19,000 ರೂಪಾಯಿ ತಲುಪುವ ಭೀತಿಯಲ್ಲಿ ಕಚ್ಚಾತೈಲ ಬೆಲೆ, ದಿಢೀರ್ ಪೆಟ್ರೋಲ್ & ಡೀಸೆಲ್ ಸಂಚಲನ... Crude Oil
ಇರಾನ್
ಮೇಲೆ ಸುಮ್ಮನೆ ಇರದೆ ದಾಳಿ ಮಾಡುತ್ತಿದೆ ಅಮೆರಿಕ ಹಾಗೂ ಇಸ್ರೇಲ್ ಎಂಬ ಆರೋಪವನ್ನ ಮಾಡುತ್ತಿವೆ ಜಗತ್ತಿನ ಹಲವು ದೇಶಗಳು. ಆದರೆ ನಮ್ಮ ಶತ್ರುಗಳ ನಾಶ ಗ್ಯಾರಂಟಿ ಎಂದು ಇಸ್ರೇಲ್ & ಅಮೆರಿಕ ನಾಯಕರು ಘೋಷಣೆ ಹೊರಡಿಸಿದ್ದಾರೆ. ಇದೇ ಕಾರಣಕ್ಕೆ ಮಧ್ಯಪ್ರಾಚ್ಯ ಬೆಂಕಿ ಬಿದ್ದಿರುವ ಮನೆಯಂತೆ ಆಗಿದ್ದು, ಅವರು ಇವರ ಮೇಲೆ & ಇವರು ಅವರ ಮೇಲೆ ಬಾಂಬ್ ದಾಳಿ ಮಾಡುತ್ತಾ ಭಾರಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಸಂಚಲನ ಸೃಷ್ಟಿಸುವ ಸಂಗತಿ ಬಯಲಾಗಿದ್ದು, ಕಚ್ಚಾತೈಲ ಬೆಲೆ ಕೈಗೆ ಸಿಗದಂತೆ ಏರಿಕೆ ಆಗುತ್ತಾ ಆಕಾಶ ಮುಟ್ಟುತ್ತಾ ಇದೆ. ಹೀಗಿದ್ದಾಗಲೇ ದಿಢೀರ್ 19,000 ರೂಪಾಯಿ ತಲುಪುವ ಭೀತಿಯಲ್ಲಿ ಕಚ್ಚಾತೈಲ ಬೆಲೆ ನಡುಕ ಹುಟ್ಟಿಸಿದೆ ಜಗತ್ತಿನ ದೊಡ್ಡ ದೊಡ್ಡ ದೇಶಗಳಿಗೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಪ್ರಪಂಚದಲ್ಲಿ
ಈಗಾಗಲೇ 1ನೇ ಮಹಾಯುದ್ಧ & 2ನೇ ಮಹಾಯುದ್ಧ ಎಂಬ ಘೋರ ಕಾಳಗ ನಡೆದು ಕೋಟಿ, ಕೋಟಿ ಜನರ ಜೀವ ಬಲಿಪಡೆದಿದ್ದೂ ಆಗಿದೆ. ಇದೇ ಕಾರಣಕ್ಕೆ ಪ್ರಪಂಚದಲ್ಲಿ ಮತ್ತೊಂದು ಮಹಾಯುದ್ಧ ನಡೆಯಬಾರದು ಎಂಬ ಉದ್ದೇಶ ಇಟ್ಟುಕೊಂಡು ಹಲವು ಕ್ರಮ ಕೈಗೊಂಡಿದ್ದರೂ, ಈ ಮನುಷ್ಯರು ಬಡಿದಾಡುತ್ತಾ ಇನ್ನೊಂದು ಮಹಾಯುದ್ಧದ ಗಡಿಗೆ ಬಂದು ನಿಂತಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವೆ ಶುರುವಾಗಿರುವ ಯುದ್ಧದ ಬೆಂಕಿಗೆ ಸಾವಿರಾರು ಜನರು ಈಗಾಗಲೇ ಜೀವ ಬಿಟ್ಟಿದ್ದು ಸಂಚಲನ ಸೃಷ್ಟಿಸಿದೆ. ಇಂತಹ ಸಮಯದಲ್ಲೇ ಮತ್ತೊಂದು ಮಹಾಯುದ್ಧಕ್ಕೆ ಅಗತ್ಯ ಇರುವ ಎಲ್ಲಾ ತಯಾರಿಗಳೂ ನಡೆಯುತ್ತಿರುವ ರೀತಿ ಭಾಸವಾಗುತ್ತಿದ್ದು, ಅಮೆರಿಕ ಸೇನೆ ಈಗ ಭೂದಾಳಿ ನಡೆಸಲು ಸಜ್ಜಾಗಿದೆ ಎಂಬ ಸುದ್ದಿ ಹಬ್ಬಿದೆ. ಈ ಘಟನೆ ಬೆನ್ನಲ್ಲೇ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ ದಿಢೀರ್ 111 ಡಾಲರ್ ಮೀರಿ ಹೋಗಿ ಆತಂಕ ಹೆಚ್ಚು ಮಾಡಿದೆ. id='are-slot-2' class='oiad oi-axt oiadv'>












Click it and Unblock the Notifications