Adani Total Gas: ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಸಿಎನ್‌ಜಿ, ಪಿಎನ್‌ಜಿ ದರ ಸ್ಥಿರ: ಅದಾನಿ ಗ್ಯಾಸ್‌

ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಸರಬರಾಜು ವ್ಯವಸ್ಥೆಯಲ್ಲಿ ಅಡಚಣೆಗಳು ಉಂಟಾಗಿದ್ದರೂ, ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌ (ಎಟಿಜಿಎಲ್‌) ಕಂಪನಿಯು ಸಂಕುಚಿತ ನೈಸರ್ಗಿಕ ಅನಿಲ (CNG) ಹಾಗೂ ಗೃಹ ಬಳಕೆಯ ಪೈಪ್ಡ್‌ ನೈಸರ್ಗಿಕ ಅನಿಲ (PNG) ದರಗಳನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಿದೆ. ಆದರೆ ಸರಬರಾಜಿನ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಅನಿಲ ಬಳಕೆಯ ಮೇಲೆ ಮಿತಿ ವಿಧಿಸಲಾಗಿದೆ.

ಎಟಿಜಿಎಲ್‌ ಪೂರೈಸುವ ಒಟ್ಟು ಅನಿಲ ಪ್ರಮಾಣದಲ್ಲಿ ಸುಮಾರು ಶೇ 70ರಷ್ಟು ಅನಿಲವನ್ನು ದೇಶೀಯ ಮೂಲಗಳಿಂದಲೇ ಪಡೆಯಲಾಗುತ್ತದೆ. ಈ ಅನಿಲವನ್ನು ಮುಖ್ಯವಾಗಿ ವಾಹನಗಳಿಗೆ ಬಳಸುವ ಸಿಎನ್‌ಜಿ ಮತ್ತು ಗೃಹ ಬಳಕೆಯ ಪಿಎನ್‌ಜಿ ಗ್ರಾಹಕರಿಗೆ ಪೂರೈಸಲಾಗುತ್ತದೆ. ಆದ್ದರಿಂದ ಈ ವಿಭಾಗದ ಗ್ರಾಹಕರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

Adani Total Gas

ಎಟಿಜಿಎಲ್ ಕಂಪನಿ ಅದಾನಿ ಗ್ರೂಪ್ ಹಾಗೂ ಫ್ರಾನ್ಸ್ ಇಂಧನ ದಿಗ್ಗಜ ಟೋಟಲ್ ಎನರ್ಜಿಸ್ ಸಂಸ್ಥೆಗಳ ಸಂಯುಕ್ತ ಉದ್ಯಮವಾಗಿದೆ. ಕಂಪನಿಗೆ ಅಗತ್ಯವಿರುವ ಉಳಿದ 30 ಶೇಕಡಾ ಅನಿಲವನ್ನು ಆಮದು ಮಾಡಿಕೊಳ್ಳುವ ದ್ರವೀಕೃತ ನೈಸರ್ಗಿಕ ಅನಿಲ (LNG) ಮೂಲಕ ಪಡೆಯಲಾಗುತ್ತದೆ. ಈ ಅನಿಲವನ್ನು ಮುಖ್ಯವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಪೂರೈಸಲಾಗುತ್ತದೆ.

ಆದರೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಇಂಧನ ಸಾಗಣೆಯಲ್ಲಿ ಅಡಚಣೆ ಉಂಟಾಗಿದ್ದು, ಭಾರತಕ್ಕೆ ಬರುವ ಕಚ್ಚಾ ತೈಲ ಹಾಗೂ ಎಲ್‌ಎನ್‌ಜಿ ಸರಬರಾಜಿನ ಮೇಲೂ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಗೆ ಅಗತ್ಯವಿರುವ ಆಮದು ಎಲ್‌ಎನ್‌ಜಿ ಲಭ್ಯತೆ ಕುಂಠಿತವಾಗಿದೆ.

ಈ ಹಿನ್ನೆಲೆಯಲ್ಲಿ ಎಟಿಜಿಎಲ್‌ ಕಂಪನಿ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ತಮ್ಮ ಒಪ್ಪಂದದಂತೆ ಅನಿಲ ಬಳಕೆಯ ಕೇವಲ 40 ಶೇಕಡಾ ಪ್ರಮಾಣವನ್ನಷ್ಟೇ ಬಳಸಬೇಕು ಎಂದು ಸೂಚಿಸಿದೆ. ಈ ಮಿತಿಯೊಳಗಿನ ಬಳಕೆಗೆ ಒಪ್ಪಂದದ ದರದಲ್ಲೇ ಬಿಲ್ ವಿಧಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಪ್ರಸ್ತುತ ಕೈಗಾರಿಕಾ ಗ್ರಾಹಕರಿಗೆ ಅನ್ವಯವಾಗುವ ಸರಾಸರಿ ಒಪ್ಪಂದದ ದರವು ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ (scm) ಸುಮಾರು ₹40 ಆಗಿದೆ. ಆದರೆ ಶೇ 40ರಷ್ಟು ಮಿತಿಯನ್ನು ಮೀರಿ ಅನಿಲ ಬಳಸಿದರೆ ಆ ಹೆಚ್ಚುವರಿ ಪ್ರಮಾಣಕ್ಕೆ ಸ್ಪಾಟ್‌ ಮಾರುಕಟ್ಟೆ ದರ ಅನ್ವಯಿಸಲಾಗುತ್ತದೆ.

ಜಾಗತಿಕ ಸರಬರಾಜು ವ್ಯತ್ಯಯದಿಂದ ಎನ್‌ಎನ್‌ಜಿ ಸ್ಪಾಟ್‌ ದರಗಳು ಭಾರೀ ಏರಿಕೆ ಕಂಡಿವೆ. ಸಾಮಾನ್ಯವಾಗಿ ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್‌ಗೆ (mmBtu) ಸುಮಾರು 10 ಡಾಲರ್ ಇರುವ ದರ ಈಗ 24-25 ಡಾಲರ್ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಮಿತಿಯನ್ನು ಮೀರಿ ಅನಿಲ ಬಳಸುವ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಹೆಚ್ಚುವರಿ ಅನಿಲ ಬಳಕೆಗೆ ಪ್ರತಿ ಎಸ್‌ಸಿಎಂಗೆ ₹119 ದರ ವಿಧಿಸಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಪ್ರಸ್ತುತ ಉಂಟಾಗಿರುವ ಸರಬರಾಜು ಸವಾಲುಗಳ ನಡುವೆಯೂ ಪ್ರಾಥಮಿಕ ವಿಭಾಗಗಳಾದ ಗೃಹ ಬಳಕೆ ಮತ್ತು ವಾಹನಗಳಿಗೆ ನಿರಂತರ ಅನಿಲ ಪೂರೈಕೆ ಖಚಿತಪಡಿಸುವತ್ತ ಕಂಪನಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಎಟಿಜಿಎಲ್‌ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+