Get Updates
Get notified of breaking news, exclusive insights, and must-see stories!

Sourav Ganguly: ಟಿ20 ವಿಶ್ವಕಪ್ 2026; ಸಂಜು ಆಟಕ್ಕೆ ಮನಸೋತು ಬಿಸಿಸಿಐಗೆ ಬಿಸಿ ಮುಟ್ಟಿಸಿದ 'ದಾದಾ' ಸೌರವ್ ಗಂಗೂಲಿ

Sourav Ganguly: ಟಿ20 ವಿಶ್ವಕಪ್‌ 2026ರ ಸೂಪರ್ 8 ಹಂತದ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಮಾಡಿ ಭಾರತದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಕೇವಲ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಗಮನ ಸೆಳೆದರು. ಇದರ ಬೆನ್ನಲ್ಲೇ ಅವರಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಇದೀಗ ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ಸಂಜು ಸ್ಯಾಮ್ಸನ್‌ಗೆ ಪ್ರಶಂಸೆಗಳ ಸುರಿಮಳೆ ಹರಿದುಬರುತ್ತಿದೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಸಂಜು ಅವರ ಈ 'ಈಡನ್ ಸ್ಪೆಷಲ್' ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Sourav Ganguly Backs Sanju Samson After Match-Winning 97 vs WI Ahead of T20 World Cup Semi-Final

ಸಂಜು ಟೀಕಾಕಾರರಿಗೆ ಗಂಗೂಲಿ ಖಡಕ್ ತಿರುಗೇಟು

ಗಂಗೂಲಿ ಅವರು ಸಂಜು ಆಟವನ್ನು ಕೊಂಡಾಡುವುದರ ಜೊತೆಗೆ, ಸ್ಯಾಮ್ಸನ್ ಸಾಮರ್ಥ್ಯವನ್ನು ಸದಾ ಟೀಕಿಸುತ್ತಿದ್ದವರಿಗೂ ಖಡಕ್ ಉತ್ತರ ನೀಡಿದ್ದಾರೆ. "ಸಂಜು ಒಬ್ಬ ಅಪ್ರತಿಮ ಪ್ರತಿಭೆ ಎಂಬುದನ್ನು ಈ ಪಂದ್ಯ ಸಾಬೀತುಪಡಿಸಿದೆ," ಎಂಬರ್ಥದಲ್ಲಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ 'ಸಂಜು ಮತ್ತೊಮ್ಮೆ ವಿಫಲ' ಎಂಬ ಮುಖ್ಯಾಂಶಗಳನ್ನು ಓದುತ್ತಿದ್ದೆವು. ಅವರು ಅಂದಿನ ಪರಿಸ್ಥಿತಿಗೆ ತಕ್ಕಂತೆ ಆಡಿದರು, ಅದು ಬಹಳ ಮುಖ್ಯವಾಗಿತ್ತು.

ಕಳೆದ ಆರು ತಿಂಗಳಲ್ಲಿ ತಂಡದಲ್ಲಿ ಸ್ಥಾನ ಸಿಗದೆ ಒದ್ದಾಡಿದ್ದಾರೆ. ಇಶಾನ್ ಕಿಶನ್ ಆರಂಭಿಕ ಆಟಗಾರನಾಗಿ ಬಂದಿದ್ದಿರಲಿ ಅಥವಾ ಬೇರೆ ಯಾರೇ ಬಂದಿದ್ದಿರಲಿ ಇಂದು ಸಂಜು ಇಂತಹ ಪ್ರದರ್ಶನ ನೀಡಿದ್ದಾರೆಂದರೆ, ಅದು ನಮಗೆಲ್ಲರಿಗೂ ಒಂದು ಪಾಠ ಕಲಿಸುತ್ತದೆ ಎಂದು ಗಂಗೂಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ತಿಳಿಸಿದರು.

ಸಂಜು ಆಟ ಮೆಚ್ಚಿದ 'ದಾದಾ'

ಪಂದ್ಯದ ಒತ್ತಡದ ಸಮಯದಲ್ಲಿ ಸಂಜು ತೋರಿದ ಉತ್ತಮ ಪ್ರದರ್ಶನವನ್ನು ಗಂಗೂಲಿ ಮೆಚ್ಚಿದ್ದಾರೆ. ಹಿಂದೆ ಸಂಜು ವಿಫಲರಾದಾಗಲೆಲ್ಲಾ ಅವರನ್ನು ಟೀಕಿಸುತ್ತಿದ್ದವರನ್ನು ನೆನಪಿಸುವ ಮೂಲಕ ಈಗಿನ ಅವರ ಸಾಧನೆಯನ್ನು ಎತ್ತಿ ತೋರಿಸಿದ್ದಾರೆ. ತಂಡದಲ್ಲಿ ಸ್ಥಾನಕ್ಕಾಗಿ ಪೈಪೋಟಿ ಇದ್ದರೂ, ಸಂಜು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ತಂಡದ ಗೌರವವನ್ನು ಕಾಪಾಡಿದ್ದಾರೆ ಎಂದು ಗಂಗೂಲಿ ಅಭಿಪ್ರಾಯವ್ಯಕ್ಯಪಡಿಸಿದರು.

ಬಿಸಿಸಿಐಗೆ ಬಿಸಿ ಮುಟ್ಟಿಸಿದ 'ದಾದ'

"ವಿಶ್ವಕಪ್‌ಗಿಂತ ಸ್ವಲ್ಪ ಮುಂಚೆ, 'ಸಂಜು ಮತ್ತೊಮ್ಮೆ ವಿಫಲ', 'ಅವರು ಸ್ಥಾನ ಪಡೆಯಲು ಅರ್ಹರಲ್ಲ', 'ಭಾರತದಲ್ಲಿ ಇಷ್ಟೊಂದು ಪ್ರತಿಭೆಗಳಿರುವಾಗ ಶುಭ್‌ಮನ್ ಗಿಲ್ ಏಕೆ ತಂಡದಲ್ಲಿಲ್ಲ?' ಎಂಬ ಮುಖ್ಯಾಂಶಗಳನ್ನು ನಾನು ಓದುತ್ತಿದ್ದೆ. ಆದರೆ, ಇಂದು ಅದೇ ಹುಡುಗ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿ ನಿಮ್ಮನ್ನು ಸೆಮಿಫೈನಲ್‌ಗೆ ಕರೆದೊಯ್ದಿದ್ದಾರೆ," ಎಂದು ಪರೋಕ್ಷವಾಗಿ ಬಿಸಿಸಿಐಗೆ ಗಂಗೂಲಿ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.

ವಿಶ್ವಕಪ್ ಆಯ್ಕೆ ಪ್ರಕ್ರಿಯೆಯ ಸಮಯದಲ್ಲಿ ಸಂಜು ಎದುರಿಸಿದ ತೀವ್ರ ಟೀಕೆಗಳನ್ನು ಗಂಗೂಲಿ ನೆನಪಿಸಿದ್ದಾರೆ. ಸಂಜು ಬದಲು ಗಿಲ್ ಅವರಂತಹ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳ ನಡುವೆಯೂ ಸಂಜು ತಮ್ಮ ಬೆಲೆ ಏನೆಂದು ತೋರಿಸಿಕೊಟ್ಟಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಪಂದ್ಯಗಳಿಗಿಂತ ಕ್ವಾರ್ಟರ್ ಫೈನಲ್‌ನಂತಹ ಅತ್ಯಂತ ಒತ್ತಡದ ಪಂದ್ಯದಲ್ಲಿ ಸಂಜು ನೀಡಿದ ಪ್ರದರ್ಶನವು ಅವರ ಸಾಮಾರ್ಥ್ಯ ಏನೆಂಬುದನ್ನು ತೋರಿಸಿದೆ ಎಂದು ಹೇಳಿದರು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುತ್ತಿದ್ದು, ಈ ಹಂತದಕ್ಕೆ ತಲುಪಲು ಮುಖ್ಯ ಕಾರಣವೇ ವೆಸ್ಟ್‌ ಇಡೀಸ್‌ ವಿರುದ್ಧ ಸಂಜು ಸ್ಯಾಮ್ಸನ್‌ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನ. ಇದು ನೆನಪಿನಲ್ಲಿ ಉಳಿಯುವಂತಹ ಕ್ಷಣವಾಗಲಿದೆ. ಇನ್ನೂ ಇಂಗ್ಲೆಂಡ್ ತಂಡವು ಸದ್ಯ ಅದ್ಭುತ ಫಾರ್ಮ್‌ನಲ್ಲಿ ಇರುವುದನ್ನು ಗಮನಿಸಿದರೆ, ಭಾರತ ತಂಡದಲ್ಲಿ ಇನ್ನೂ ಸುಧಾರಣೆ ಆಗಬೇಕಿದೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ತಂಡವನ್ನು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ ಎಂಬುದು ಭಾರತಕ್ಕೆ ಚೆನ್ನಾಗಿ ತಿಳಿದಿದೆ. ವಾಸ್ತವವಾಗಿ, ಪ್ರಸ್ತುತ ಭಾರತೀಯ ತಂಡದ ಕೆಲವು ಸದಸ್ಯರು 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಸೋಲಿನ ಭಾಗವಾಗಿದ್ದರು.

ವಾಂಖೆಡೆಯ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಪೂರಕವಾಗಿರುವುದರಿಂದ, ಸಂಜು ಸ್ಯಾಮ್ಸನ್ ಅಥವಾ ಸೂರ್ಯಕುಮಾರ್ ಯಾದವ್ ಅವರಲ್ಲಿ ಯಾರು ಅಬ್ಬರಿಸಬಹುದು ಎಂದು ನೀವು ಭಾವಿಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪಂದ್ಯದ ಸಂಭವನೀಯ ಹನ್ನೊಂದರ ಬಳಗದ ಬಗ್ಗೆ ಮಾಹಿತಿ ಬೇಕಿದ್ದರೆ ಕೇಳಿ ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+