• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2 ಕೋಟಿ ಕಟ್ಟಿ ಐಟಿ ಕೇಸ್ ನಿಂದ ಜಯಾ ಮುಕ್ತ?

By Mahesh
|

ಚೆನ್ನೈ, ಡಿ.1: ಸುಮಾರು 18 ವರ್ಷಗಳ ಹಿಂದಿನ ಆದಾಯ ತೆರಿಗೆ ಪ್ರಕರಣದಿಂದ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರಿಗೆ ಮುಕ್ತಿ ಸಿಕ್ಕಿದೆ. ಬಾಕಿ ಉಳಿಸಿಕೊಂಡಿದ್ದ 1.99 ಕೋಟಿ ರು ಮೊತ್ತ ಪಾವತಿಸಿದ ನಂತರ ಕೇಸ್ ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತು ಅವರ ಗೆಳತಿ ಶಶಿಕಲಾ ಅವರ ಶಶಿ ಎಂಟರ್‌ಪ್ರೈಸೆಸ್‌ ಕಂಪೆನಿ ವಿರುದ್ಧ ವಿರುದ್ಧದ ಆದಾಯ ತೆರಿಗೆ ಕೇಸ್ ಕೇಸ್‌ ದಾಖಲಾಗಿತ್ತು. 1993-94 ಮತ್ತು 1996-97ರಲ್ಲಿ ಆದಾಯ ಕರ ಪಾವತಿಸದ ಕುರಿತು ನಾಲ್ಕು ಕೇಸ್‌ ದಾಖಲಾಗಿತ್ತು. [ಜೈಲು ಬಿಟ್ಟ ಜಯಾ, ನಿಟ್ಟುಸಿರು ಬಿಟ್ಟ ಬೆಂಗಳೂರು]

ಕಳೆದ ವಾರ ಆದಾಯ ಕರ ಇಲಾಖೆ ಕೇಂದ್ರ ಕಾನೂನು ಸಚಿವಾಲಯದ ಅಭಿಪ್ರಾಯ ಪಡೆದುಕೊಂಡು ಈ ಕೇಸ್‌ಗಳನ್ನು ಹಿಂದೆಗೆಯಲು ನಿರ್ಧರಿಸಿತ್ತು. ಇದಕ್ಕಾಗಿ 2 ಕೋ. ರೂ. ದಂಡ ವಸೂಲು ಮಾಡಿ ಹಿಂದೆಗೆದುಕೊಳ್ಳಲಾಗಿದೆ ಎಂದು ಆದಾಯ ಕರ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ.

ಆರೋಪಿಗಳು ಬಾಕಿಯಿರುವ ತೆರಿಗೆ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಲು ತಯಾರಾದರೆ ಕೇಸ್‌ ಹಿಂದೆಗೆದುಕೊಳ್ಳಲು ಅಡ್ಡಿಯಿಲ್ಲ ಎಂದು ಕಾನೂನು ಸಚಿವಾಲಯದ ತಿಳಿಸಿತ್ತು. ಅದರಂತೆ, ಜಯಲಲಿತಾ ಅವರು30,83,887 ಲಕ್ಷ ರು ಹಾಗೂ ಶಶಿಕಲಾ ಅವರು 28,07,972 ಲಕ್ಷ ರು ದಂಡ ಕಟ್ಟಿದ್ದಾರೆ. ವಾರ್ಷಿಕ ಐಟಿ ರಿಟರ್ನ್ಸ್ ಸಲ್ಲಿಸದ ಕಾರಣ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ಒಟ್ಟಾರೆ ಶಶಿ ಎಂಟರ್‌ಪ್ರೈಸೆಸ್‌ ಕಂಪೆನಿ 1,99,90,000 ಹಣ ಪಾವತಿಸಿದೆ.

ಪ್ರಕರಣದ ವಿಚಾರಣೆಯನ್ನು ಜಡ್ಜ್ ಕಯಾಳ್ವಿಳಿ ಅವರು ಡಿ.11ಕ್ಕೆ ಮುಂದೂಡಿದ್ದಾರೆ.ಎಸಿಎಂಎಂ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ. ಐಟಿ ರಿಟರ್ನ್ಸ್ ಸಲ್ಲಿಸದ ಜಯಲಲಿತಾ ಹಾಗೂ ಶಶಿಕಲಾ ವಿರುದ್ಧ ಐಟಿ ಇಲಾಖೆ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು. ಇದನ್ನು ಪ್ರಶ್ನಿಸಿ ಜಯಾ ಅವರು ಹೈಕೋರ್ಟ್ ನಂತರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಜ.30 ರಂದು ವಿಚಾರಣೆಯನ್ನು ನಾಲ್ಕು ತಿಂಗಳಲ್ಲಿ ಮುಗಿಸುವಂತೆ ಕೆಳ ಹಂತದ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. [ಜಯಲಲಿತಾಗೆ ಜಾಮೀನು ಸಿಕ್ಕಿದ್ದೇಕೆ? ಆದೇಶ ಪ್ರತಿ ಓದಿ]

ಹಲವು ಬಾರಿ ವಿಚಾರಣೆ ಮುಂದೂಡಿಕೆ ನಂತರ ಮತ್ತೆ ಕೇಸ್ ವಿಚಾರಣೆಗೆ ಬರುವಷ್ಟರಲ್ಲಿ ಅಕ್ರಮ ಆಸ್ತಿ ಪ್ರಕರಣದ ಅಪರಾಧಿಯಾಗಿ ಜಯಲಲಿತಾ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದರು. ಅ.18ರಂದು ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದು ಚೆನ್ನೈಗೆ ಮರಳಿದರು. ಹೀಗಾಗಿ ಮೇಲ್ಕಂಡ ಪ್ರಕರಣ ಮುಂದೂಡಲ್ಪಟ್ಟು ಡಿ.1ಕ್ಕೆ ವಿಚಾರಣೆಗೆ ಬಂದಿತ್ತು. ಸೋಮವಾರ ಆರೋಪಿಗಳು ದಂಡ ಪಾವತಿಸಿದ ಹಿನ್ನೆಲೆಯಲ್ಲಿ ಐಟಿ ಇಲಾಖೆ ಕೇಸ್ ಹಿಂಪಡೆಯುವುದಾಗಿ ಕೋರ್ಟಿಗೆ ಹೇಳಿದ್ದಾರೆ.(ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AIADMK chief Jayalalithaa, her aide Sasikala and a firm in which they are partners have together paid Rs 1.99 crore as compounding fee, setting in motion the process for the closure of an 18-year-old Income Tax case against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more