ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ರ‍್ಯಾಲಿ ನಂತರ ರಾಜ್ಯದಲ್ಲಿ ಬದಲಾವಣೆ ಗಾಳಿ: ಜಾವಡೇಕರ್

|
Google Oneindia Kannada News

ಚಿತ್ರದುರ್ಗ, ಫೆಬ್ರವರಿ 10 : ಬೆಂಗಳೂರಿನ ಮೋದಿ ರ‍್ಯಾಲಿಯು ಐತಿಹಾಸಿಕ ಕರ್ನಾಟಕದಲ್ಲಿ ಹೊಸ ಭರವಸೆ ಮೂಡಿಸಿದೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಉಳಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹೋಗಿ ಬಿಜೆಪಿ ಬರಲಿದೆ, ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ವಾಗಲಿದೆ. ಸಬ್ ಕಾ ಸಾತ್ ಸಬಕಾ ವಿಕಾಸ್ ನಮ್ಮ ಸಂಸ್ಕೃತಿಯಾಗಿದ್ದರೆ ಕೌಟುಂಬಿಕ ರಾಜಕಾರಣ ಎನ್ನುವುದು ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ ಎಂದರು.

ಅನ್ನಭಾಗ್ಯ ಸಿಎಂ ಯೋಜನೆಯಲ್ಲ, ಇದು ಮೋದಿ ಭಾಗ್ಯ : ಪ್ರಕಾಶ್ ಜಾವಡೇಕರ್ಅನ್ನಭಾಗ್ಯ ಸಿಎಂ ಯೋಜನೆಯಲ್ಲ, ಇದು ಮೋದಿ ಭಾಗ್ಯ : ಪ್ರಕಾಶ್ ಜಾವಡೇಕರ್

ಮೋದಿ ರಾಜ್ಯ ಸರ್ಕಾರಕ್ಕೆ ಹತ್ತು ಪರ್ಸೆಂಟ್ ಸರ್ಕಾರ ಅಂದಿದ್ದಾರೆ ಆದರೆ ಜನ ಟೆನ್ ಪರ್ಸೆಂಟ್ ಅಲ್ಲ ಮೂವತ್ತು ಪರ್ಸೆಂಟ್ ಅಂತಿದ್ದಾರೆ ಇದರಲ್ಲೇ ಕಾಂಗ್ರೆಸ್‌ ನ ಬಣ್ಣ ತಿಳಿಯುತ್ತದೆ. ರಾಜ್ಯ ಸರ್ಕಾರ ಕೊಲೆಗಳ ರಾಜಕೀಯ ಮಾಡುತ್ತಿದೆ ಶಾಸಕ ಸಿ.ಟಿ.ರವಿ ಸದನದಲ್ಲಿ ಸರಣಿ ಕೊಲೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.

Javadekar describes Modi rally bringing change in Karnataka

ಮುಂದೆ ಯಾರ ಕೊಲೆ ಆಗುತ್ತದೆ ಎಂದು ಸಿ.ಟಿ.ರವಿ ಕೇಳಿದ್ದಾರೆ ಮುಂದೆ ಸಿ.ಟಿ ರವಿ ಎಂದು ಸದನದಲ್ಲಿ ಸಚಿವರೊಬ್ಬರು ಹೇಳಿದ್ದಾರೆ ಆ ಮೂಲಕ ಸದನದಲ್ಲೇ ಬೆದರಿಕೆ ಒಡ್ಡುತ್ತಿದ್ದಾರೆ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ನೀಡಿದ ಯೋಜನೆಗಳನ್ನು ರಾಜ್ಯ ಸರ್ಕಾರದ ಯೋಜನೆಗಳು ಎಂದು ಹೇಳಿಕೊಳ್ಳುತ್ತಿದ್ದಾರೆ ಮೋದಿಯ ಅನ್ನಭಾಗ್ಯ, ಕಾಂಗ್ರೆಸ್ ಅನ್ನಭಾಗ್ಯ ಅಲ್ಲ ಇದು ಬುಲೆಟ್ ಪ್ರಜಾಪ್ರಭುತ್ವ ಅಲ್ಲ, ಕಾಂಗ್ರೆಸ್ ಬ್ಯಾಲೆಟ್ ಪಾಲಿಟಿಕ್ಸ್ ಬದಲು ಬುಲೆಟ್ ಪಾಲಿಟಿಕ್ಸ್ ಮಾಡುತ್ತಿದೆ.

ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ ಕಾಂಗ್ರೆಸ್ ಮುಕ್ತ ಭಾರತ ಎಂಬುದು ಸಾಂಸ್ಕೃತಿಕ ರಾಜಕಾರಣ. ಚಹಾ ಮಾರುವವನು ಪ್ರಧಾನಿ ಆಗುವುದು ಬಡ ದಲಿತ ಕುಟುಂಬದಿಂದ ಬಂದ ವ್ಯಕ್ತಿ ರಾಷ್ಟ್ರಪತಿ ಆಗುವುದು ರೈತ ಕುಟುಂಬದಿಂದ ಬಂದ ವ್ಯಕ್ತಿ ಉಪರಾಷ್ಟ್ರಪತಿ ಆಗುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸಂತಸ ವ್ಯಕ್ತಪಡಿಸಿದರು.

English summary
Union Minister Prakash Javadekar has described that Prime minister Narendra Modi's rally wad held in Bengaluru bringing significant change in Karnataka politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X