ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡದಲ್ಲಿ ಬರೆದ ಚೆಕ್ ತಿರಸ್ಕಾರ: ಹಳಿಯಾಳದ SBIಗೆ 85,177 ರೂ ದಂಡ

|
Google Oneindia Kannada News

ಧಾರವಾಡ, ಸೆಪ್ಟೆಂಬರ್‌, 08: ಕನ್ನಡದಲ್ಲಿ ಬರೆದ ಚೆಕ್ ಅನ್ನು ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ದಂಡ ಪಾವತಿಸಲು ಆದೇಶ ಮಾಡಲಾಗಿದೆ. ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ.

ಧಾರವಾಡದ ಇಂಗ್ಲಿಷ್‌ ಪ್ರಾಧ್ಯಾಪಕ ವಾದಿರಾಜಾಚಾರ್ಯ ಇನಾಮದಾರ ಎಂಬುವರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು, ಕನ್ನಡದಲ್ಲಿ ಬರೆದು ಸಲ್ಲಿಸಿದ್ದ ಚೆಕ್‌ ಅನ್ನು ಹಳಿಯಾಳದ ಎಸ್‌ಬಿಐ ಶಾಖೆ ತಿರಸ್ಕರಿಸಿತ್ತು. ಈ ಕುರಿತು ವಾದಿರಾಜಾಚಾರ್ಯ ಇನಾಮದಾರ ಅವರು ಎಸ್‌ಬಿಐ ಶಾಖೆಯ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಬ್ಯಾಲೆನ್ಸ್ ಚೆಕ್‌ ಮಾಡುವುದು ಹೇಗೆ?ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಬ್ಯಾಲೆನ್ಸ್ ಚೆಕ್‌ ಮಾಡುವುದು ಹೇಗೆ?

ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ದೂರುದಾರರ ಉಳಿತಾಯ ಖಾತೆಯಲ್ಲಿ 9 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಇದ್ದರೂ ಕೇವಲ 6 ಸಾವಿರ ರೂಪಾಯಿ ಮೌಲ್ಯದ ಚೆಕ್‌ ಅನ್ನು ಕನ್ನಡ ಭಾಷೆಯಲ್ಲಿ ಬರೆದಿರುವುದಕ್ಕೆ ಎಸ್‌ಬಿಐ ಶಾಖೆ ಅವರು ಅಮಾನ್ಯ ಮಾಡಿದ್ದಾರೆ. ಇದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ ಹಳಿಯಾಳ ಎಸ್‌ಬಿಐ ಬ್ಯಾಂಕ್ ಶಾಖೆಯು ಫಿರ್ಯಾದಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177 ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸಿದೆ. ಆಯೋಗದ ಅಧ್ಯಕ್ಷರಾದ ಈಶರಪ್ಪ ಭೂತೆ, ಸದಸ್ಯರಾದ ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಈ ತೀರ್ಪನ್ನು ನೀಡಿದ್ದಾರೆ .

Fine to SBI Bank for Rejecting Cheque Written in Kannada

ಬ್ಯಾಂಕ್‌ಗಳಲ್ಲಿ ತ್ರಿಭಾಷ ಸೂತ್ರದ ಬಳಕೆ ನಿಯಮಾನುಸಾರ, ಸ್ಥಳೀಯ ಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಈ ತೀರ್ಪನ್ನು ನೀಡಿರುವುದು ವಿಶೇಷ ಹಾಗೂ ಮಹತ್ವದ್ದಾಗಿದೆ.

ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುತ್ತಿದ್ದೀರಾ?: ನಿಮ್ಮ ಅನುಕೂಲಕ್ಕಾಗಿ ಉತ್ತಮ ಮಾಹಿತಿಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುತ್ತಿದ್ದೀರಾ?: ನಿಮ್ಮ ಅನುಕೂಲಕ್ಕಾಗಿ ಉತ್ತಮ ಮಾಹಿತಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಬರೀ ಇಂಗ್ಲಿಷ್‌, ಹಿಂದಿ ಭಾಷೆಯನ್ನೇ ಬಳಕೆ ಮಾಡುವುದು ಹೆಚ್ಚಾಗಿಬಿಟ್ಟಿದೆ. ಅದರಲ್ಲೂ ಎಸ್‌ಬಿಐ ಬ್ಯಾಂಕ್‌ಗಳಲ್ಲಂತೂ ಇಂಗ್ಲಿಷ್‌ ಭಾಷೆ ಕಡ್ಡಾಯವೆನ್ನುವಂತೆ ವರ್ತಿಸುತ್ತಾರೆ. ಇದರಿಂದ ಜನಸಾಮಾನ್ಯರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಅಲ್ಲದೇ ಚೆಕ್‌ ಕೇಳಿದರೆ ಸಾಕು ಇಂಗ್ಲಿಷ್‌ನಲ್ಲಿರುವ ಚೆಕ್‌ ಅನ್ನೇ ನೀಡುತ್ತಾರೆ. ಇದರ ಬಗ್ಗೆ ಪ್ರಶ್ನಿಸಿದರೆ ಅಂತವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬೆದರಿಕೆ ಹಾಕುವುದು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಬಿಟ್ಟಿದೆ.

Fine to SBI Bank for Rejecting Cheque Written in Kannada

ಅದೇ ರೀತಿ ಧಾರವಾಡದ ಇಂಗ್ಲಿಷ್‌ ಪ್ರಾಧ್ಯಾಪಕ ವಾದಿರಾಜಾಚಾರ್ಯ ಇನಾಮದಾರ ಎಂಬುವರು ತಮ್ಮ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು, ಕನ್ನಡದಲ್ಲಿ ಬರೆದು ಸಲ್ಲಿಸಿದ್ದ ಚೆಕ್‌ ಅನ್ನು ಹಳಿಯಾಳದ ಎಸ್‌ಬಿಐ ಶಾಖೆ ತಿರಸ್ಕರಿಸಿತ್ತು. ಕನ್ನಡದಲ್ಲಿ ಬರೆದ ಚೆಕ್ ಅನ್ನು ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಡಂದ ಪಾವತಿಸಲು ಆದೇಶ ಮಾಡಲಾಗಿದೆ. ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದ್ದು, ಎಲ್ಲಾ ಬ್ಯಾಂಕ್‌ನವರಿಗೂ ಪ್ರಾದೇಶಿಕ ಭಾಷೆಗಳ ಬಗ್ಗೆ ಮಹತ್ವದ ಅರಿವನ್ನು ಮೂಡಿಸಿದ್ದಾರೆ.

English summary
Dharwad District Consumer Disputes Redressal Commission ordered fine of Rs 85,177 to Haliyal SBI branch for rejecting cheque written in Kannada. , know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X