• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಯಲಾದ ಗುಟ್ಟಿನ ಮದುವೆ: ತಾಳಿ ಕಟ್ಟಿದ ಮಹಿಳೆಯೊಂದಿಗೆ ಯೋಧ ಆತ್ಮಹತ್ಯೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ನವೆಂಬರ್ 11 : ವಿಧವೆಯೊಬ್ಬಳೊಂದಿಗೆ ಜೊತೆ ಸ್ನೇಹ ಬೆಳೆಸಿ, ಅದು ಪ್ರೇಮಕ್ಕೆ ತಿರುಗಿದ ನಂತರ ಬಾಳು ಕೊಡುವುದಾಗಿ ಯಾರಿಗೂ ತಿಳಿಯದಂತೆ ನಾಲ್ಕು ಗೋಡೆಯ ಮಧ್ಯೆ ತಾಳಿಕಟ್ಟದ ಯೋಧ ಹಾಗೂ ವಿವಾಹವಾಗಿದ್ದ ಮಹಿಳೆ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಗರದ ಎಂ.ಹೊಸಕೊಪ್ಪಲು ನಿವಾಸಿ ಆಶಾ ಮತ್ತು ತಾಲೂಕಿನ ಮುತ್ತಿಗೆ ಗ್ರಾಮದ ಕಿರಣ್ ಕುಮಾರ್ ಇಬ್ಬರೂ ಶಾಂತಿಗ್ರಾಮ ಬಳಿಯ ಅರಣ್ಯದಲ್ಲಿ ಒಂದೇ ಮರದಲ್ಲಿ ನೇಣಿಗೆ ಶರಣಾಗಿದ್ದು, ಮದುವೆ ಪುರಾಣ ದುರಂತ ಅಂತ್ಯ ಕಂಡಿದೆ.

ಕಳವಿಭಾಗಿ ಗ್ರಾಮದಲ್ಲಿ 85 ವರ್ಷದ ಅಜ್ಜಿಗೆ ವಂಚಿಸಿದ ಕುರಿಗಾಹಿ ಕುಟುಂಬಕಳವಿಭಾಗಿ ಗ್ರಾಮದಲ್ಲಿ 85 ವರ್ಷದ ಅಜ್ಜಿಗೆ ವಂಚಿಸಿದ ಕುರಿಗಾಹಿ ಕುಟುಂಬ

ಕಳೆದ 10 ವಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವಿವಾಹಿತ ಕಿರಣ್ ಕುಮಾರ್, ರಜೆ ಮೇಲೆ ಊರಿಗೆ ಬಂದಾಗ, ಮೂರು ವರ್ಷದ ಹಿಂದೆ ಆಶಾಳ ಪರಿಚಯವಾಗಿದೆ. ಆಶಾಳ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು, ಪದವಿ ಮುಗಿಸಿರುವ ಮಗಳು ಮತ್ತು 7ನೇ ತರಗತಿ ಓದುತ್ತಿರುವ ಮಗ ಇದ್ದಾರೆ. ಆದರೂ ಆಕೆಯೊಂದಿಗಿನ ಆರಂಭದ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿದೆ.

ನಂತರ ನಿನ್ನನ್ನು ನಂಬುವುದು ಹೇಗೆ ಎಂದು ಆಶಾ ಪ್ರಶ್ನೆ ಮಾಡಿದಾಗ, ಇಲ್ಲ ಇಲ್ಲ ನಾನು ಕಡೆವರೆಗೂ ನಿನ್ನ ಜೊತೆಯಲ್ಲೇ ಇರುವೆ ಎಂದು ನಂಬಿಸಿ ದೇವರ ಫೋಟೋ ಮುಂದೆ ನಾಲ್ಕು ಗೋಡೆಯ ಮಧ್ಯೆ ಕಿರಣ್‌ಕುಮಾರ್, ಆಶಾಳಿಗೆ ತಾಳಿ ಕಟ್ಟಿ ಆಕೆಯೊಂದಿಗೆ ಸಂಸಾರ ಮಾಡಲು ಆರಂಭಿಸಿದ್ದ. ಆದರೆ ಮನೆಯವರಿಗೆ ಹೆದರಿ, ಈ ವಿಷಯವನ್ನು ಅವರಿಗೆ ಹೇಳಿರಲಿಲ್ಲ ಎಂದು ತಿಳಿದುಬಂದಿದೆ.

ಕೆಡಿಪಿ ಸಭೆ: ರೇವಣ್ಣ - ಪ್ರೀತಂ ಗೌಡ ನಡುವೆ ಮಾತಿನ ಚಕಮಕಿಕೆಡಿಪಿ ಸಭೆ: ರೇವಣ್ಣ - ಪ್ರೀತಂ ಗೌಡ ನಡುವೆ ಮಾತಿನ ಚಕಮಕಿ

ಮದುವೆ ಮನೆಯಲ್ಲಿ ಗಲಾಟೆ

ಈ ನಡುವೆ ಮನೆಯವರು ಕಿರಣ್‌ಗೆ ಮದುವೆ ಮಾಡಲು ನಿರ್ಧರಿಸಿ ಹುಡುಗಿಯನ್ನೂ ಗೊತ್ತು ಮಾಡಿ ಗುರುವಾರ ನಗರದ ಹೊರ ವಲಯದ ಸಾಧನಾ ಕಲ್ಯಾಣ ಮಂಟಪದಲ್ಲಿ ವಿವಾಹ ನಿಶ್ಚಯ ಮಾಡಿದ್ದರು. ಇದಕ್ಕೆ ಮರು ಮಾತನಾಡದ ಕಿರಣ್, ಮನೆಯವರ ಒತ್ತಡಕ್ಕೆ ಮಣಿದು ಇನ್ನೊಂದು ಮದುವೆಗೆ ಓಕೆ ಎಂದಿದ್ದ. ಎಲ್ಲರ ಸಮ್ಮುಖದಲ್ಲಿ ಮದುವೆ ನಡೆಯುವ ವೇಳೆ ವಿಷಯ ತಿಳಿದು ಎಂಟ್ರಿಕೊಟ್ಟ ಆಶಾ, ಮೊದಲ ಮದುವೆ ಗುಟ್ಟನ್ನು ರಟ್ಟು ಮಾಡಿದ್ದಳು. ಕಿರಣ್ ನನ್ನನ್ನು ಮದುವೆಯಾಗಿದ್ದು, ತಿಂಗಳುಕಟ್ಟಲೆ ಸಂಸಾರ ನಡೆಸಿ ನಂತರ ಕರ್ತವ್ಯಕ್ಕೆ ತೆರಳಿದ್ದ. ಆರು ತಿಂಗಳ ಬಳಿಕ ರಜೆ ಮೇಲೆ ಬಂದು ಮತ್ತೊಂದು ಮದುವೆ ತಯಾರಾಗಿದ್ದಾನೆ ಎಂದು ದೂರಿದ್ದಳು.

ವಿವಾಹ ಗುಟ್ಟಾಗಿಡಲು 2 ಲಕ್ಷ ರೂ ಒಪ್ಪಂದ

ಎರಡನೇ ಮದುವೆಯಾಗುವುದಾಗಿ ಕಿರಣ್ ಆಶಾಗೆ ತಿಳಿಸಿದ್ದು, ಮದುವೆ ಮನೆಗೆ ಬಂದು ಗಲಾಟೆ ಮಾಡದಂತೆ ತಾಕೀತು ಮಾಡಿ 2 ಲಕ್ಷ ರೂ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಹಣ ತಲುಪದ ಕಾರಣ ಮೊದಲ ಹೆಂಡತಿ ಆಶಾ ಈ ವಿಚಾರವನ್ನು ಮದುವೆ ಮನೆಗೆ ಬಂದು ಬಹಿರಂಗಪಡಿಸಿದ್ದಾಳೆ. ಇವರಿಬ್ಬರ ಒಪ್ಪಂದವೂ ಕೇವಲ ಮೊಬೈಲ್ ಸಂದೇಶದಲ್ಲಿಯೇ ಆಗಿತ್ತು ಎನ್ನಲಾಗಿದೆ. ಇನ್ನು ಈ ಘಟನೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ನವವಿವಾಹಿತ ಯೋಧ ಕಿರಣ್ ಮತ್ತು ಆಶಾರನ್ನು ಪೊಲೀಸರು ತನಿಖೆ ಮಾಡಲು ಠಾಣೆ ಕರೆದೊಯ್ದಿದ್ದರು. ಜೊತೆಗೆ ಪೋಷಕರನ್ನು ಕೂಡಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

Soldier and his Wife Committed Suicide after the Secret Marriage was Exposed in Hosakoppalu

ಮದುವೆ ಮನೆಯಲ್ಲಿ ರಂಪಾಟ ನಡೆದ ನಂತರವೂ ಕಿರಣ್ ಕುಮಾರ್ ಮತ್ತು ಆಶಾ ಜೊತೆಯಾಗಿ ಹೋಗಿ ಅರಣ್ಯದ ಮಧ್ಯೆ ಮರವೊಂದಕ್ಕೆ ಪ್ರತ್ಯೇಕವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ. ಇಬ್ಬರೂ ಗುರುವಾರ ಧರಿಸಿದ್ದ ಬಟ್ಟೆಯಲ್ಲೇ ನೇಣಿಗೆ ಶರಣಾಗಿದ್ದು, ಅಂದು ರಾತ್ರಿಯೇ ಸಾಯುವ ನಿರ್ಧಾರ ಮಾಡಿರುವ ಶಂಕೆ ಮೂಡಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಶಾಂತಿಗ್ರಾಮ ಪೊಲೀಸರು, ಮೃತದೇಹಗಳನ್ನು ಕೆಳಗಿಳಿಸಿ, ಹಿಮ್ಸ್ ಆಸ್ಪತ್ರೆಗೆ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇಶ ಕಾಯುವ ಹೆಮ್ಮೆಯ ಸೇವೆಗೆ ಸೇರಿ ಸಾರ್ವಜನಿಕವಾಗಿ ಅಪಾರ ಹೆಮ್ಮೆ ಗೌರವ ಸಂಪಾದನೆ ಮಾಡಿದ್ದ ಕಿರಣ್ ಕುಮಾರ್, ವೈಯಕ್ತಿಕವಾಗಿ ಏನೋ ಮಾಡಲು ಹೋಗಿ ಹೆಣವಾಗಿರುವುದು ಆತನ ಮನೆಯವರು, ಸಂಬಂಧಿಕರಲ್ಲಿ ಮುಜುಗರ ತರಿಸಿದೆ. ಮತ್ತೊಂದೆಡೆ ತಂದೆ ಗತಿಸಿದ ನಂತರ ತಾಯಿಯೇ ಸರ್ವಸ್ವ ಎಂದುಕೊಂಡಿದ್ದ ಆಶಾಳ ಇಬ್ಬರು ಮಕ್ಕಳು ಈಗ ಅನಾಥವಾಗಿದ್ದಾರೆ. ಹೆಣ್ಣು ಹಠಕ್ಕೆ ಬಿದ್ದರೆ, ಗಂಡು ತನ್ನ ನಿರ್ಧಾರದಲ್ಲಿ ಎಡವಿದರೆ ಏನೆಲ್ಲಾ ಆಗಲಿದೆ ಎಂಬುದಕ್ಕೆ ಈ ದುರಂತ ಸಾಕ್ಷಿಯಾಗಿದೆ.

English summary
A soldier and his wife committed suicide after the secret marriage was exposed in Hosakoppalu, Hassan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X