• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ- ಭಾರತ ಬಾಹ್ಯಾಕಾಶ ಪರಿಶೋಧನೆ 'ಪೋಸ್ಟರ್ ಸ್ಪರ್ಧೆ'ಗೆ ಆಹ್ವಾನ

By ಅನಿಲ್ ಆಚಾರ್
|

ಚೆನ್ನೈ, ಜುಲೈ 9: ಚೆನ್ನೈನಲ್ಲಿ ಇರುವ ಅಮೆರಿಕ ರಾಯಭಾರ ಕಚೇರಿಯಿಂದ ಪೋಸ್ಟರ್ ಸ್ಪರ್ಧೆ ಆಯೋಜಿಸಲಾಗಿದೆ. ಚಂದ್ರ ಮೇಲೆ ಇಳಿದ ಅಪೋಲೋ 11ರ 50ನೇ ವರ್ಷಾಚರಣೆ ಹಾಗೂ ಭಾರತದ ಎರಡನೇ ಲೂನಾರ್ ಉಡ್ಡಯನದ ಸಂಭ್ರಮಾಚರಣೆ ಭಾಗವಾಗಿ ಎಲ್ಲ ವಯೋಮಾನದವರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಪೋಸ್ಟರ್ ರಚನೆಯ ವಿಷಯ "ಅಮೆರಿಕ- ಭಾರತ ಬಾಹ್ಯಾಕಾಶ ಪರಿಶೋಧನೆ" ಎಂದು ನೀಡಲಾಗಿದೆ. ತಮಿಳುನಾಡು, ಕರ್ನಾಟಕ, ಕೇರಳ, ಪುದುಚೆರಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ನ ವಾಸಿಗಳು ತಮ್ಮ ಮೂಲ ರಚನೆಗಳನ್ನು ಇಮೇಲ್ ವಿಳಾಸ amcongenchennaicontest@gmail.com ಗೆ ಸಬ್ಜೆಕ್ಟ್ ಸಾಲಿನಲ್ಲಿ "Poster Contest 2019" ಎಂದು ನಮೂದಿಸಿ ಸಲ್ಲಿಸಬಹುದು. ರಚನೆ ಸಲ್ಲಿಕೆಗೆ ಜುಲೈ 31, 2019 ಕೊನೆ ದಿನವಾಗಿದೆ.

ಸಲ್ಲಿಕೆಯಾದ ರಚನೆಗಳಲ್ಲಿ ಅತ್ಯುತ್ತಮವಾದುದನ್ನು ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಜನರಲ್ ಒಳಗೊಂಡ ತಂಡವು ಆಯ್ಕೆ ಮಾಡಲಿದೆ. ಬಾಹ್ಯಾಕಾಶ ಪಯಣದ ಬಗ್ಗೆ ಪೋಸ್ಟರ್ ಇದ್ದು, ರಚನೆ ಸ್ವತಂತ್ರವಾಗಿರಬೇಕು, ಕಲಾತ್ಮಕವಾಗಿರಬೇಕು. ಅತ್ಯುತ್ತಮ ಪೋಸ್ಟರ್ ಗಳನ್ನು ಚೆನ್ನೈನ ಅಮೆರಿಕನ್ ಕೇಂದ್ರದಲ್ಲಿ ಪ್ರದರ್ಶಿಸಲಾಗುತ್ತದೆ.

ಚಂದ್ರಯಾನ I ಮತ್ತು IIರ ಬಗ್ಗೆ ಜುಲೈ 12ರಂದು ಬೆಳಗ್ಗೆ 10 ಗಂಟೆಗೆ ಡಾ.ಮೈಲ್ ಸ್ವಾಮಿ ಅಣ್ಣಾದುರೈ ಅವರಿಂದ ಮಾಹಿತಿ ನೀಡಲಾಗುತ್ತದೆ. ಅಮೆರಿಕ- ಭಾರತ ಬಾಹ್ಯಾಕಾಶ ಪರಿಶೋಧನೆ ಸಂಭ್ರಮಾಚರಣೆ ಸಲುವಾಗಿ ಜುಲೈನಲ್ಲಿ ಸಿನಿಮಾ ಸರಣಿ, ಉಪನ್ಯಾಸವನ್ನು ಅಮೆರಿಕ ಕೇಂದ್ರದಲ್ಲಿ ಆಯೋಜಿಸಲಾಗುತ್ತದೆ. ‌

ಇನ್ನೂ ಹೆಚ್ಚಿನ ವಿವರಗಳನ್ನು ಅಮೆರಿಕ ರಾಯಭಾರ ಜನರಲ್ ಚೆನ್ನೈ ಫೇಸ್ ಬುಕ್ ಪುಟದಲ್ಲಿ ಪಡೆಯಬಹುದು.

English summary
The U.S. Consulate General in Chennai is launching a poster contest during the month of July to commemorate the 50th anniversary of the Apollo 11 Moon Landing mission and celebrate India’s second lunar launch. The Consulate seeks poster submissions from space enthusiasts of all ages on the theme “U.S.-India Space Exploration.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X