ಕೇರಳ ಪ್ರವಾಹ : ದೇವರ ನಾಡಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ
ಆತ್ಮೀಯ ಓದುಗರೆ,
ಕರ್ನಾಟಕದ ಕರಾವಳಿ, ಮಲೆನಾಡು ಮತ್ತು 'ದೇವರ ನಾಡು' ಎಂದು ಕರೆಯಲಾಗುವ ಕೇರಳ ಕಳೆದೊಂದು ವಾರದಿಂದ ಹಿಂದೆಂದೂ ಕೇಳದಂತಹ ಪ್ರವಾಹದ ಹೊಡೆತಕ್ಕೆ ಸಿಕ್ಕಿದೆ. ಅದರಲ್ಲೂ ಕೇರಳದಲ್ಲಿ ಆಸ್ತಿಪಾಸ್ತಿ, ಪ್ರಾಣಕ್ಕೆ ಆಗಿರುವ ಹಾನಿ ಅಪಾರವಾದದ್ದು.
ಎಡೆಬಿಡದ ಮಳೆ, ಪ್ರವಾಹದಿಂದಾಗಿ ಇಲ್ಲಿಯವರೆಗೆ 75 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಎರ್ನಾಕುಲಂ ಜಿಲ್ಲೆಯಲ್ಲಿ 17,974 ಜನರನ್ನು ಸ್ಥಳಾಂತರಿಸಲಾಗಿದ್ದು, 117 ಪರಿಹಾರ ಕ್ಯಾಂಪ್ ಗಳನ್ನು ಆರಂಭಿಸಿದೆ.
ಇಂಧ ಸಂದರ್ಭದಲ್ಲಿ, ನಮ್ಮ ನೆರೆಯ ರಾಜ್ಯವಾಗಿರುವ ಕೇರಳದ ಸಹೋದರ, ಸಹೋದರಿಯರಿಗೆ ಅವರ ಬದುಕು ಮರುಕಟ್ಟಿಕೊಳ್ಳಲು ನಮ್ಮ ಸಹಾಯ ಬೇಕಾಗಿದೆ. ಕೇಳರಿಯದಂತಹ ಪ್ರಕೃತಿ ವಿರೋಪಕ್ಕೆ ನಲುಗಿರುವ ದೇವರ ನಾಡಿನ ಜನರಿಗೆ ಸಹಾಯ ಮಾಡಲು ನಮಗೊಂದು ಅವಕಾಶವನ್ನು ದೇವರೇ ಒದಗಿಸಿದ್ದಾನೆ.

ಪ್ರವಾಹದಲ್ಲಿ 20 ಸಾವಿರಕ್ಕೂ ಹೆಚ್ಚು ಮನೆಗಳು ಮತ್ತು 10 ಸಾವಿರ ಕಿ.ಮೀ.ಗೂ ಹೆಚ್ಚಿನ ರಸ್ತೆ ಸಂಪೂರ್ಣ ಹಾಳಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ಹಾನಿಯನ್ನು 8,351 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಸಂಕಷ್ಟದಲ್ಲಿರುವ ಜನರ ಬದುಕನ್ನು ಮರುಕಟ್ಟಲು ಸಹಾಯ ಮಾಡಿರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನೆರೆಯ ರಾಜ್ಯಗಳನ್ನು ಕೋರಿದ್ದಾರೆ.
Here's how you can help those affected by the unprecedented floods in Kerala. Now you can make donations online to Chief Minister's Distress Relief Fund through the site, https://t.co/OFHTHlZ9by #KeralaFloods #StandWithKerala. pic.twitter.com/XNlBKqdCUT
— CMO Kerala (@CMOKerala) 14 August 2018
ಅಗತ್ಯವಿರುವ ಜನರ ಕಲ್ಯಾಣಕ್ಕಾಗಿ ಇಷ್ಟವಿರುವವರು ದಾನ ಮಾಡಬಹುದಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯ ವಿವರಗಳು ಕೆಳಗಿನಂತಿವೆ.
Name of Donee : CMDRF
Account number : 67319948232
Bank: State Bank of India
Branch: City branch, Thiruvananthapuram
IFSC Code: SBIN0070028
Swift Code: SBININBBT08
keralacmrdf@sbi - UPI












Click it and Unblock the Notifications