂಚಿತವಾಗಿಯೇ ಪತ್ತೆಮಾಡುವುದು ಹೇಗೆ ಎಂಬ ಕುರಿತು ಅಭ್ಯಸಿಸುತ್ತಿದ್ದಾರೆ. ತಾವೊಬ್ಬ ವಿಜ್ಞಾನಿ ಎಂದು ಹೇಳಿಕೊಳ್ಳುವ ಇವರು, ಡಿಸೆಂಬರ್ 31 ರೊಳಗೆ ಭೀಕರ ನೈಸರ್ಗಿಕ ವಿಕೋಪ ಸಂಭವಿಸುತ್ತದೆಂಬುದನ್ನು ಗಂಭೀರವಾಗಿ ಹೇಳಿದ್ದಾರೆ.

   ಎಷ್ಟು ದೇಶಗಳಿಗೆ ಅಪ್ಪಳಿಸುತ್ತೆ ಸುನಾಮಿ?

   ಎಷ್ಟು ದೇಶಗಳಿಗೆ ಅಪ್ಪಳಿಸುತ್ತೆ ಸುನಾಮಿ?

   ಬಾಬು ಕಳಾಯಿಲ್ ನೀಡಿರುವ ಮಾಹಿತಿ ಪ್ರಕಾರ ಭಾರತ, ಚೀನಾ, ಜಪಾನ್, ಪಾಕಿಸ್ತಾನ್, ಬಾಂಗ್ಲಾದೇಶ, ನೇಪಾಳ, ಥೈಲೆಂಡ್, ಇಂಡೋನೇಶಿಯಾ, ಶ್ರೀಲಂಕಾ ಮುಂತಾದ ಒಟ್ಟು 11 ದೇಶಗಳು ಸುನಾಮಿಯನ್ನು ಎದುರಿಸಲಿವೆಯಂತೆ! ಈ ಸಂದರ್ಭದಲ್ಲಿ ಅತಿಯಾಗಿ ಮಳೆಯೂ ಬೀಳಲಿದ್ದು, ಗಂಟೆಗೆ 120 ರಿಂದ 180 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆಯಂತೆ!

   ಇದಕ್ಕೆ ವೈಜ್ಞಾನಿಕ ಅಧ್ಯನವಿದೆಯೇ?

   ಇದಕ್ಕೆ ವೈಜ್ಞಾನಿಕ ಅಧ್ಯನವಿದೆಯೇ?

   ಅವರು ಇವನ್ನೆಲ್ಲ ವೈಜ್ಞಾನಿಕವಾಗಿ ಅಭ್ಯಸಿಸಿ ಮಾಹಿತಿ ನೀಡಿದ್ದಾರಾ ಎಂದರೆ ಯಾರಿಗೂ ಗೊತ್ತಿಲ್ಲ. ಇಂಥ ವಿಷಯಗಳನ್ನು ಯಾವ ವೈಜ್ಞಾನಿಕ ತಳಹದಿಯಿಲ್ಲದೆ, ಕೇವಲ ಅತೀಂದ್ರಿಯ ಶಕ್ತಿಯ ಮೂಲಕ ಪತ್ತೆ ಮಾಡುವುದು, ಜನಸಾಮಾನ್ಯರಿಗೆಲ್ಲ ಸಾಧ್ಯವಿಲ್ಲ. ಆದ್ದರಿಂದ ಕಳಾಯಿಲ್ ಮಾತನ್ನು ಎಷ್ಟು ನಂಬುವುದು ಎಂಬುದು ಜನರಿಗೇ ಬಿಟ್ಟ ವಿಚಾರ!

   ಅತೀಂದ್ರಿಯ ಶಕ್ತಿ ಇರೋದು ನಿಜವೇ?

   ಅತೀಂದ್ರಿಯ ಶಕ್ತಿ ಇರೋದು ನಿಜವೇ?

   ಬಾಬು ಕಳಿಯಾಲ್ ಅವರಿಗೆ ಅತೀಂದ್ರಿಯ ಶಕ್ತಿ ಇರುವುದು ನಿಜವೇ? ಕೆಲವರು ಹೇಳುವ ಪ್ರಕಾರ ಅವರು ಇದುವರೆಗೂ ಹೇಳಿದ್ದೆಲ್ಲವೂ ಸತ್ಯವಾಗಿದೆ. 2001ರ ಆಗಸ್ಟ್ 2ಕ್ಕೆ ಬಾಬು ಅವರು, ಮಂಗಳ ಗ್ರಹದಲ್ಲಿ ನೀರಿದೆ ಎಂದಿದ್ದರು. ಅದಾಗಿ ಒಂದೇ ತಿಂಗಳಿನಲ್ಲಿ ವಿಜ್ಞಾನಿಗಳು ಅಲ್ಲಿ ನೀರನ್ನು ಪತ್ತೆ ಮಾಡಿದರು ಎನ್ನುತ್ತಾರೆ, ಡಾ.ರೇಣುಕಾ ಎನ್ನುವವರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Will 11 countries including India face massive earthquake and tsunami before December 31st, 2017? A scientist from Keral, Babu Kalayil gives earthquake warning and he has also sent a letter about it to Prime minister Narendra Modi.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ