Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಚಿನ್ನದ ಬೆಲೆ ಇಂದು ಮತ್ತೆ ದಿಢೀರ್ ಏರಿಕೆ ಕಂಡಿದೆ. ಪ್ರಮುಖವಾಗಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,000 ಮೊತ್ತವನ್ನು ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ದರವು ಇಂದು ಹಠಾತ್ ಏರಿಕೆ ಕಂಡಿದ್ದು, 24 ಕ್ಯಾರೆಟ್ ಚಿನ್ನಕ್ಕೆ ಗ್ರಾಂ ಮೇಲೆ ₹65 ಏರಿಕೆಯಾಗಿದ್ದರೆ, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನಕ್ಕೆ ₹60 ರಷ್ಟು ಹೆಚ್ಚಳವಾಗಿದೆ. ಮದುವೆ ಸೀಸನ್ ಮತ್ತು ಹಬ್ಬಗಳ ಸಮಯದಲ್ಲೇ ಚಿನ್ನದ ಬೆಲೆ ಇಷ್ಟೊಂದು ಏರಿಕೆಯಾಗಿರುವುದು ಮಧ್ಯಮ ವರ್ಗದ ಜನರಲ್ಲಿ ಆತಂಕ ಮೂಡಿಸಿದೆ.
ಹೂಡಿಕೆದಾರರಿಗೆ ಇದು ಶುಭ ಸುದ್ದಿಯಾಗಿದ್ದರೂ, ಆಭರಣ ಖರೀದಿಸಲು ಯೋಜಿಸುತ್ತಿದ್ದ ಸಾಮಾನ್ಯ ಜನರಿಗೆ ಮಾತ್ರ ಬೆಲೆ ಏರಿಕೆಯ ಹೊರೆ ತಪ್ಪಿದ್ದಲ್ಲ. ಮಾರುಕಟ್ಟೆಯ ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಅಂತರಾಷ್ಟ್ರೀಯ ವಿದ್ಯಮಾನಗಳನ್ನು ಆಧರಿಸಿ ಬೆಲೆಯಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆ ಇದೆ. ಇಂದಿನ ಮಾರುಕಟ್ಟೆ ದರದ ಪ್ರಕಾರ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 65 ರೂಪಾಯಿ ಏರಿಕೆಯಾಗಿ 15,093 ರೂಪಾಯಿ ತಲುಪಿದೆ. ಇನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುವ 22 ಕ್ಯಾರೆಟ್ ಚಿನ್ನದ ಬೆಲೆಯು ಗ್ರಾಂಗೆ 60 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ 13,835 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ 18 ಕ್ಯಾರೆಟ್ ಚಿನ್ನದ ಬೆಲೆ ಕೂಡ 49 ರೂಪಾಯಿ ಏರಿಕೆ ಕಂಡು ಪ್ರತಿ ಗ್ರಾಂಗೆ 11,320 ರೂಪಾಯಿ ತಲುಪಿದೆ.

ಬೆಂಗಳೂರಿನಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹15,093 ತಲುಪಿದೆ. ನಿನ್ನೆ ಈ ದರ ₹15,028 ಇತ್ತು. ಇನ್ನು 10 ಗ್ರಾಂ ಚಿನ್ನದ ಬೆಲೆಯಲ್ಲಿ ₹650ರಷ್ಟು ಏರಿಕೆಯಾಗಿದ್ದು, ಪ್ರಸ್ತುತ ₹1,50,930ಕ್ಕೆ ಮಾರಾಟವಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಅಂದರೆ 100 ಗ್ರಾಂ ಚಿನ್ನ ಖರೀದಿಸುವವರಿಗೆ ಬರೋಬ್ಬರಿ ₹6,500ರಷ್ಟು ಬೆಲೆ ಏರಿಕೆಯ ಹೊರೆ ಬಿದ್ದಿದ್ದು, ಒಟ್ಟು ಬೆಲೆ ₹15,09,300 ತಲುಪಿದೆ.
1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 13,835 ರೂಪಾಯಿ ತಲುಪಿದೆ. ನಿನ್ನೆ ಈ ದರ 13,775 ರೂಪಾಯಿ ಇತ್ತು. ಇನ್ನು 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆಯಲ್ಲಿ 600 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಪ್ರಸ್ತುತ 1,38,350 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 1,37,750 ರೂಪಾಯಿಗಳಷ್ಟಿತ್ತು. 100 ಗ್ರಾಂ ಚಿನ್ನ ಖರೀದಿಸುವವರಿಗೆ ಬರೋಬ್ಬರಿ 6,000 ರೂಪಾಯಿಗಳಷ್ಟು ಬೆಲೆ ಏರಿಕೆಯ ಹೊರೆಬಿದ್ದಿದ್ದು, ಒಟ್ಟು ಬೆಲೆ 13,83,500 ರೂಪಾಯಿ ತಲುಪಿದೆ. ಯುಗಾದಿ ಹಬ್ಬದ ನಂತರದ ಈ ದಿನಗಳಲ್ಲಿ ಚಿನ್ನದ ಬೆಲೆ ಸತತವಾಗಿ ಏರಿಕೆ ಕಾಣುತ್ತಿರುವುದು ಹೊಸ ಆಭರಣ ಖರೀದಿಸಲು ಯೋಜಿಸುತ್ತಿದ್ದ ಜನರಿಗೆ ತುಸು ಆತಂಕ ಮೂಡಿಸಿದೆ.
18 ಕ್ಯಾರೆಟ್ ಚಿನ್ನದ ದರದಲ್ಲೂ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರಿಗೆ ತುಸು ನಿರಾಶೆಯಾಗಿದೆ. ಆಭರಣ ಖರೀದಿಸಲು ಬಯಸುವವರಿಗೆ ಇಂದು 18 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 49 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 11,320 ರೂಪಾಯಿ ತಲುಪಿದೆ. ನಿನ್ನೆ ಈ ದರ 11,271 ರೂಪಾಯಿ ಇತ್ತು. ಇನ್ನು 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 490 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಪ್ರಸ್ತುತ 1,13,200 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. 100 ಗ್ರಾಂ ಚಿನ್ನ ಖರೀದಿಸುವವರಿಗೆ ಬರೋಬ್ಬರಿ 4,900 ರೂಪಾಯಿಗಳಷ್ಟು ಬೆಲೆ ಏರಿಕೆಯ ಹೊರೆ ಬಿದ್ದಿದ್ದು, ಒಟ್ಟು ಬೆಲೆ 11,32,000 ರೂಪಾಯಿ ತಲುಪಿದೆ.
ಕಳೆದ ಒಂದು ವಾರದಿಂದ ಚಿನ್ನದ ದರವು ಭಾರೀ ಏರಿಳಿತಗಳನ್ನು ಕಾಣುತ್ತಿದ್ದು, ಗ್ರಾಹಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಚಿನ್ನದ ಬೆಲೆಯು ಸ್ಥಿರತೆಯನ್ನು ಕಾಣದೆ ದೊಡ್ಡ ಮಟ್ಟದ ವ್ಯತ್ಯಾಸಗಳನ್ನು ದಾಖಲಿಸಿದೆ. ಮಾರ್ಚ್ 17ರಂದು 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹15,808ರಷ್ಟು ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ, ಆನಂತರದ ಎರಡು ದಿನಗಳಲ್ಲಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿತ್ತು. ವಿಶೇಷವಾಗಿ ಮಾರ್ಚ್ 19ರಂದು ಒಂದೇ ದಿನ ಪ್ರತಿ ಗ್ರಾಂಗೆ ₹714ರಷ್ಟು ಭಾರೀ ಇಳಿಕೆ ಕಂಡುಬಂದಿದ್ದು, ಆಭರಣ ಖರೀದಿದಾರರಿಗೆ ತುಸು ಸಮಾಧಾನ ತಂದಿತ್ತು.
ಬೆಳ್ಳಿ ದರ ಎಷ್ಟಿದೆ?
ಇಂದು ಚಿನ್ನದ ದರ ಏರಿಕೆ ಕಂಡಿದ್ದರೆ, ಬೆಳ್ಳಿ ದರದಲ್ಲಿ ಮಾತ್ರ ಗಮನಾರ್ಹ ಇಳಿಕೆ ಕಂಡುಬಂದಿದೆ. ಕೈಗೆಟುಕುವ ದರದಲ್ಲಿ ಬೆಳ್ಳಿ ಖರೀದಿಸಲು ಬಯಸುವವರಿಗೆ ಇದು ತುಸು ಸಮಾಧಾನದ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 5 ರೂಪಾಯಿಗಳಷ್ಟು ಇಳಿಕೆಯಾಗಿದ್ದು, ಪ್ರಸ್ತುತ 255 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ನಿನ್ನೆ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 260 ರೂಪಾಯಿಗಳಷ್ಟಿತ್ತು. ಒಂದು ಕೆಜಿ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ 5,000 ರೂಪಾಯಿಗಳಷ್ಟು ಇಳಿಕೆಯಾಗಿದ್ದು, ಇಂದು ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ 2,55,000 ರೂಪಾಯಿ ತಲುಪಿದೆ. ನಿನ್ನೆ ಒಂದು ಕೆಜಿ ಬೆಳ್ಳಿಯ ಬೆಲೆ 2,60,000 ರೂಪಾಯಿಗಳಷ್ಟಿತ್ತು.
ಚಿನ್ನದ ದರ ಏರಿಕೆ ಕಂಡಿದ್ದರೆ, ಪ್ಲಾಟಿನಂ ದರದಲ್ಲಿ ಮಾತ್ರ ಇಳಿಕೆ ಕಂಡುಬಂದಿದೆ. ಐಷಾರಾಮಿ ಆಭರಣ ಪ್ರಿಯರಿಗೆ ಇದು ಸಿಹಿ ಸುದ್ದಿಯಾಗಿದ್ದು, ಪ್ಲಾಟಿನಂ ಬೆಲೆಯಲ್ಲಿ ಇಂದು ತುಸು ಇಳಿಕೆಯಾಗಿದೆ. ಇಂದಿನ ಮಾರುಕಟ್ಟೆ ದರದ ಪ್ರಕಾರ ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಪ್ಲಾಟಿನಂ ಬೆಲೆಯು 42 ರೂಪಾಯಿಗಳಷ್ಟು ಇಳಿಕೆಯಾಗಿದ್ದು, ಪ್ರಸ್ತುತ ₹6,022ಕ್ಕೆ ಮಾರಾಟವಾಗುತ್ತಿದೆ. ನಿನ್ನೆ ಪ್ರತಿ ಗ್ರಾಂ ಪ್ಲಾಟಿನಂ ಬೆಲೆ ₹6,064ರಷ್ಟಿತ್ತು. 10 ಗ್ರಾಂ ಪ್ಲಾಟಿನಂ ಖರೀದಿಸುವವರಿಗೆ ಬೆಲೆಯಲ್ಲಿ ₹420ರಷ್ಟು ಇಳಿಕೆಯ ಲಾಭ ಸಿಗಲಿದೆ. ಇಂದು ಮಾರುಕಟ್ಟೆಯಲ್ಲಿ 10 ಗ್ರಾಂ ಪ್ಲಾಟಿನಂ ಬೆಲೆ ₹60,220 ತಲುಪಿದೆ. ನಿನ್ನೆ ಇದು ₹60,640ರಷ್ಟಿತ್ತು.












Click it and Unblock the Notifications