Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್
Rishab Shetty: 'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಒಂದು ನಡೆ ಈಗ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ "ಓಂ, ಅಧ್ಯಾಯ ಎರಡು ಇಲ್ಲಿಂದ ಶುರು, ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು," ಎಂದು ಶುಭಕೋರುವ ಪೋಸ್ಟ್ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಸದಾ ಸಕ್ರಿಯರಿರುವ ರಿಷಬ್ ಅವರು, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯನ್ನು ಅನ್‌ಫಾಲೋ ಮಾಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇತ್ತೀಚೆಗಷ್ಟೇ ಯುಗಾದಿ ಹಬ್ಬದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮದೇ ಸ್ವಂತ ಬ್ಯಾನರ್ ಅಡಿಯಲ್ಲಿ 'ಚಾಪ್ಟರ್ 2' ಎಂಬ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು.

ಆದರೆ, ಈ ಪೋಸ್ಟರ್‌ನಲ್ಲಿ ಎಲ್ಲಿಯೂ 'ಕಾಂತಾರ' ಎಂಬ ಹೆಸರನ್ನು ಬಳಸಿಲ್ಲ. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ, 'ಕಾಂತಾರ: ಚಾಪ್ಟರ್ 1' ಬಿಡುಗಡೆಯಾದಾಗ ಎರಡನೇ ಭಾಗದ ಬಗ್ಗೆ ಸುಳಿವು ನೀಡಲಾಗಿತ್ತು. ಆದರೆ ಈಗಿನ ಘೋಷಣೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಹೆಸರಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಈ ಪೋಸ್ಟ್‌ರ್‌ನಲ್ಲಿ ಅಧ್ಯಾಯ ಎರಡು ಇಲ್ಲಿಂದ ಶುರು ಎಂದು ವರೆದುಕೊಂಡಿದ್ದಾರೆ.
ಏನಿದು 'ಚಾಪ್ಟರ್ 2' ಗುಟ್ಟು?
ರಿಷಬ್ ಶೆಟ್ಟಿ ನಿರ್ದೇಶನದ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರದ ಎರಡನೇ ಭಾಗವೇ ಈ 'ಚಾಪ್ಟರ್ 2' ಇರಬಹುದೇ ಎಂದು ಸಿನಿಮಾ ಪ್ರೇಮಿಗಳು ಊಹಿಸುತ್ತಿದ್ದಾರೆ. ಮತ್ತೊಂದೆಡೆ, ಅತ್ಯಂತ ಆಪ್ತ ಸಂಬಂಧ ಹೊಂದಿದ್ದ ಹೊಂಬಾಳೆ ಫಿಲ್ಮ್ಸ್ ಮತ್ತು ಕಾಂತಾರ ಅಧಿಕೃತ ಖಾತೆಗಳನ್ನು ರಿಷಬ್ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಹೊಸ ಗಾಳಿಸುದ್ದಿಗಳಿಗೆ ಕಾರಣವಾದ ರಿಷಬ್ ಪೋಸ್ಟ್
ನಿರ್ಮಾಣ ಸಂಸ್ಥೆ ಮತ್ತು ನಟನ ನಡುವೆ ವೈಮನಸ್ಸು ಉಂಟಾಗಿದೆಯೇ ಅಥವಾ ಇದು ಯಾವುದಾದರೂ ಹೊಸ ಸಿನಿಮಾದ ಪ್ರಚಾರದ ತಂತ್ರವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದರಲ್ಲೂ ಯುಗಾದಿ ಹಬ್ಬದ ದಿನವೇ ಈ ಪೋಸ್ಟ್ ಮಾಡಿದ್ದು, ಇದರಲ್ಲಿ ಕೊನೆಯಲ್ಲಿ ನಾಡಿನ ಎಲ್ಲಾ ಜನತೆಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿದ್ದಾರೆ. ಈ ಮೂಲಕ ಹೊಸ ದಾರಿಯ ಸೂಚನೆಯನ್ನು ಕೊಟ್ಟಿದ್ದಾರೆ ಎನ್ನುವ ಮಾತುಗಳನ್ನು ಮಾತುಗಳು ಸಹ ಕೇಳಿಬರುತ್ತಿವೆ.
ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರ ಈ ಚಾಪ್ಟರ್ 2 ಪೋಸ್ಟರ್ ಮತ್ತು ಅನ್‌ಫಾಲೋ ಮಾಡಿರುವ ನಡೆ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಗಾಳಿಸುದ್ದಿಗಳಿಗೆ ಕಾರಣವಾಗಿದೆ. ಈ ಬಗ್ಗೆ ರಿಷಬ್ ಅಥವಾ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಸ್ಪಷ್ಟನೆ ನೀಡುವವರೆಗೆ ಈ ಕುತೂಹಲ ಹೀಗೆಯೇ ಮುಂದುವರಿಯಲಿದೆ ಎನ್ನಲಾಗುತ್ತಿದೆ.












Click it and Unblock the Notifications