ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ನಭಾಗ್ಯ ಸಿಎಂ ಯೋಜನೆಯಲ್ಲ, ಇದು ಮೋದಿ ಭಾಗ್ಯ : ಪ್ರಕಾಶ್ ಜಾವಡೇಕರ್

|
Google Oneindia Kannada News

Recommended Video

ಅನ್ನ ಭಾಗ್ಯ ಯೋಜನೆ ಸಿದ್ದರಾಮಯ್ಯನವರದ್ದಲ್ಲ, ಮೋದಿ ಯೋಜನೆ ಎಂದ ಪ್ರಕಾಶ್ ಜಾವಡೇಕರ್ | Oneindia Kannada

ಮಂಗಳೂರು, ಜನವರಿ 24: 'ಅನ್ನಭಾಗ್ಯ' ಯೋಜನೆಯಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ವಾದಿಸುತ್ತಿದ್ದ ಬಿಜೆಪಿಯವರೀಗ ಮಾತು ಬದಲಿಸಿದ್ದಾರೆ. ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯ ಜನಪ್ರಿಯ ಯೋಜನೆ ಎಂದು ಅರ್ಥವಾಗುತ್ತಿದ್ದಂತೆ ಇದು 'ಮೋದಿ ಯೋಜನೆ' ಎನ್ನುಲು ಶುರು ಮಾಡಿದ್ದಾರೆ.

ಅನ್ನಭಾಗ್ಯ ಸಿದ್ದರಾಮಯ್ಯರ ಯೋಜನೆಯಲ್ಲ ಅನ್ನಭಾಗ್ಯ 'ಮೋದಿ ಭಾಗ್ಯ'ದಿಂದ ಬಂದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು

ಜಾವಡೇಕರ್ ಬಂದು ಹೋದ ಮೇಲೆ ಬದಲಾಯಿತು ತುಮಕೂರು ಬಿಜೆಪಿ ಹವಾಮಾನಜಾವಡೇಕರ್ ಬಂದು ಹೋದ ಮೇಲೆ ಬದಲಾಯಿತು ತುಮಕೂರು ಬಿಜೆಪಿ ಹವಾಮಾನ

ಇಂದಿರಾ ಕ್ಯಾಂಟೀನ್, ಅನ್ನಭಾಗ್ಯಕ್ಕೆ ಕೇಂದ್ರದ ಕೊಡುಗೆ ಇದೆ. ರಾಜ್ಯದ 'ಅನ್ನಭಾಗ್ಯ ಯೋಜನೆ'ಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. ಆದರೆ ಸಿದ್ದರಾಮಯ್ಯ ಮಾತ್ರ ಅದನ್ನು ಉಚಿತವಾಗಿ ಕೊಡುವ ಮಾತನಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಖಡಕ್, ದಕ್ಷ ಅಧಿಕಾರಿಗಳ ವರ್ಗಾವಣೆ

ಖಡಕ್, ದಕ್ಷ ಅಧಿಕಾರಿಗಳ ವರ್ಗಾವಣೆ

ರಾಜ್ಯದಲ್ಲಿ ದಕ್ಷ, ಖಡಕ್ ಅಧಿಕಾರಿಗಳು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವರ್ಗಾವಣೆ ಯಾಗುತ್ತಿದ್ದಾರೆ ಎಂದು ದೂರಿದ ಅವರು, "ಇದು ಕರ್ನಾಟಕ ಸರಕಾರ ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸಂಸ್ಕೃತಿ

ಬಿಜೆಪಿ ಸಂಸ್ಕೃತಿ

"ಬಡತನದಿಂದ ಬಂದು ಉನ್ನತ ಹುದ್ದೆ ಏರೋದು ಬಿಜೆಪಿ ಸಂಸ್ಕ್ರತಿ. ರೈಲ್ವೇ ಸ್ಟೇಷನ್ ನಲ್ಲಿ ಚಹಾ ಮಾರುತ್ತಿದ್ದ ಮೋದಿ ಇಂದು ಪ್ರಧಾನಿಯಾಗಿದ್ದಾರೆ. ಕೃಷಿ ಕುಟುಂಬದ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿದ್ದಾರೆ," ಎಂದು ಹೇಳಿದ ಅವರು, "ಕಾಂಗ್ರೆಸ್ ನಲ್ಲಿ ಇಂತಹ ಪರಂಪರೆ ಇಲ್ಲ.

ಏಕಕುಟುಂಬದ ಅಭಿವೃದ್ಧಿ ಮಾತ್ರ ಕಾಂಗ್ರೆಸ್ ನಲ್ಲಿದೆ," ಎಂದು ಅವರು ಟೀಕಿಸಿದರು.

ಹಿಂದೂ ಹುಡಿಗಿಯರ ನಾಪತ್ತೆ

ಹಿಂದೂ ಹುಡಿಗಿಯರ ನಾಪತ್ತೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಕೇವಲ ಕೊಲೆ ಸುಲಿಗೆ ಗೂಂಡಾಗಿರಿ ರಾಜ್ಯದಲ್ಲಾಗುತ್ತಿದೆ ಎಂದು ಆರೋಪಿಸಿದ ಅವರು, "ರಾಜ್ಯದಲ್ಲಿ ಹಿಂದೂ ಹುಡುಗಿಯರ‌ ನಾಪತ್ತೆಯಾಗುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿದೆ," ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಕೋಮುವಾದಿ ರಾಜಕಾರಣ

ಸಿದ್ದರಾಮಯ್ಯ ಕೋಮುವಾದಿ ರಾಜಕಾರಣ

ಸಿಎಂ ಸಿದ್ದರಾಮಯ್ಯ ಅವರ ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಡಿವೈಡ್ ಆ್ಯಂಡ್ ರೂಲ್ ಪಾಲಿಸಿ ಅನುಸರಿಸುತ್ತಿದ್ದಾರೆ ಎಂದು ಜಾವಡೇಕರ್ ಹೇಳಿದರು. ಎನ್ ಕೌಂಟರ್ ನಲ್ಲಿ ಸತ್ತ ದನಕಳ್ಳನಿಗೆ ಲಕ್ಷಾಂತರ ರೂಪಾಯಿ ಪರಿಹಾರ ನೀಡುತ್ತಾರೆ. ಆದರೆ ಹತ್ಯೆಯಾದ ಹಿಂದೂ ಕಾರ್ಯಕರ್ತರ ಕುಟುಂಬಗಳ ಕಡೆ ಸರ್ಕಾರ ತಿರುಗಿ ನೋಡಲ್ಲ ಎಂದು ಅವರು ಆರೋಪಿಸಿದರು.

English summary
All the Baghyas of the Karnataka government are funded by Modi and not by congress .Congress in the name of Baghyas are trying to be good to people alleged Union minister for human resource development (HRD) Prakash Javadekar on Tuesday January 23
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X