ಸೈಕ್ಲೋನ್ ಪೀಡಿತ ಪ್ರದೇಶದಲ್ಲೇ ಇರುತ್ತೇನೆ, ಎಲ್ಲೂ ಹೋಗೋಲ್ಲ: ದೀದಿ

ಖರ್ಗ್ಪುರ(ಪಶ್ಚಿಮ ಬಂಗಾಳ), ಮೇ 03: ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಿರುವ ಚಂಡಮಾರುದಿಂದಾಗಿ ಈ ರಾಜ್ಯಗಳಲ್ಲಿ ಎಲ್ಲಾ ರೀತಿಯ ರಾಜಕೀಯ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ.

ಸಮಾವೇಶಗಳು ರದ್ದಾಗಿದ್ದರೂ, ಪಶ್ಚಿಮ ಬಂಗಾಳದ ಕರಾವಳಿಯ ಖರ್ಗ್ಪುರದಲ್ಲಿಯೇ ಇನ್ನೆರಡು ದಿನ ನೆಲೆಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

"ನಾವು ಸೈಕ್ಲೋನ್ ಫೋನಿಯಿಂದ ಉಂಟಾಗುತ್ತಿರುವ ಎಲ್ಲಾ ಸಮಸ್ಯೆಗಳ ನಿವಾರಣೆಗೂ 24x7 ರಕ್ಷಣಾ ಕಾರ್ಯ ನಡೆಸುತ್ತಿದ್ದೇವೆ. ಎಲ್ಲರೂ ತಂತಮ್ಮ ಮನೆಯಲ್ಲೇ ಇದ್ದು, ಸುರಕ್ಷಿತವಾಗಿರಬೇಕು ಎಂದು ನಾನು ಮನವಿ ಮಾಡುತ್ತೇನೆ. ಎರಡು ದಿನಗಳ ಕಾಲ ನಾನು ಖರ್ಗ್ಪುರ ಕರಾವಳಿಯಲ್ಲೇ ಇರುತ್ತೇನೆ. ಚಂಡಮಾರುತ ಮರೆಯಾದ ಮೇಲೆ ನಾನೂ ವಾಪಸ್ ನನ್ನ ಕೆಲಸಗಳಿಗೆ ಮರಳುತ್ತೇನೆ" ಎಂದು ದೀದಿ ಹೇಳಿದ್ದಾರೆ.

Cyclone Fani: Wont leave till cyclone does: Mamata Banerjee

ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ಎದ್ದಿರುವ ಫೋನಿ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗಳು ತತ್ತರಿಸಿವೆ. ಈಗಾಗಲೇ ಇಬ್ಬರು ಈ ಸೈಕ್ಲೋನ್ ಹಾವಳಿಗೆ ಮೃತರಾಗಿದ್ದಾತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+