ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಜೋರಾಂ ಸಮೀಕ್ಷೆ: ಈಶಾನ್ಯ ರಾಜ್ಯಗಳ ಕೊನೆಯ ಕೊಂಡಿಯನ್ನೂ ಕಳಚಿಕೊಂಡೀತೆ ಕಾಂಗ್ರೆಸ್

|
Google Oneindia Kannada News

ಪುಟ್ಟ ರಾಜ್ಯ್ ಮಿಜೋರಾಂನಲ್ಲಿ ಈ ತನಕ ಬಿಜೆಪಿಗೆ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ನವೆಂಬರ್ 28ನೇ ತಾರೀಕು ಇಲ್ಲಿ ಮತದಾನ ಮುಕ್ತಾಯ ಆಗಿದೆ. ಒಟ್ಟು 7.68 ಲಕ್ಷ ಮತದಾರರ ಪೈಕಿ ಶೇ 73ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಇನ್ನೇನು ಚುನಾವಣೆ ಫಲಿತಾಂಶ ಡಿಸೆಂಬರ್ 11ನೇ ತಾರೀಕು ಉಳಿದ ನಾಲ್ಕು ರಾಜ್ಯಗಳ (ತೆಲಂಗಾಣ, ರಾಜಸ್ತಾನ, ಛತ್ತೀಸಗಢ, ಮಧ್ಯಪ್ರದೇಶ) ಫಲಿತಾಂಶದ ಜೊತೆಗೆ ಹೊರಬರಲಿದೆ.

ಈಶಾನ್ಯ ರಾಜ್ಯಗಳು ಎಂದು ಕರೆಯುವ ಎಂಟು ರಾಜ್ಯಗಳ ಪೈಕಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕೊನೆಯ ರಾಜ್ಯವಿದು. ಇಲ್ಲಿ ಕಾಂಗ್ರೆಸ್ ಸತತವಾಗಿ ಅಧಿಕಾರ ಹಿಡಿಯುತ್ತಿದೆ. ಸದ್ಯಕ್ಕೆ ಅಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರೂ ಆದ ಲಾಲ್ ಥನ್ ಹವ್ಲಾ ಮೂರನೇ ಅವಧಿಗೆ ಆಯ್ಕೆ ಆಗುವ ಗುರಿ ಇರಿಸಿಕೊಂಡಿದ್ದಾರೆ.

ಆದರೆ, ಅದೇನೂ ಅಷ್ಟು ಸಲೀಸಿಲ್ಲ. ಏಕೆಂದರೆ ಝೋರ್ಮ್ ಥಂಗಾ ನೇತೃತ್ವದಲ್ಲಿ ಪ್ರಮುಖ ವಿರೋಧ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ ಎಫ್) ಪ್ರಬಲವಾದ ಪೈಪೋಟಿಯನ್ನೇ ನೀಡಲಿದೆ. ಎರಡೂ ಪಕ್ಷಗಳು ಇಲ್ಲಿನ 40 ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಇನ್ನು ಭಾರತೀಯ ಜನತಾ ಪಕ್ಷದಿಂದ 39 ಸ್ಥಾನಗಳಲ್ಲಿ ಸ್ಪರ್ಧೆಗೆ ಇಳಿಯಲಾಗಿದೆ.

ವಿಧಾನಸಭಾ ಸ್ಪೀಕರ್ ಆಗಿದ್ದ ಹಿಫೈ ಅವರು ಕಾಂಗ್ರೆಸ್ ನ ಹಿರಿಯ ನಾಯಕರು. ಆದರೆ ತನಗೆ ಪಕ್ಷದಿಂದ ಸ್ಪರ್ಧೆಗೆ ಅವಕಾಶ ಸಿಗಲಾರದು ಎಂದು ಆರೋಪಿಸಿ, ಮತದಾನಕ್ಕೆ ಮೂರು ವಾರ ಇರುವಂತೆ ರಾಜೀನಾಮೆ ನೀಡಿದ್ದರು. ಹಿಫೈ ಬಿಜೆಪಿಯನ್ನು ಸೇರಬಹುದು ಎಂಬ ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ಟಿ.ರೋಖ್ವಾರಿಗೆ ಹಿಫೈ ಪ್ರತಿನಿಧಿಸುತ್ತಿದ್ದ ಪಾಲಕ್ ಕ್ಷೇತ್ರದಿಂದ ಟಿಕೆಟ್ ನೀಡಲಾಯಿತು.

Exit poll : Mizoram assembly elections 2018

40 ಸ್ಥಾನಗಳ ವಿಧಾನಸಭೆಯಲ್ಲಿ ಯಾವ ಪಕ್ಷಗಳ ಪಲ ಎಷ್ಟಿತ್ತು ಅಂದರೆ, ಕಾಂಗ್ರೆಸ್ 34, ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ ಎಫ್) 5 ಮತ್ತು ಇತರರು 1 ಸ್ಥಾನ ಪಡೆದಿದ್ದರು.

ಇನ್ನು ಮತದಾನೋತ್ತರ ಸಮೀಕ್ಷೆಯಲ್ಲಿ ಮಿಜೋರಾಂ ಬಗ್ಗೆ ಯಾವ ಮಾಧ್ಯಮ ಅಥವಾ ಸಂಸ್ಥೆಗಳು ಏನು ಹೇಳುತ್ತಿವೆ ಎಂಬುದರ ವಿವರ ಇಲ್ಲಿದೆ:

ಒಟ್ಟು 40 ವಿಧಾನಸಭಾ ಕ್ಷೇತ್ರಗಳು (ಬಹುಮತಕ್ಕೆ ಬೇಕಾದ ಸ್ಥಾನಗಳು 21)
ಜನ್ ಕೀ ಬಾತ್ ಸಮೀಕ್ಷೆ

ಕಾಂಗ್ರೆಸ್ 14-18

ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ ಎಫ್) 16-20

ಇತರರು 0-3

ರಿಪಬ್ಲಿಕ್ ಮತ್ತು ಸಿ ವೋಟರ್ಸ್

ಕಾಂಗ್ರೆಸ್ 14-18

ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ ಎಫ್) 16-20

ಇತರರು 3- 10

ಟೈಮ್ಸ್ ನೌ- ಸಿಎನ್ ಎಕ್ಸ್

ಕಾಂಗ್ರೆಸ್ 16

ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ ಎಫ್) 18

ಇತರರು 6

English summary
Mizoram assembly elections 2018 : Exit poll for the 40 seat assembly poll is out today(December 07). Magic number required to form the government is 21. Congress may lose power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X