ಏಷ್ಯಾದ ಬೃಹತ್ ಆಹಾರ ಮೇಳ 2026: ಜಾಗತಿಕ ಮಾರುಕಟ್ಟೆಗೆ ಉದ್ಯಮ ಲಗ್ಗೆ
ಭಾರತೀಯ ಆಹಾರ ಉದ್ಯಮಕ್ಕೆ ಸಂಬಂಧಿದಂತೆ ಬೃಹತ್ 'ಆಹಾರ 2026 ಮೇಳ'ದ 40ನೇ ಅವೃತ್ತಿಯು ನದೆಹಲಿಯಲ್ಲಿ ನಡೆಯಲಿದೆ. ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಹಾಗೂ ಭಾರತ ವ್ಯಾಪಾರ ಉತ್ತೇಜನ ಸಂಸ್ಥೆಗಳ ಜಂಟಿ ಸಹಕಾರದಲ್ಲಿ ಮಾರ್ಚ್ 10 ರಿಂದ ನಾಲ್ಕು ದಿನ ನಡೆಯಲಿದೆ. ಏಷ್ಯಾದ ಅತ್ಯಂತ ಪ್ರಭಾವಶಾಲಿ ಬಿಟುಬಿ ಆಹಾರ ಮತ್ತು ಆತಿಥ್ಯಕ್ಕೆ ಮಾರುಕಟ್ಟೆ ಒದಗಿಸುವ ವೇದಿಕೆ ಇದಾಗಿದೆ. ಈ ಮೂಲಕ ದೇಶದ ಉದ್ಯಮಗಳಿಗೆ ಜಾಗತಿಕ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.
ಆಹಾರ ಮೇಳಕ್ಕೆ 1,800ಕ್ಕೂ ಹೆಚ್ಚು ಪ್ರದರ್ಶಕರು, 155 ಅಂತಾರಾಷ್ಟ್ರೀಯ ಉದ್ಯಮಿಗಳು ಆಗಮಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ವ್ಯಾಪಾರ ಸಂದರ್ಶಕರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಭಾರತದ ವೇಗವಾಗಿ ವಿಸ್ತರಿಸುತ್ತಿರುವ HoReCa (ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳು) ಪರಿಸರ ವ್ಯವಸ್ಥೆಯ ಜೀವನಾಡಿಯಾಗಿ 'ಆಹಾರ್' ಪರಿವರ್ತನೆಗೊಂಡಿದೆ. ಈ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಸಾಕಷ್ಟು ಸಮಸ್ಯೆಗಳು ಇದ್ದು, ಮೇಳದಲ್ಲಿ ಅವುಗಳಿಗೆ ಪರಿಹಾರ ನೀಡುವ ಕೆಲಸವಾಗುತ್ತಿದೆ.

ಭಾರತ ವ್ಯಾಪಾರ ಉತ್ತೇಜನ ಸಂಸ್ಥೆ (ITPO) ಭಾರತೀಯ ಆಹಾರ ಮತ್ತು ಆತಿಥ್ಯ ಕ್ಷೇತ್ರಕ್ಕೆ ಸಂಘಟಿತ ನೆಲೆ ಒದಗಿಸಲು, ಸ್ಪಷ್ಟ ದಾರಿ ನೀಡುವ ಉದ್ದೇಶದಿಂದ 'ಆಹಾರ್' ರೂಪುಗೊಂಡಿತು. ಆರಂಭದಲ್ಲಿ ದೇಶೀಯ ಉತ್ಪಾದಕರು ಹಾಗೂ ಮೂಲ ಅಡುಗೆ ಸಲಕರಣೆಗಳಿಗೆ ಸೀಮಿತವಾಗಿದ್ದ ಈ ಮೇಳ ಇದೀಗ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯಮಟ್ಟವನ್ನು ತಲುಪಿದೆ.
40ನೇ ಆವೃತ್ತಿ ತಲುಪಿರುವ 'ಆಹಾರ್ 2026' ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಆಹಾರ-ಪಾನೀಯಗಳು, ಅಡುಗೆ ಉಪಕರಣಗಳು, ಬೇಕರಿ ಯಂತ್ರೋಪಕರಣಗಳು, ಆತಿಥ್ಯ ತಂತ್ರಜ್ಞಾನ ಹಾಗೂ ಸಂಬಂಧಿತ ಸೇವೆಗಳಾದ್ಯಂತ ಅತ್ಯಾಧುನಿಕ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ. ಸ್ಟಾರ್ಟ್‌ಅಪ್‌ಗಳು, MSMEಗಳು ಮತ್ತು ಬಹುರಾಷ್ಟ್ರೀಯ ಬ್ರ್ಯಾಂಡ್‌ಗಳ ವೈವಿಧ್ಯಮಯ ಭಾಗವಹಿಸುವಿಕೆಗೂ ಕಾರಣವಾಗಿದೆ. ಈ ಮೂಲಕ ಅದ್ವಿತೀಯ ಉದ್ಯಮಗಳ ಸಮಾಗಮನಕ್ಕೆ ಸಾಕ್ಷಿಯಾಗಲಿದೆ.
'ಆಹಾರ್'ನ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಹೆಜ್ಜೆಗುರುತು ಅದರ ವಿಶಿಷ್ಟತೆಯಾಗಿದೆ. 155 ವಿದೇಶಿ ಪ್ರದರ್ಶಕರು ಭಾರತೀಯ ವ್ಯಾಪಾರ ಮತ್ತು ಜಾಗತಿಕ ಮಾರುಕಟ್ಟೆಗಳ ನಡುವೆ ಸೇತುವಾಗಿ ಇದರ ಸ್ಥಾನವನ್ನು ಬಲಪಡಿಸುತ್ತಿದ್ದಾರೆ. 'ಪಾಲುದಾರ ದೇಶ' ಇಟಲಿಯು ಪ್ರೀಮಿಯಂ ಆಹಾರ ಉತ್ಪನ್ನಗಳು, ಪಾಕಶಾಲಾ ಪರಿಣತಿ ಮತ್ತು ಸುಧಾರಿತ ಆತಿಥ್ಯ ಪರಿಹಾರಗಳನ್ನು ಭಾರತಕ್ಕೆ ತರುತ್ತಿದೆ. ಇಟಲಿಯ ಈ ಪಾಲ್ಗೊಳ್ಳುವಿಕೆ ಯುರೋಪ್ ಮತ್ತು ಏಷ್ಯಾದ ವೇಗವಾಗಿ ಬೆಳೆಯುತ್ತಿರುವ ಆತಿಥ್ಯ ಪರಿಸರ ವ್ಯವಸ್ಥೆಗಳನ್ನು ಸಂಪರ್ಕಿಸುವ 'ಆಹಾರ್'ನ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಸ್ಟಾರ್ಟ್‌ಅಪ್‌ಗಳು-ರಫ್ತುದಾರರಿಗೆ ಅವಕಾಶ
ಸದರಿ 2026ರ ಬೃಹತ್ ಮೇಳವು ಒಂದು ಲಕ್ಷಕ್ಕೂ ಹೆಚ್ಚು ವ್ಯಾಪಾರ ಸಂದರ್ಶಕರನ್ನು ಸಳೆಯಲಿದೆ. ವಿತರಕರು, ಆಮದುದಾರರು, ಹೋಟೆಲ್ ಮಾಲೀಕರು, ಬಾಣಸಿಗರು, ಖರೀದಿ ಮುಖ್ಯಸ್ಥರು, ಕ್ಯೂಎಸ್‌ಆರ್ ನಿರ್ವಾಹಕರು ಮತ್ತು ಸಾಂಸ್ಥಿಕ ಖರೀದಿದಾರರು ಇವರಲ್ಲಿ ಸೇರಿದ್ದಾರೆ. ಎಂಎಸ್‌ಎಂಇಗಳು ಸ್ಟಾರ್ಟ್‌ಅಪ್‌ಗಳು ಮತ್ತು ರಫ್ತುದಾರರಿಗೆ ಇದು ಅಭೂತಪೂರ್ವ ಅವಕಾಶಗಳನ್ನು ಒದಗಿಸುತ್ತದೆ. ವಿದೇಶಿ ಖರೀದಿದಾರರು ಭಾರತೀಯ ಮಸಾಲೆಗಳು, ಸಿದ್ಧ ಆಹಾರಗಳು, ಸಾವಯವ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರ ನಾವೀನ್ಯತೆಗಳಿಗಾಗಿ ಇಲ್ಲಿ ಒಂದಷ್ಟು ಮಾಹಿತಿ, ಮಾರ್ಗದರ್ಶನ ಪಡೆಯಲಿದ್ದಾರ.ಎ
ರಫ್ತು ಹೆಚ್ಚಿಸುವ ಜೊತೆಗೆ ಜಾಗತಿಕ ಬ್ರ್ಯಾಂಡ್ ಮನ್ನಣೆಗೆ ಉತ್ತೇಜ ನೀಡಲಾಗುತ್ತದೆ. ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳ ಉದ್ಯಮಗಳು ಸಹ ವಿತರಣಾ ಜಾಲಗಳನ್ನು ವಿಸ್ತರಿಸಲು ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಲು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಆಯೋಜಕ ಸಂಸ್ಥೆಗಳು ಕರೆ ನೀಡಿವೆ. 'ಆಹಾರ್' ಅತ್ಯಗತ್ಯವೆನಿಸಿದೆ. ಪ್ರವಾಸೋದ್ಯಮ, ನಗರೀಕರಣ ಹಾಗೂ ಹೆಚ್ಚುತ್ತಿರುವ ಆದಾಯದಿಂದ ಭಾರತದ ಆತಿಥ್ಯ ಕ್ಷೇತ್ರವು ವಿಸ್ತರಣೆಯಾಗುತ್ತಿದೆ.
'ಕಲಿನರಿ ಆರ್ಟ್ ಇಂಡಿಯಾ 2026'
ಆಹಾರ ಮೇಳದ ಭಾಗವಾದ 'ಕಲಿನರಿ ಆರ್ಟ್ ಇಂಡಿಯಾ 2026' ಇದು ಉನ್ನತ ಬಾಣಸಿಗರು, ಯುವ ವೃತ್ತಿಪರರು ಮತ್ತು ಆತಿಥ್ಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುತ್ತದೆ. ಈ ಕಾರ್ಯಕ್ರಮವು ಸೃಜನಶೀಲತೆ, ಕೌಶಲ್ಯಗಳನ್ನು ಪ್ರದರ್ಶಿಸುತ್ತದೆ. ಸುಸ್ಥಿರತೆ ಮತ್ತು ಜಾಗತಿಕ ಪಾಕಶಾಲಾ ಮಾನದಂಡಗಳನ್ನು ವಿವರಿಸಿ ಉದ್ಯಮಿಗಳನ್ನು ಬೆಂಬಲಿಸುತ್ತದೆ. ಇದರಿಂದ ಜಾಗತಿಕ ಪಾಕಶಾಲಾ ಕ್ಷೇತ್ರದಲ್ಲಿ ಭಾರತದ ಸ್ಥಾನಮಾನ ಮತ್ತೊಂದು ಹಂತಕ್ಕೆ ತಲುಪಿದೆ. 'ಆಹಾರ್' ಕೇವಲ ವ್ಯಾಪಾರ ವಹಿವಾಟಿಗೆ ಮಾತ್ರವಲ್ಲ ಕರಕುಶಲತೆ ಮತ್ತು ಶ್ರೇಷ್ಠತೆಗೂ ಸಮಾನವಾದ ಮಹತ್ವ ನೀಡುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. MICE (ಸಭೆಗಳು, ಪ್ರೋತ್ಸಾಹಕಗಳು, ಸಮ್ಮೇಳನಗಳು, ಪ್ರದರ್ಶನಗಳು) ಮತ್ತು ಆತಿಥ್ಯ ಉದ್ಯಮದ ಪ್ರಮುಖರನ್ನು ಆಕರ್ಷಿಸುತ್ತಿದೆ. 40ನೇ ಆವೃತ್ತಿಗೆ ಹೊಸ ಉತ್ತೇಜನ ನೀಡಲು 'ಹಾಸ್ಪಿಟಾಲಿಟಿ ಚಾಲೆಂಜ್' ಪರಿಚಯಿಸಲಾಗಿದೆ. ಇದು ಆತಿಥ್ಯ ಪರಿಸರ ವ್ಯವಸ್ಥೆಯಲ್ಲಿ ಹೊಸತನ, ಸ್ಪರ್ಧಾತ್ಮಕತೆ ಮತ್ತು ನವೀನ ಪರಿಹಾರಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ. ಉದಯೋನ್ಮುಖ ಬ್ರ್ಯಾಂಡ್‌ಗಳು ಮತ್ತು ಉದ್ಯಮಿಗಳಿಗೆ ಸ್ಮಾರ್ಟ್ ಕಿಚನ್‌ಗಳು, ಸುಸ್ಥಿರ ಪ್ಯಾಕೇಜಿಂಗ್ ಮತ್ತು AI-ಚಾಲಿತ ಆತಿಥ್ಯ ನಿರ್ವಹಣಾ ಸಾಧನಗಳಂತಹ ಕ್ರಾಂತಿಕಾರಿ ಕಲ್ಪನೆಗಳನ್ನು ಪ್ರದರ್ಶಿಸಲು ಈ ವೇದಿಕೆಯು ಅವಕಾಶ ನೀಡುತ್ತದೆ.
ಕಳೆದ 40 ವರ್ಷಗಳಲ್ಲಿ 'ಆಹಾರ್' ದೇಶೀಯ ಉದ್ಯಮ ರಂಗದಿಂದ ವಿಶ್ವದ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ. ಪರಂಪರೆಯನ್ನು ಹೊಸತನದೊಂದಿಗೆ, ಪ್ರಮಾಣವನ್ನು ಗುಣಮಟ್ಟದೊಂದಿಗೆ, ಮತ್ತು ದೇಶೀಯ ಬೆಳವಣಿಗೆಯನ್ನು ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ಸಂಯೋಜಿಸುವ ಸಾಮರ್ಥ್ಯದಿಂದಾಗಿ ಏಷ್ಯಾದ ಅತ್ಯಂತ ಪ್ರಭಾವಶಾಲಿ ಬಿಟುಬಿ ಆಹಾರ ಮತ್ತು ಆತಿಥ್ಯ ವೇದಿಕೆಯಾಗಿ ಗುರುತಿಸಿಕೊಂಡಿದೆ. ತಮಿಳುನಾಡಿನ ಆಹಾರ ಸಂಸ್ಕರಣಾ ಕೇಂದ್ರಗಳು, ಕೇರಳದ ಮಸಾಲೆ ರಫ್ತುದಾರರು, ಗುಜರಾತ್‌ನ ಡೈರಿ ಸಹಕಾರಿ ಸಂಘಗಳು, ದೆಹಲಿ-ಮುಂಬೈನ ಹೋಟೆಲ್ ಸರಪಳಿಗಳು ಸೇರಿದಂತೆ ವಿವಿಧ ರಾಜ್ಯಗಳ ವ್ಯವಹಾರಗಳಿಗೆ 'ಆಹಾರ್ 2026' ಕಾರ್ಯತಂತ್ರಗಳ ಮುನ್ನೂಡಿ ಬರೆಯುತ್ತದೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications