ಅಸ್ಸಾಮಿನಲ್ಲಿ ಉಗ್ರರ ಅಟ್ಟಹಾಸ, 14 ಜನ ಅಮಾಯಕರ ಬಲಿ

Posted By:
Subscribe to Oneindia Kannada

ಗುವಹಾಟಿ, ಆಗಸ್ಟ್ 05: ಅಸ್ಸಾಮಿನ ಕೊಕ್ರಜಾರಿನ ಮಾರುಕಟ್ಟೆಯಲ್ಲಿ ಉಗ್ರರು ಶುಕ್ರವಾರ ಹಠಾತ್ ದಾಳಿ ನಡೆಸಿ 12 ಮಂದಿ ನಾಗರಿಕರನ್ನು ಕೊಂದು ಹಾಕಿದ್ದಾರೆ.

ಭದ್ರತಾ ಪಡೆ ಹಾಗೂ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಉಗ್ರಗಾಮಿಗಳ ಜೊತೆ ಗುಂಡಿನ ಘರ್ಷಣೆಯಲ್ಲಿ ಒಬ್ಬ ಉಗ್ರಗಾಮಿ ಗುಂಡೇಟಿಗೆ ಬಲಿಯಾಗಿದ್ದಾನೆ. ಮುರ್ನಾಲ್ಕು ಉಗ್ರರು ಗ್ರೇನೆಡ್ ಬಳಿ ದಾಳಿ ನಡೆಸಿದ್ದು, ಮಾರುಕಟ್ಟೆ ಪ್ರದೇಶದ ಮೂರು ಅಂಗಡಿಗಳು ಧ್ವಂಸವಾಗಿದೆ.

At least 14 killed in Asaam militant attack

ಕೊಕ್ರಜಾರಿನಿಂದ 8 ಕಿಮೀ. ದೂರದ ಬಲಜನ್ ತೆನಾಲಿ ಮಾರುಕಟ್ಟೆ ಪ್ರದೇಶದಲ್ಲಿ ಮೂವರು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸದ್ಯದ ಮಾಹಿತಿಯಂತೆ 13ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಘಟನೆಯಲ್ಲಿ 18 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

ಉಗ್ರಗಾಮಿಗಳು ಬೋಡೋ ಸಂಘಟನೆಗೆ ಸೇರಿದವರೆಂದು ಶಂಕಿಸಲಾಗಿದ್ದು ಅವರು ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್​ಐಎ) ಬೆದರಿಕೆ ಹಾಕಿದ್ದರು ಎಂದು ಸುದ್ದಿಮೂಲಗಳು ತಿಳಿಸಿವೆ.


ಒಟ್ಟು ಐದರಿಂದ ಏಳು ಮಂದಿ ಉಗ್ರಗಾಮಿಗಳು ಆಟೋರಿಕ್ಷಾ ಒಂದರಲ್ಲಿ ಮಾರುಕಟ್ಟೆಗೆ ಬಂದು ದಾಳಿ ಆರಂಭಿಸಿದರು ಎಂದು ವರದಿಗಳು ಹೇಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 12 people have been killed and 15 others were injured when militants opened fire in a market in Kokrajhar district in Assam.
Please Wait while comments are loading...