AAHAR 2026: ದೆಹಲಿಯಲ್ಲಿ ಬೃಹತ್ ಆಹಾರ ಮೇಳ 2026, ಆಹಾರೋದ್ಯಮಿಗಳಿಗೆ ಸಾಕಷ್ಟು ಪ್ರಯೋಜನ
ನವದೆಹಲಿ: ಭಾರತದ ಆಹಾರ ಉದ್ಯಮವು ವೇಗವಾಗಿ ಬದಲಾಗುತ್ತಿದೆ. ಉದ್ಯಮಿಗಳು ತಮ್ಮ ಬ್ರ್ಯಾಂಡ್ ಅನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಬಯಸುತ್ತಿದ್ದಾರೆ. ಅಂತಹ ಉದ್ಯಮಿಗಳಿಗೆ ಅಪಾರ ಅವಕಾಶಗಳು ಸೃಷ್ಟಿಯಾಗುತ್ತಿವೆ. ಈ ಮಾತಿಗೆ ಪೂರಕವೆಂಬಂತೆ ಮಾರ್ಚ್ 10 ರಿಂದ 14 ರವರೆಗೆ ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಲಿರುವ 'ಆಹಾರ್ 2026 ಅಂತಾರಾಷ್ಟ್ರೀಯ ಆಹಾರ ಮತ್ತು ಹಾಸ್ಪಿಟಾಲಿಟಿ ಮೇಳ' ಈ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಅನೇಕ ಹೋಟೆಲ್, ರೆಸ್ಟೋರೆಂಟ್ ಸೇರಿ ಆಹಾರ ವಲಯದ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ.
ವಾಣಿಜ್ಯ ಅಡುಗೆಮನೆ, ವಿಶೇಷ ಆಹಾರ ಬ್ರ್ಯಾಂಡ್ ಅಥವಾ ಉತ್ಪಾದನಾ ಘಟಕವನ್ನು ನಡೆಸುವವರಿಗೆ ಕೇವಲ ಉತ್ತಮ ಗುಣಮಟ್ಟದ ಆಹಾರ ತಯಾರಿಕೆ ಮಾತ್ರವೇ ಸವಾಲು ಅಲ್ಲ. ರೆಡಿಯಾದ ಆಹಾರ ಉತ್ಪನ್ನಗಳನ್ನು ಸೂಕ್ತ ಗ್ರಾಹಕರಿಗೆ ತಲುಪಿಸುವುದು ದೊಡ್ಡ ಸವಾಲಾಗಿದೆ. ಈ ಸವಾಲಿಗೆ ಪರಿಹಾರಯುತ ದಾರಿ ಎಂಬಂತೆ ಬೃಹತ್ ಮತ್ತು ವಿಶಿಷ್ಟ ವೇದಿಕೆಯನ್ನು ಈ 'ಆಹಾರ್ 2026' (AAHAR 2026) ಮೇಳವು ಒದಗಿಸಲಿದೆ. ಈ ಮೇಳವು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಮತ್ತು ಭಾರತ ವ್ಯಾಪಾರ ಉತ್ತೇಜನ ಸಂಸ್ಥೆಯ (ITPO) ಸಹಯೋಗದಲ್ಲಿ ನಡೆಯಲಿದೆ.

ಒಟ್ಟು ಐದು ದಿನದ ಆಹಾರ ಮೇಳದಲ್ಲಿ ಅನೇಕ ಉದ್ಯಮಿಗಳು ಪಾಲ್ಗೊಳ್ಳಲಿದ್ದು, ಉತ್ತಮ ಚರ್ಚೆಗಳು, ಒಂದಷ್ಟು ವ್ಯವಹಾರ ನಡೆಯಲಿದೆ. ವರ್ಷಗಳ ಕೋಲ್ಡ್-ಕಾಲಿಂಗ್, ನೆಟ್‌ವರ್ಕಿಂಗ್ ಮತ್ತು ಮಾರುಕಟ್ಟೆ ಸಂಶೋಧನೆಗಳು ಮೇಳದಲ್ಲಿ ಮುಖಾ ಮುಖಿ ಆಗಲಿವೆ. ಹೊಸ ತಲೆಮಾರಿನ ಉತ್ಪಾದಕರಾಗಲಿ ಅಥವಾ ತಂತ್ರಜ್ಞಾನ ಆಧಾರಿತ ಹಾಸ್ಪಿಟಾಲಿಟಿ ಸ್ಟಾರ್ಟಅಪ್ ಆಗಲಿ, ತಮ್ಮ ವ್ಯವಹಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಆಹಾರ ಮೇಳವು ಸೂಕ್ತ ಮಾರ್ಗಗಳನ್ನು ಒದಗಿಸಲಿದೆ. ಉದ್ಯಮಿಗಳಿಗೆ ಪ್ರಮುಖ ದಾರಿಗಳನ್ನು ಕಲ್ಪಿಸಿಕೊಡಲಿದೆ.
1,800ಕ್ಕೂ ಪ್ರದರ್ಶಕರ ಆಗಮನ
ಸ್ಥಳೀಯ ತಯಾರಕರು ಅಥವಾ ರೆಸ್ಟೋರೆಂಟ್ ಹೆಚ್ಚಾಗಿ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿರುತ್ತವೆ. ಅವರಿಗೆ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಹೊಂದಲು AAHAR 2026 ಮಾರ್ಗದರ್ಶನ ಮಾಡುತ್ತದೆ. ಏಕೆಂದರೆ 1,800 ಕ್ಕೂ ಹೆಚ್ಚು ಪ್ರದರ್ಶಕರು, 1,00,000 ಕ್ಕಿಂತಲೂ ಹೆಚ್ಚು ವ್ಯವಹಾರ ವೀಕ್ಷಕರು ಆಗಮಿಸಲಿದ್ದಾರೆ. ಅವರ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಒಟ್ಟಾರೆ ವೇದಿಕೆಯು ಕೇಂದ್ರೀಕೃತ ಮಾರುಕಟ್ಟೆಯನ್ನು ಒದಗಿಸುತ್ತದೆ.
ಇನ್ನೂ ಸಂಸ್ಕರಿಸಿದ ಆಹಾರಗಳು, ಸಾವಯವ ಉತ್ಪನ್ನಗಳು ಮತ್ತು ವಿಶಿಷ್ಟ ಮಸಾಲೆಗಳ ಪ್ರಾದೇಶಿಕ ತಯಾರಕರು ಅಮೆರಿಕ, ಕೆನಡಾ ಮತ್ತು ಯುರೋಪ್‌ನ ಜಾಗತಿಕ ಸಂಸ್ಥೆಗಳ ಜೊತೆ ಒಡನಾಟ ಸಾಧಿಸಬಹುದು. ಈ ಸಾಮೀಪ್ಯವು ತಕ್ಷಣದ ಮೌಲ್ಯಮಾಪನಕ್ಕೆ ಮತ್ತು ಮುಖ್ಯವಾಗಿ, HoReCa (ಹೋಟೆಲ್, ರೆಸ್ಟೋರೆಂಟ್ ಮತ್ತು ಕೆಫೆ) ಖರೀದಿ ಮುಖ್ಯಸ್ಥರು ಹಾಗೂ ಚಿಲ್ಲರೆ ವ್ಯಾಪಾರ ವಿತರಕರೊಂದಿಗೆ ಮೌಲ್ಯಯುತ ಒಪ್ಪಂದಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.
ಉದ್ಯಮಿಗಳ ಗೊಂದಲಗಳಿಗೆ ಪರಿಹಾರ
ಆಹಾರ ಮೇಳವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲಿ ನಡೆಯುವ ಪ್ರಮುಖ ಸಭೆಗಳು ಆಹಾರ ವಲಯದಲ್ಲಿನ ಅನಗತ್ಯ ಗೊಂದಲಗಳನ್ನು ತಪ್ಪಿಸಲಿವೆ. ಮಾರಾಟಗಾರರು ಮತ್ತು ಸಾಂಸ್ಥಿಕ ಖರೀದಿದಾರರ ನಡುವೆ ನೇರ, ವೈಯಕ್ತಿಕ ಸಂವಹನವನ್ನು ಸಾಧಿಸಲು ನೆರವಾಗುತ್ತದೆ. ರಾಜ್ಯದ ಉದ್ಯಮಿಗಳಿಗೆ, ಅಂತಾರಾಷ್ಟ್ರೀಯ ಆಮದುದಾರರು ಮತ್ತು ದೊಡ್ಡ ಪ್ರಮಾಣದ ದೇಶೀಯ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ವೃತ್ತಿಪರ ಹಾಗೂ ಸಂರಚನಾತ್ಮಕ ಚೌಕಟ್ಟಿನಲ್ಲಿ ಪ್ರಸ್ತುತಪಡಿಸಲು ಪೂರಕ ವಾತಾವರಣ ನಿರ್ಮಿಸುತ್ತದೆ.
ಮೇಳದ ವೈಶಿಷ್ಟ್ಯೆಗಳು
ವ್ಯಾಪಾರ ಒಪ್ಪಂದಗಳ ಆಚೆಗೆ ಉದ್ಯಮಕ್ಕೆ ಸಂಬಂಧಿಸಿದ ಜ್ಞಾನ ವಿನಿಮಯವಾಗುತ್ತದೆ. ಇದರಿಂದ ಉದ್ಯಮಕ್ಕೆ ಪರಿವರ್ತನೆ ತರಲು ಸಾಧ್ಯವಾಗುತ್ತದೆ. 2026ರ ಆವೃತ್ತಿಯಲ್ಲಿ, ವಿಶೇಷ ತಾಂತ್ರಿಕ ಅಧಿವೇಶನಗಳು, ಸಂವಾದ, ಸಭೆಗಳು ಹೆಚ್ಚಿನ ಗಮನ ಸೆಳೆಯಲಿವೆ ಮುಖ್ಯವಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಮೇಳದಲ್ಲಿ "ಆಯುರ್ವೇದ ಆಹಾರ" ಮಾನದಂಡಗಳು ಮತ್ತು ರಫ್ತು ಇನ್ನಿತರ ಪ್ರಮುಖ ಮಾಹಿತಿಗಳನ್ನು ನೇರವಾಗಿ ಉದ್ಯಮಿಗಳಿಗೆ ತಿಳಿಸಲಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಆಧಾರಿತ ಪೂರೈಕೆ ಸರಪಳಿ ಬಗ್ಗೆ, ಕೋಲ್ಡ್ ಸ್ಟೋರೇಜ್ ನಿರ್ವಹಣೆ ಕುರಿತು ಅಡುಗೆ ಡೆಮೊಗಳು ಹಾಗೂ ಕಾರ್ಯಾಗಾರಗಳು ನಡೆಯಲಿವೆ. ಅಲ್ಲದೇ ಸುಸ್ಥಿರ ಪ್ಯಾಕೇಜಿಂಗ್, ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್, ಕ್ವಿಕ್ ಸರ್ವಿಸ್ ಸ್ಥಾಪಕರಿಗೆ ಅತ್ಯಗತ್ಯವಾದ ಪರಿಹಾರಗಳನ್ನು ನೀಡಲಾಗುತ್ತದೆ. "ಡಿಜಿಟಲ್ ಇಂಡಿಯಾ" ಕಲ್ಪನೆಯಡಿ ಆಹಾರ್ 2026 ತನ್ನ ಮೇಳಕ್ಕೆ ಬರುವ ಮತ್ತು ಬಾರದಿರುವ ಉದ್ಯಮಿಗಳು ಮೊಬೈಲ್ ಅಪ್ಲಿಕೇಶನ್ ಮೂಲಕವು ಪ್ರಯೋಜನ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಅಪ್ಲಿಕೇಶನ್ ಮೂಲಕ ಭಾಗವಹಿಸುವವರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಮೇಳದಲ್ಲಿ ಅನೇಕ ಆಹಾರ ಮಳಿಗೆಗಳಿಗೆ ಅವಕಶ ನೀಡಲಾಗಿದೆ. ಉದ್ಯಮಿಗಳು ಹಾಗೂ ರೆಸ್ಟೋರೆಮಟ್ ಮಾಲೀಕರೊಂದಿಗೆ ನೀವು ಸಂವಾದ ನಡೆಸಲು ಮೇಳದ ನೋಂದಣಿಯಿಂದ ಸಾಧ್ಯವಾಗುತ್ತದೆ. ಲೈವ್ ಶೆಫ್ ಡೆಮೊಗಳು ಮತ್ತು ಸರ್ಕಾರದ ಯೋಜನೆಗಳ ಪ್ರಕಟಣೆಗಳು ನೋಂದಾಯಿತರಿಗೆ ಸಿಗಲಿವೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications