Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು
Bengaluru Viral Tweet: ಬೆಂಗಳೂರಿನ ಬಗ್ಗೆ ನಾರ್ಥಿ ಯುವತಿಯೊಬ್ಬಳು ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವೈರಲ್ ಆಗುತ್ತಿದ್ದು ಕನ್ನಡಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಂಗಳೂರು ತುಂಬಾ ಬೋರಿಂಗ್ ಆಗಿದೆ. ಇಲ್ಲಿನ ಜನರಿಗೆ ಹಬ್ಬ ಮಾಡುವುದಕ್ಕೇ ಬರಲ್ಲ ಅಂತ ಹೇಳಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಕ್ಕೂ ನಾರ್ಥಿ ಮಾಡಿರುವ ಟ್ವೀಟ್‌ನಲ್ಲಿ ಏನಿದೆ, ಇದು ವೈರಲ್ ಆಗುತ್ತಿರುವುದು ಯಾಕೆ, ಇದಕ್ಕೆ ಕನ್ನಡಿಗರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವಂಶಿತಾ (Vanshita - @yourswriterly) ಎನ್ನುವ ಖಾತೆಯಿಂದ ಮಾಡಿರುವ ಟ್ವೀಟ್‌ಗೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿಗೆ ಹಬ್ಬಗಳನ್ನು ಹೇಗೆ ಆಚರಿಸಬೇಕೆಂದು ತಿಳಿದಿಲ್ಲ. ನಾನು ಈಗ ಮಧ್ಯಾಹ್ನ 1 ಗಂಟೆಗೆ ಹೊರಗೆ ಹೋದೆ ಮತ್ತು ಹೋಳಿ ಬಣ್ಣ ಬಳಿದಿರುವ ಯಾವೊಬ್ಬ ವ್ಯಕ್ತಿಯೂ ಕಾಣಲಿಲ್ಲ, ಮಕ್ಕಳು ಬಲೂನ್‌ಗಳನ್ನು ಎಸೆಯುತ್ತಿಲ್ಲ ರಸ್ತೆಬದಿಯಲ್ಲಿ ಯಾರೂ ಹೋಳಿ ಸಂಭ್ರಮವನ್ನು ಬಣ್ಣ ಬಳಿದು ಸಂಭ್ರಮಿಸುವುದು ಕಾಣಲಿಲ್ಲ. ಈ ಬೆಂಗಳೂರು ಏಕೆ ಇಷ್ಟೊಂದು ನೀರಸವಾಗಿದೆ ಎಂದು ನಾರ್ಥಿ ಯುವತಿ ಟ್ವೀಟ್ ಮಾಡಿದ್ದಾಳೆ.

ಈ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರು ತಿರುಗೇಟು ನೀಡಿದ್ದಾರೆ. ನಿಮ್ಮ 5 ನಿಮಿಷಗಳ ಖ್ಯಾತಿ ನಿಮಗೆ ಸಿಗಲಿ ಎಂದು ಆಶಿಸುತ್ತೇನೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುವುದಕ್ಕೆ ಬೇರೆ ಏನಾದರೂ ಮಾಡಿ ಹೋಗಿ ಎಂದು ನೆಟ್ಟಿಗರು ಹೇಳಿದ್ದಾರೆ.
Bengaluru Viral Tweet ಕನ್ನಡಿಗರು ಹೇಳಿದ್ದೇನು
ರಾಮನವಮಿಯ ಸಮಯದಲ್ಲಿ ಮನೆಯಿಂದ ಹೊರಗೆ ಬಂದು ನೋಡಿ, ರಸ್ತೆಯ ಪ್ರತಿ ಮೂಲೆಯಲ್ಲಿ ಜನರು ಪಾನಕ - ಮಜ್ಜಿಗೆಯನ್ನು ವಿತರಿಸುತ್ತಾರೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಅನೇಕ ಊರು ಹಬ್ಬಗಳು ಅನ್ನಮ್ಮ ದೇವಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಬೆಂಗಳೂರಿಗೆ ತನ್ನದೇ ಆದ ಹಬ್ಬವನ್ನು ಆಚರಿಸಲು ತಿಳಿದಿದೆ. ಬೆಂಗಳೂರಿಗೆ ತನ್ನದೇ ಹಿನ್ನೆಲೆ ಇದೆ ಎಂದು ರೋಹಿತ್ ಸಿಂಹ ಎನ್ನುವವರು ಹೇಳಿದ್ದಾರೆ.
ದಕ್ಷಿಣ ಭಾರತೀಯರು ಹೋಳಿ ಆಚರಿಸುವುದಿಲ್ಲ. ನೀವು ಕನ್ನಡ ನಾಡಿನಲ್ಲಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ. ನಾವು ನಿಮ್ಮಷ್ಟು ಆಚರಿಸುವುದಿಲ್ಲ, ವಿಶೇಷವಾಗಿ ಹೋಳಿಯನ್ನು ನಾವು ಪರಿಗಣಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ಡಿಜೆಗಾಗಿ ಮಾತ್ರ ಆಡುತ್ತಾರೆ ಅಷ್ಟೇ. ನೀವು ಕನ್ನಡ ನಾಡಿನಲ್ಲಿದ್ದಾಗ ಇದನ್ನೆಲ್ಲಾ ನಿರೀಕ್ಷಿಸಬೇಡಿ. ನಿಮ್ಮಿಂದ ನಾಗರಿಕ ಶಿಸ್ತು ಹೇಗೆ ನಾವು ನಿರೀಕ್ಷಿಸುವುದೇ ಇಲ್ಲವೂ ಅದೇ ರೀತಿ ಎಂದು ಗುರುಪ್ರಸಾದ್.ಎಸ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಗುರಗಾಂವ್‌ಗೆ ದಸರಾ ಆಚರಿಸುವುದು ಹೇಗೆಂದು ತಿಳಿದಿಲ್ಲ. ನಾನು ಬೆಳಿಗ್ಗೆ 7 ಗಂಟೆಗೆ ಹೊರಗೆ ಹೋದಾಗ ಒಂದೇ ಒಂದು ಬೊಂಬೆ ಅಲಂಕಾರ ಕಾಣಲಿಲ್ಲ. ಮಕ್ಕಳು ದೇವಾಲಯಗಳಲ್ಲಿ ಅಲಂಕೃತರಾಗಿ ಓಡಾಡುತ್ತಿಲ್ಲವೇ. ಜಂಬೂ ಸವಾರಿಯ ಪೋಸ್ಟರ್ ಕೂಡ ಇಲ್ಲ. ಈ ನಗರ ಏಕೆ ಇಷ್ಟೊಂದು ನೀರಸವಾಗಿದೆ ಎಂದು ಕನ್ನಡಿಗರು ಉತ್ತರ ಭಾರತದ ಆಚರಣೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ನಗರವನ್ನು ತೊರೆಯುವ ಸಮಯ ಫ್ರೆಂಡ್ಸ್ ಆದರೆ ರೋಟಿ ನಹಿ ಮಿಲೇಗಿ ಬಹಾರ್ (ಈ ನಗರವನ್ನು ಬಿಡಬೇಕು ಅನಿಸುತ್ತಿದೆ ಫ್ರೆಂಡ್ಸ್ ಆದರೆ ಏನು ಮಾಡಲಿ ಆಚೆ ಹೋದರೆ ಊಟ ಸಿಗಲ್ಲ) ಎಂದು ಕೆಲವು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
Kannada: ನಮ್ಮ ರಕ್ತವೇ ಕನ್ನಡ, ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ -
Political Trends: ನಿಂದಾ ರಾಜಕೀಯದ ದಾರಿ ತಪ್ಪಿದ ಪ್ರಜಾತಂತ್ರ: ಯಾವ ಮನೆಯ ಸಾಸಿವೆ ತರ ಹೊರಟಿದ್ದೀರಿ: ರಾಜಾರಾಂ ತಲ್ಲೂರು ಬರಹ












Click it and Unblock the Notifications