ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು; ಚಿತ್ರದುರ್ಗದಲ್ಲಿ ಗಮನ ಸೆಳೆದ ಯುವ ಸೌರಭ ಕಾರ್ಯಕ್ರಮ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 01; ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ವಾದ್ಯ ಸಂಗೀತ, ಸುಗಮ ಸಂಗೀತ, ವಚನ ಸಂಗೀತ, ದಾಸರ ಪದಗಳು, ಜಾನಪದ ಗೀತೆಗಳು, ಸಮೂಹ ನೃತ್ಯ, ನೃತ್ಯರೂಪಕ, ಜನಪದ ಪ್ರದರ್ಶನ ಕಲಾ ತಂಡಗಳು, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ, ಗಮಕ ಕಥಾ ಕೀರ್ತನಾ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಜಿ. ಆರ್. ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳನ್ನು ಮುದಗೊಳಿಸಿತು.

ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಹಾಗೂ ಗುಡ್ಡದರಂಗವ್ವನಹಳ್ಳಿ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ 'ಯುವಸೌರಭ' ಕಾರ್ಯಕ್ರಮ ನಡೆಯಿತು.

ವಿಶೇಷ ಸುದ್ದಿ: ಕಲಾಕಾರರ ಕುಂಚದಲ್ಲಿ ಅರಳಿದ ಕೊಡಗಿನ ಸಂಸ್ಕೃತಿ-ಪ್ರಕೃತಿ! ವಿಶೇಷ ಸುದ್ದಿ: ಕಲಾಕಾರರ ಕುಂಚದಲ್ಲಿ ಅರಳಿದ ಕೊಡಗಿನ ಸಂಸ್ಕೃತಿ-ಪ್ರಕೃತಿ!

ಯುವ ಸೌರಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಚಿತ್ರದುರ್ಗ ತಾಲ್ಲೂಕಿನ ಜಿ. ಆರ್. ಹಳ್ಳಿ ದಾವಣಗೆರೆ ವಿಶ್ವವಿದ್ಯಾನಿಲಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್. ವಿಶ್ವನಾಥ್, "ಜಾನಪದ ನೆಲ ಹಾಗೂ ಜನರ ಭಾಷೆಯಾಗಿದೆ. ಜನಮಾನಸದ ಸಂಸ್ಕಂತಿಯು ಈ ನೆಲದಲ್ಲಿ ಜೀವಂತವಾಗಿ ಉಳಿಯಬೇಕಾದರೆ ಜಾನಪದ ಕಲಾ ಪ್ರಕಾರಗಳು, ಕಲಾವಿದರು ಬಹಳ ಅವಶ್ಯಕ. ಈ ನೆಲದ ಎಲ್ಲ ಕಲಾ ಪ್ರಕಾರಗಳನ್ನು ಉಳಿಸುವ ಕೆಲಸವಾಗಬೇಕಿದೆ" ಎಂದು ಹೇಳಿದರು.

 ಹಳ್ಳಿಗಳಿಗೆ ತೆರಳಿ ಜನಪದ ಅಧ್ಯಯನ; ಕಲಿಯುವಿಕೆಯ ಹೊಸ ಜಮಾನ ಹಳ್ಳಿಗಳಿಗೆ ತೆರಳಿ ಜನಪದ ಅಧ್ಯಯನ; ಕಲಿಯುವಿಕೆಯ ಹೊಸ ಜಮಾನ

"ಕೋಲಾಟ, ಸೋಬಾನೆ ಪದ, ವೀರಗಾಸೆ, ಕಂಸಾಳೆ, ದೊಡ್ಡಾಟ, ಸಣ್ಣಾಟ, ಕೃಷ್ಣ ಪಾರಿಜಾತ ಸೇರಿದಂತೆ ಅನೇಕ ಕಲಾ ಪ್ರಕಾರಗಳು ಕಣ್ಣರೆಯಾಗುವ ಈ ಸಂದರ್ಭದಲ್ಲಿ ಸರ್ಕಾರವು ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ಮೂಲಕ ಕನ್ನಡ ನಾಡಿನ ನೆಲದ ಕಲೆ ಮತ್ತು ಸಂಸ್ಕಂತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ" ಎಂದರು.

ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಜನಪದ ಹೆಜ್ಜೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಜನಪದ ಹೆಜ್ಜೆ

ಪಾಶ್ಚಿಮಾತ್ಯ ಸಂಸ್ಕಂತಿ ಪ್ರಭಾವಕ್ಕೆ ಒಳಗಾಗಿದೆ

ಪಾಶ್ಚಿಮಾತ್ಯ ಸಂಸ್ಕಂತಿ ಪ್ರಭಾವಕ್ಕೆ ಒಳಗಾಗಿದೆ

"ಇಂದಿನ ಯುವ ಪೀಳಿಗೆಯು ಈ ನೆಲದ ಸಂಸ್ಕಂತಿಯನ್ನು ಬಿಟ್ಟು ಪಾಶ್ಚಿಮಾತ್ಯ ಸಂಸ್ಕಂತಿಯ ಪ್ರಭಾವಕ್ಕೆ ಒಳಗಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯು ಈ ನೆಲದ ಸಂಸ್ಕೃತಿಯನ್ನು ಹಾಳುಗೆಡವಿದೆ. ಜಾಗತೀಕರಣ, ಉದಾರೀಕರಣದ ದಳ್ಳೂರಿನಿಂದಾಗಿ ಈ ನೆಲದ ಸಂಸ್ಕಂತಿ ಕಣ್ಮರೆಯಾಗುತ್ತಿದೆ' ಎಂದು ಡಾ. ಹೆಚ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಸುಹಾಸ್ ಮಾತನಾಡಿ, "ಸಾಹಿತ್ಯ ಮತ್ತು ಸಂಸ್ಕೃತಿಯು ನಮ್ಮ ಜೀವನದ ಒಂದು ಭಾಗವಾಗಿದೆ. ಭಾರತ ದೇಶವು ಹಲವಾರು ಕಲೆಗಳ ತವರೂರು. ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಜನಪದ ಗೀತೆಗಳು, ದಾಸ ಸಾಹಿತ್ಯ, ವಚನ ಸಾಹಿತ್ಯ, ರಾಮಾಯಣ, ಮಹಾಭಾರತ ಮಹಾಕಾವ್ಯ, ವೀರಗಾಸೆ, ಡೊಳ್ಳು ಕುಣಿತ, ಕೋಲಾಟ ಸೇರಿದಂತೆ ಇನ್ನೂ ಹಲವಾರು ಸಾಹಿತ್ಯ ಹಾಗೂ ಕಲಾ ಪ್ರಕಾರಗಳಲ್ಲಿ ಆದರ್ಶ, ಜೀವನದ ಮೌಲ್ಯಗಳು ಅಡಗಿವೆ" ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತಿಯನ್ನು ಬೆಳೆಸಬೇಕಿದೆ

ಸಂಸ್ಕೃತಿಯನ್ನು ಬೆಳೆಸಬೇಕಿದೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, 'ಇಂದಿನ ವಿದ್ಯಾರ್ಥಿಗಳು ಮುಂದಿನ ಸಂಸ್ಕೃತಿಯ ಕಟ್ಟಾಳುಗಳು. ಯುವ ಪೀಳಿಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಪ್ರತಿಯೊಬ್ಬರು ಸಾಂಸ್ಕೃತಿಕ ರಾಯಭಾರಿಗಳಾಗುವ ಅಗತ್ಯವಿದೆ. ಒತ್ತಡದ ಬದುಕಿನಿಂದ ವಿಮುಖರಾಗಲು ಕಲೆಯಿಂದ ಮಾತ್ರ ಸಾಧ್ಯ" ಎಂದರು.

"ಕನ್ನಡ ಮತ್ತು ಸಂಸ್ಕಂತಿ ಇಲಾಖೆಯು ನಾಡು, ನುಡಿ, ಸಂಸ್ಕೃತಿಯನ್ನು ಪೋಷಣೆ, ರಕ್ಷಣೆ ಹಾಗೂ ಬೆಳೆಸುವ ಕಾರ್ಯ ಮಾಡುತ್ತಿದೆ. ಕಲೆ, ಸಂಸ್ಕೃತಿಯಿಂದ ಬದುಕು ತೃಪ್ತಕರವಾಗಲಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕಲೆ, ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲಿದೆ" ಎಂದು ಹೇಳಿದರು.

ಸಾಂಸ್ಕಂತಿಕ ಕಾರ್ಯಕ್ರಮಗಳು

ಸಾಂಸ್ಕಂತಿಕ ಕಾರ್ಯಕ್ರಮಗಳು

ಸುಜಿತ್ ಕುಲಕರ್ಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಹಿಂದೂಸ್ತಾನಿ ವಾದ್ಯ ಸಂಗೀತ, ಹೇಮಂತ್ ಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ, ವಚನ ಸಂಗೀತ, ತತ್ವಪದ ದಾಸರ ಪದಗಳನ್ನು ಪ್ರಸ್ತುತ ಪಡಿಸಿದರು.

ಅಭಿಶ್ರೀ ಎಂ. ಪಿ. ಮತ್ತು ಸಂಗಡಿಗರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ನಾಗಶ್ರೀ ಎಂ. ಪಿ. ಮತ್ತು ಸಂಗಡಿಗರು ಸಮೂಹ ನೃತ್ಯ ನೃತ್ಯ ರೂಪಕ ಪ್ರದರ್ಶಿಸಿದರು. ಜನಪದ ಪ್ರದರ್ಶನ ಕಲಾ ತಂಡಗಳಾದ ವೀರಗಾಸೆಯನ್ನು ಶಂಕರ್ ಮತ್ತು ತಂಡದವರು, ನಾಸಿಕ್ ಡೋಲು ಕಲೆಯನ್ನು ರಾಘವೇಂದ್ರ ಮತ್ತು ತಂಡದವರು ಹಾಗೂ ಮಹಂತೇಶ್ ಮತ್ತು ತಂಡದವರು ಕೀಲು ಕುದರೆ ಪ್ರದರ್ಶನವನ್ನು ಪ್ರಸ್ತುತ ಪಡಿಸಿದರು.

Recommended Video

Nandi Hills ರಸ್ತೆಗಳ ಮರುನಿರ್ಮಾಣ , ಪ್ರವಾಸಿಗರು ಫುಲ್ ಖುಷ್ | Oneindia Kannada
ಗಮನ ಸೆಳೆದ ಕಾರ್ಯಕ್ರಮಗಳು

ಗಮನ ಸೆಳೆದ ಕಾರ್ಯಕ್ರಮಗಳು

ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ ಹಾಗೂ ವಿಜಯ ನಗರ ಸಾಮ್ರಾಜ್ಯದ ಕುರಿತು ರೂಪಕ ಕಾರ್ಯಕ್ರಮಗಳನ್ನು ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ತನುಜ ಕೆ ಮತ್ತು ತಂಡದವರು ಪ್ರಸ್ತುತ ಪಡಿಸಿದರು. ಪಿ.ಆರ್.ಸ್ಫೂರ್ತಿ ಮತ್ತು ತಂಡದವರು ಗಮಕಕಥಾ ಕೀರ್ತನ ಹಾಡಿದರು. ಕಾರ್ಯಕ್ರಮವನ್ನು ಗುಡ್ಡದರಂಗವ್ವನಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡಾ. ಹೆಚ್. ಜಿ. ವಿಜಯಕುಮಾರ್ ಹಾಗೂ ಎಂ. ಕೆ. ಹರೀಶ್ ನಿರೂಪಿಸಿದರು.

English summary
Yuva Sowrabha program organized at Davangere university's post graduate (PG) centre at Guddada Rangavana (G.R.) halli of Chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X