Copra: ದಾಖಲೆಯ ಏರಿಕೆಯ ಬಳಿಕ ಕೊಬ್ಬರಿ ದರ ಕುಸಿತ: ಇಂದಿನ ಮಾರುಕಟ್ಟೆ ದರ ಹೀಗಿದೆ

ತುಮಕೂರು: ಕಲ್ಪತರುನಾಡು ತುಮಕೂರು ವ್ಯಾಪ್ತಿಯಲ್ಲಿ ಬೆಳೆಯುವ ತೆಂಗಿನಕಾಯಿಗೆ ದೇಶಾದ್ಯಂತ ಭರ್ಜರಿ ಬೇಡಿಕೆ ಇದೆ. ಕೊಬ್ಬರಿ ಗುಣಮಟ್ಟ ಉತ್ತಮವಾಗಿರುವ ಕಾರಣಕ್ಕೆ ಆಹಾರಕ್ಕೆ ಹೆಚ್ಚಾಗಿ ತಿಪಟೂರು ಕೊಬ್ಬರಿಯನ್ನು ಬಳಸಲಾಗುತ್ತದೆ. ಹೀಗಾಗಿ ಗರಿಷ್ಠ 38,000 ರೂಪಾಯಿ ತಲುಪಿದ್ದ ಉಂಡೆ ಕೊಬ್ಬರಿ ದರ ಇದೀಗ ಕುಸಿತ ಕಂಡಿದೆ. ಇದು ತೆಂಗು ಬೆಳಗಾರರ ಆತಂಕಕ್ಕೆ ಕಾರಣವಾಗಿದೆ. ಇಂದು (ಮೇ 12) ತಿಪಟೂರು ಸೇರಿದಂತೆ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ ಎಷ್ಟಿದೆ?

ರಾಜ್ಯದಲ್ಲಿ ಹೆಚ್ಚಾಗಿ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ತೆಂಗು ಬೆಳೆಯಲಾಗುತ್ತದೆ. ಅದರಲ್ಲೂ ತಿಪಟೂರು ಮತ್ತು ಸುತ್ತಮುತ್ತಲಿನ ಭಾಗದಲ್ಲಿನ ಕೊಬ್ಬರಿ ದರದ ಏರಿಳಿತದ ಮೇಲೆ ಹೆಚ್ಚಿನ ಗಮನ ಇರುತ್ತದೆ. ತಿಪಟೂರು ಎಪಿಎಂಸಿಯಲ್ಲಿ ದಾಖಲೆಯ ಗರಿಷ್ಠ ಬೆಲೆ ತಲುಪಿದ್ದ (38,000 ರೂ) ಉಂಡೆ ಕೊಬ್ಬರಿ ಇಂದು 33,800 ರೂಪಾಯಿಗೆ ಇಳಿಕೆ ಆಗಿದೆ. ಕನಿಷ್ಠ ದರ 31,400 ರೂಪಾಯಿ ಇದ್ದು, ಸರಾಸರಿ 33,300 ರೂ.ಗೆ ಮಾರಾಟವಾಗುತ್ತಿದೆ.

Tiptur Copra Prices

ಕೊಬ್ಬರಿ ದರದಲ್ಲಿ ಏರಿಳಿತ

ಇಂದಿನ ದರ ಒಂದು ಲೆಕ್ಕದಲ್ಲಿ ಕಡಿಮೆ ಏನಲ್ಲ. ಆದರೆ ನಿರಂತರವಾಗಿ ಹೀಗೆ ಇಳಿಕೆಯತ್ತ ಸಾಗಿದರೆ ಹೇಗೆ ಎಂಬ ಆತಂಕ ತೆಂಗು ಬೆಳೆಗಾರರಲ್ಲಿ ಮೂಡಿದೆ. ಏಪ್ರಿಲ್ ಮೊದಲ ವಾರದಿಂದ 28,000 ರಿಂದ 30,000 ಆಸುಪಾಸಿನಲ್ಲಿದ್ದ ಕೊಬ್ಬರಿ ಬೆಲೆ ಒಂದೇ ವಾರದಲ್ಲಿ 38,000 ರೂ.ಗೆ ಏರಿ ದಾಖಲೆ ಬರೆಯಿತು. ಅಲ್ಲಿಂದ ಕೆಲವು ವಾರಗಳ ಕಾಲ ಅದೇ ಬೆಲೆ ಇತ್ತು. ಏಪ್ರಿಲ್ 23ರಂದು 35,000 ರೂಪಾಯಿಗೆ ಕುಸಿತ ಎರಡು ದಿನಗಳಲ್ಲಿ ಮತ್ತೆ ಚೇತರಿಕೆ ಕಂಡು, ಮರಳಿ ಗರಿಷ್ಠ ಬೆಲೆ ತಲುಪಿತ್ತು. ಇದೀಗ ಮತ್ತೆ ಇಳಿಕೆ ಆಗಿದೆ.

Copra: ತಿಪಟೂರು ಕೊಬ್ಬರಿ ಬೆಲೆ ಮತ್ತೆ ನಾಗಾಲೋಟದಲ್ಲಿ ಹೆಚ್ಚಳ, ಇಂದಿನ ದರಪಟ್ಟಿ ಹೀಗಿದೆ
Copra: ತಿಪಟೂರು ಕೊಬ್ಬರಿ ಬೆಲೆ ಮತ್ತೆ ನಾಗಾಲೋಟದಲ್ಲಿ ಹೆಚ್ಚಳ, ಇಂದಿನ ದರಪಟ್ಟಿ ಹೀಗಿದೆ

ತುಮಕೂರಿನ ತಿಪಟೂರು ಮಾತ್ರವಲ್ಲದೇ ಗುಬ್ಬಿ ಎಪಿಎಂಸಿ, ಅರಸೀಕೆರೆ, ದಾವಣಗೆರೆ, ತುರುವೇಕೆರೆ ಸೇರಿ ಇತರ ಮಾರುಕಟ್ಟೆಗಳಲ್ಲೂ ಕೊಬ್ಬರಿ ದರವು ಇಳಿಕೆ ಆಗಿದೆ. ಈ ವಾರಪೂರ್ತಿ ದರದಲ್ಲಿ ಯಥಾಸ್ಥಿತಿ ಮುಂದುವರಿಯುವ ಲಕ್ಷಣಗಳು ಕಾಣುತ್ತಿವೆ. ತಿಪಟೂರಿನಿಂದ ಉತ್ತರ ಭಾರತದ ಕಡೆಗೆ ಹೆಚ್ಚಾಗಿ ರಫ್ತಾಗುತ್ತದೆ. ಉತ್ಪಾದನೆ ಕಡಿಮೆ ಆಗಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಬೇಡಿಕೆ ಸೃಷ್ಟಿ ಆಗಿದೆ. ಅದಕ್ಕೆ ತಕ್ಕಂತೆ ಹೆಚ್ಚಿನ ಬೆಲೆ ಕಂಡು ಖಷಿಯಾಗಿದ್ದ ರೈತರಲ್ಲಿ ಇದೀಗ ಬೆಲೆ ಇಳಿಕೆ ಕೊಂಚ ನಿರಾಸೆ ಮೂಡಿಸಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ 1 ಕ್ವಿಂಟಾಲ್ ದರಪಟ್ಟಿ

ತಿಪಟೂರು ಎಪಿಎಂಸಿ: ಗರಿಷ್ಠ 33,800 ಮತ್ತು ಕನಿಷ್ಠ ದರ 31,400 ರೂಪಾಯಿ

ಗುಬ್ಬಿ ಮಾರುಕಟ್ಟೆ: ಗರಿಷ್ಠ 30,000 ಮತ್ತು ಕನಿಷ್ಠ ಬೆಲೆ 27,000 ರೂಪಾಯಿ

ದಾವಣಗೆರೆ ಎಪಿಎಂಸಿ: ಗರಿಷ್ಠ 11,500 ಮತ್ತು ಕನಿಷ್ಠ ದರ 11,500 ರೂಪಾಯಿ

ತುರುವೇಕೆರೆ ಎಪಿಎಂಸಿ: ಗರಿಷ್ಠ 32,000 ಮತ್ತು ಕನಿಷ್ಠ ದರ 32,000 ರೂಪಾಯಿ

ಬಂಟ್ವಾಳ ಮಾರುಕಟ್ಟೆ: ಗರಿಷ್ಠ 15,500 ಮತ್ತು ಕನಿಷ್ಠ ಬೆಲೆ 14,800 ರೂಪಾಯಿ

ತುಮಕೂರು ಮಾರುಕಟ್ಟೆ: ಗರಿಷ್ಠ 21,000 ಮತ್ತು ಕನಿಷ್ಠ ದರ 16,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+