ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮ ಪ್ರಶಸ್ತಿ : ತೂರಿಬಂದ ವಿಡಂಬನೆಯ ಟ್ವೀಕಾಸ್ತ್ರಗಳು

By Prasad
|
Google Oneindia Kannada News

ಬೆಂಗಳೂರು, ಜನವರಿ 25 : ಚರ್ಚೆಯ ವಿಷಯ ಯಾವುದೇ ಇರಲಿ, ಪರ ವಿರೋಧ, ವ್ಯಂಗ್ಯ ವಿಡಂಬನೆ, ಹಾಸ್ಯ ಪರಿಹಾಸ್ಯ, ಎತ್ತು ಏರಿಗೆ ಎಮ್ಮೆ ನೀರಿಗೆ ಎನ್ನುವಂತಹ ಕಟು ಟೀಕೆಟಿಪ್ಪಣಿಗಳಿಲ್ಲದಿದ್ದರೆ ಟ್ವಿಟ್ಟರ್ ಸಪ್ಪೆ ವಾರ್ತಾಪತ್ರದಂತಿರುತ್ತದೆ. ಇದೀಗ ತಾನೆ ಪ್ರಕಟವಾಗಿರುವ ಪದ್ಮ ಪ್ರಶಸ್ತಿಗಳು ಕೂಡ ಇದಕ್ಕೆ ಹೊರತಲ್ಲ.

"ಅಂತೂ ನಮ್ಮ 'ಬಾಸ್' ಪ್ರಶಸ್ತಿಗೆ ಪಾತ್ರರಾದರು..." ಎಂಬಂತಹ ಹೊಗಳಿಕೆಯ ಮಾತುಗಳಿಂದ ಹಿಡಿದು "ಪ್ರಶಸ್ತಿ ಪಡೆದವರು, ಈ ಪ್ರಶಸ್ತಿ ವಾಪಸ್ ಮಾಡಲ್ಲ ಎಂದು ಸರಕಾರಕ್ಕೆ ಅಫಿಡವಿಟ್ ಬರೆದುಕೊಡಬೇಕು..." ಎಂಬಂತಹ ವಿಡಂಬನಾತ್ಮಕ ಚೂಪಾದ ವಾಗ್ಬಾಣಗಳು ಟ್ವಿಟ್ಟರಲ್ಲಿ ಹರಿದಾಡುತ್ತಿವೆ.

ಕೇಂದ್ರ ಸರಕಾರವನ್ನು ಉಘೇ ಉಘೇ ಎಂದವರಿಗೆ ಪದ್ಮ ಪ್ರಶಸ್ತಿ ಹುಡುಕುಡುಕಿಕೊಂಡು ಬಂದಿವೆ ಎಂದು ಹಲವಾರು ಟ್ವೀಟುಗಳು ಕುಟುಕುತ್ತಿದ್ದು, #PadmaAward4Bhakts ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.

ಇದನ್ನೆಲ್ಲ ನೋಡಿದ ಪ್ರಶಸ್ತಿ ಸ್ವೀಕರಿಸುವವರಿಗೆ ಮಾತ್ರ ಧರ್ಮಸಂಕಟ. ಇಸ್ಕೊಳ್ಳೋ ಬೇಡ್ವೋ, ಮುಂದೆ ಟೀಕೆಗಳು ಬಂದರೆ ಏನು ಗತಿ ಎಂಬಂತಹ ಪರಿಸ್ಥಿತಿ. ಇಷ್ಟರಲ್ಲೇ ಕೆಲವೊಂದು ವಾಪಸಾತಿಗಳು ಆದರೂ ಅಚ್ಚರಿಯಿಲ್ಲ. ಏನೇ ಆಗಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪಡೆದ ಸತ್ಪಾತ್ರರಿಗೆ ಅಭಿನಂದನೆಗಳು, ತಪ್ಪಿಸಿಕೊಂಡವರಿಗೆ ಬೆಟರ್ ಲಕ್ ನೆಕ್ಸ್ಟ್ ಟೈಮ್!

ಇನ್ನು, ಎಂತೆಂತಹ ಟ್ವೀಟೋಕ್ತಿಗಳು, ವಾಗ್ಝರಿಗಳು, ಕಾಲೆಳೆಯುವ ಮಾತುಗಳು, ಚಾಟಿಏಟುಗಳು ಬಂದಿವೆ ಎಂಬುದನ್ನು ಮುಂದೆ ಓದಿರಿ. [ರಜನಿಕಾಂತ್, ರವಿಶಂಕರ್ ಗುರೂಜಿಗೆ ಪದ್ಮ ವಿಭೂಷಣ ಪ್ರಶಸ್ತಿ]

ರಾಮದೇವ್, ಅರ್ನಬ್ ಅವರಿಗೆ ಭಾರತರತ್ನ

ಬಾಬಾ ರಾಮದೇವ್ ಮತ್ತು ಅರ್ನಬ್ ಅವರನ್ನು ಪದ್ಮ ಪಟ್ಟಿಯಿಂದ ಹೊರಗಿರುವುದು ಆಶ್ಚರ್ಯಕರ. ಬಹುಶಃ ಅವರಿಗೆ ಭಾರತ ರತ್ನ ನೀಡಬಹುದೇನೋ!

ಪದ್ಮ ಪ್ರಶಸ್ತಿ ಪಟ್ಟಿ ನೋಡಿ ಆಶ್ಚರ್ಯವಾಗಿಲ್ಲ

ಪದ್ಮ ಪ್ರಶಸ್ತಿ ಪಟ್ಟಿ ನೋಡಿ ಆಶ್ಚರ್ಯವಾಗಿಲ್ಲ. ಮೋದಿ ಸರಕಾರ ಯುಪಿಎ ಸರಕಾರವನ್ನೇ ಅನುಸರಿಸುತ್ತಿದೆ. ತನ್ನ ಸೆಲೆಬ್ರಿಟಿ ಬೆಂಬಲಿಗರಿಗೆ ನೀಡಬೇಕಾದ್ದನ್ನು ನೀಡುತ್ತಿದೆ.

ಅತ್ಯಾಚಾರ ಆರೋಪಿ ಮಧುರ್ ಅವರಿಗೆ ಪದ್ಮ

ಅತ್ಯಾಚಾರ ಆರೋಪಿ ಮಧುರ್ ಭಂಡಾರ್ಕರ್ ಅವರಿಗೆ ಪದ್ಮ ಪ್ರಶಸ್ತಿ ಸಿಕ್ಕಿದೆ. ಇದು ಮೋದಿ ಸರಕಾರದಿಂದ ಮಾತ್ರ ಸಾಧ್ಯ!

ಅಪ್ಪ (ರಜನಿಕಾಂತ್) ಈಗ ಪದ್ಮ ವಿಭೂಷಣ

ಹೆಮ್ಮೆಯ ಮಗಳು! ಅಪ್ಪ (ರಜನಿಕಾಂತ್) ಈಗ ಪದ್ಮ ವಿಭೂಷಣ

ಪದ್ಮ ಇನ್ನು ಮುಂದೆ ಸಹಿಷ್ಣುತೆ ಪ್ರಶಸ್ತಿ

ಪದ್ಮ ಪ್ರಶಸ್ತಿಗಳನ್ನು ಇನ್ನು ಮುಂದೆ ಸಹಿಷ್ಣುತೆ ಪ್ರಶಸ್ತಿ ಎಂದು ಮರುನಾಮಕರಣ ಮಾಡಬೇಕು! ರವೀನಾ ಟಂಡನ್ ಅವರನ್ನೇಕೆ ಕಡೆಗಣಿಸಲಾಗಿದೆ? ಇದು ಸರಿಯಲ್ಲ. ಅನುಪಮ್ ಖೇರ್ ಮತ್ತು ಮಧುರ್ ಭಂಡಾರ್ಕರ್ ಅವರು 'ಬಾಸ್' ಶಾ ಅವರನ್ನೇ ಕೇಳಬೇಕು.

ಏನು ಬೇಕಾದ್ದರೂ ಆಗಬಹುದು!

ಏನು ಬೇಕಾದ್ದರೂ ಆಗಬಹುದು! ಇದು, ಪದ್ಮ ಪ್ರಶಸ್ತಿ ಘೋಷಣೆಯಾದ ನಂತರ ಅನುಪಮ್ ಖೇರ್ ಅವರ ಪ್ರತಿಕ್ರಿಯೆ!!

English summary
Funny and not so funny tweets for Padma Awards 2016. #PadmaAward4Bhakts is trending on Twitter. Tweeples are making mockery of award to some people who went one step ahead to appease the union government. Anyway, congratulations to all the well deserving recipients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X