Krunal Pandya: ನೋವಿನಲ್ಲೂ ಹೋರಾಡಿದ ಕೃನಾಲ್ ಪಾಂಡ್ಯ: ವೈರಲ್ ಆಯ್ತು ಆರ್‌ಸಿಬಿ ಸ್ಟಾರ್ ಆಟಗಾರನ ಭಾವನಾತ್ಮಕ ಪೋಸ್ಟ್‌

Krunal Pandya: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ - ರೌಂಡರ್ ಕೃನಾಲ್ ಪಾಂಡ್ಯ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ವೈರಲ್ ಆಗುತ್ತಿದೆ. ಆರ್‌ಸಿಬಿ ತಂಡದ ಗೆಲುವಿಗೆ ಅಮೋಘ ಕೊಡುಗೆ ಕೊಟ್ಟಿದ್ದ ಕೃನಾಲ್ ಪಾಂಡ್ಯ ಅವರು ತಮ್ಮೊಳಗೆ ಎಷ್ಟು ನೋವು ಅನುಭವಿಸಿದ್ದರು ಎನ್ನುವುದನ್ನು ಈ ಇನ್‌ಸ್ಟಾಗ್ರಾಮ್ ಪೋಸ್ಟ್‌ ಬಹಿರಂಗ ಮಾಡಿದೆ. ಇನ್‌ಸ್ಟಾದಲ್ಲಿ ಫೋಟೋ ಹಂಚಿಕೊಂಡಿರುವ ಕೃನಾಲ್ ಪಾಂಡ್ಯ "ಕೆಲವು ಗಾಯದ ಗುರುತುಗಳು.. ನಾವು ನಡೆಸಿದ ಹೋರಾಟಕ್ಕೆ ಯೋಗ್ಯವಾದ ಪುರಾವೆಗಳಾಗಿವೆ" ಎಂದು ಬರೆದುಕೊಂಡಿದ್ದಾರೆ. ಕೃನಾಲ್ ಪಾಂಡ್ಯ ಅವರ ವೈರಲ್ ಪೋಸ್ಟ್‌ ವಿವರ ಇಲ್ಲಿದೆ.

ರಾಯ್‌ಪುರದಲ್ಲಿ ಭಾನುವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವು ರೋಚಕಘಟ್ಟವನ್ನು ತಲುಪಿತ್ತು. ಕೃನಾಲ್ ಪಾಂಡ್ಯ ಅವರು ಈ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಕೃನಾಲ್ ಪಾಂಡ್ಯ ಕೇವಲ ನೋವು ಅನುಭವಿಸುತ್ತಿರಲಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ 2023 ರ ವಿಶ್ವಕಪ್ ಕ್ಲಾಸಿಕ್ ಅನ್ನು ನೆನಪಿಸುವ ಬ್ಯಾಟಿಂಗ್ ಪ್ರದರ್ಶಿಸಿದ್ದರು.

Krunal Pandya

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವುದಕ್ಕೆ ಕೃನಾಲ್ ಪಾಂಡ್ಯ ಅವರ ಆಟದ ವೈಖರಿಯು ಪ್ರಮುಖ ಕಾರಣವಾಗಿತ್ತು. ಆರ್‌ಸಿಬಿ ಪಂದ್ಯ ಗೆಲ್ಲುಲು ಕೃನಾಲ್ ಪಾಂಡ್ಯ ಅವರು ಗಳಿಸಿದ 73 ರನ್‌ ಅತ್ಯಂತ ಅಮೂಲ್ಯವಾಗಿದ್ದವು. ಇದೀಗ ಕೃನಾಲ್ ಪಾಂಡ್ಯ ಅವರು ಮತ್ತೊಂದು ನೋವಿನ ಹೋರಾಟದ ಪುರಾವೆಯನ್ನು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಐಪಿಎಲ್ 2026ರ ಬಹುಪಾಲು ಸಮಯ ಆರ್‌ಸಿಬಿ ಕೃನಾಲ್ ಪಾಂಡ್ಯ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಹೆಚ್ಚು ಬಯಸಲಿಲ್ಲ. ಅವರು ಅಗ್ರ ಮತ್ತು ಮಧ್ಯಮ ಕ್ರಮಾಂಕದ ಪ್ರಾಬಲ್ಯದಲ್ಲಿದ್ದರು. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ನಾಯಕ ರಜತ್ ಪಾಟಿದಾರ್ ಪವರ್‌ಪ್ಲೇನ ಅಂತಿಮ ಓವರ್‌ ನಂತರ ಅವರನ್ನು 5 ನೇ ಸ್ಥಾನಕ್ಕೆ ಬಡ್ತಿ ನೀಡಿದರು. ಚೇಸಿಂಗ್ ಮಧ್ಯದಲ್ಲಿ ಕೃನಾಲ್ ಪಾಂಡ್ಯ ಅವರು ತೀವ್ರ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ನೋವಿನಲ್ಲೇ ಬ್ಯಾಟಿಂಗ್ ಮಾಡಿದರು. ಕೊನೆಯ 46 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿ ಆರ್‌ಸಿಬಿಯ 167 ರನ್‌ಗಳ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಸ್ನಾಯು ಸೆಳೆತಗಳನ್ನು ಮೀರಿ, ಕೃನಾಲ್ ಪಾಂಡ್ಯ ಅವರು ಮತ್ತೊಂದು ಗಾಯದಿಂದ ಬಳಲುತ್ತಿದ್ದರು ಎನ್ನುವುದು ಅವರು ಹಂಚಿಕೊಂಡ ಫೋಟೋದಿಂದ ರಿವೀಲ್ ಆಗಿದೆ.

Krunal Pandya: ಕೃನಾಲ್ ಪಾಂಡ್ಯ ಇನ್‌ಸ್ಟಾಗ್ರಾಮ್ ಪೋಸ್ಟ್‌ ವೈರಲ್

ಕೃನಾಲ್ ಪಾಂಡ್ಯ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ ವೈರಲ್ ಆಗಿದೆ. ಅದರಲ್ಲಿ ಅವರ ಹೊಟ್ಟೆಯ ಭಾಗದಲ್ಲಿ ದೊಡ್ಡ ಗಾಯವಾಗಿರುವುದು ಕಾಣಿಸುತ್ತದೆ. ಈ ಫೋಟೋದೊಂದಿಗೆ "ಕೆಲವು ಗಾಯದ ಗುರುತುಗಳು.. ನಾವು ನಡೆಸಿದ ಹೋರಾಟಕ್ಕೆ ಯೋಗ್ಯವಾದ ಪುರಾವೆಗಳಾಗಿವೆ" ಎಂದು ಕೃನಾಲ್ ಅವರು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+