ಎಲಾನ್ ಮಸ್ಕ್ 60 ಬಿಲಿಯ ಡಾಲರ್ ನೀಡಿ ಖರೀದಿಸಿದ ಕಂಪನಿ ಕರ್ಸರ್‌ನ ಸ್ಥಾಾಪಕರು ಈ ಹುಡುಗರು!

ಭಾರತ ಮತ್ತು ಪಾಕಿಸ್ತಾಾನದ ಎರಡರ ಹೆಸರೂ ಒಟ್ಟಿಗೆ ಕೇಳಿದಾಗ ಸಾಮಾನ್ಯವಾಗಿ ರಾಜಕೀಯ ಉದ್ವಿಗ್ನತೆ, ಗಡಿ ವಿವಾದ ಮತ್ತು ಸಂಘರ್ಷದ ಸುದ್ದಿಗಳೇ ನೆನಪಾಗುತ್ತವೆ. ಆದರೆ ಸಿಲಿಕಾನ್ ವ್ಯಾಾಲಿಯಿಂದ ಬಂದಿರುವ ಒಂದು ಯಶೋಗಾಥೆಯಲ್ಲಿ ಈ ಎಲ್ಲದರಾಚೆ ಒಂದು ಬಾಂಧವ್ಯದ, ಜೊತೆಗಾರಿಕೆಯ, ಪ್ರತಿಭೆಯ ಕಥೆಯಿದೆ. ಭಾರತೀಯ ಮೂಲದ ಯುವಕ ಅಮನ್ ಸಾಂಗರ್ ಮತ್ತು ಪಾಕಿಸ್ತಾಾನದ ಕರಾಚಿಯಲ್ಲಿ ಬೆಳೆದ ಸುವಾಲೆ ಆಸಿಫ್ ಎಂಬ ಇಬ್ಬರು ಯುವಕರು ಸೇರಿ ನಿರ್ಮಿಸಿದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕೋಡಿಂಗ್ ಸ್ಟಾರ್ಟಪ್ ಕರ್ಸರ್ (cursor) ಇಂದು ಜಗತ್ತಿನ ಗಮನ ಸೆಳೆದಿದೆ.

ಈ ಕಂಪನಿಯ ಮಾತೃ ಸಂಸ್ಥೆ Anysphere ಅನ್ನು ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ 60 ಬಿಲಿಯನ್ ಡಾಲರ್ ನೀಡಿ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದ ಮಾಡಿದೆ. ಇದರ ಪರಿಣಾಮವಾಗಿ ಈ ಕಂಪನಿಯ ನಾಲ್ವರು ಸಂಸ್ಥಾಾಪಕರು ಹೊಸ ಬಿಲಿಯನೇರ್‌ಗಳಾಗಿದ್ದಾರೆ.

Elon Musk

ಅಮನ್ ಸಾಂಗರ್ ಭಾರತೀಯ ಮೂಲದ ಕುಟುಂಬದಲ್ಲಿ ಬೆಳೆದರೆ, ಸುವಾಲೆ ಆಸಿಫ್ ಪಾಕಿಸ್ತಾನದ ಕರಾಚಿಯಲ್ಲಿ ಬೆಳೆದವರು. ಇಬ್ಬರೂ ಅಮೆರಿಕದ ಪ್ರತಿಷ್ಠಿತ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಾಲಜಿ (ಎಂಐಟಿ) ಯಲ್ಲಿ ಓದುತ್ತಿದ್ದಾಗ ಪರಿಚಯವಾದರು. ವಿಭಿನ್ನ ದೇಶಗಳಿಂದ ಬಂದಿದ್ದರೂ, ಇಬ್ಬರನ್ನೂ ಒಗ್ಗೂಡಿಸಿದ್ದು ತಂತ್ರಜ್ಞಾನದ ಮೇಲಿನ ಆಸಕ್ತಿ ಮತ್ತು ಕೋಡಿಂಗ್ ಮೇಲಿನ ಪ್ರೀತಿ. ಅಲ್ಲಿಯೇ ಅವರು ತಮ್ಮ ಸಹಪಾಠಿಗಳಾದ ಮೈಕಲ್ ಟ್ರುಯೆಲ್ ಮತ್ತು ಆರ್ವಿಡ್ ಲುನ್ನೆೆಮಾರ್ಕ್ ಅವರೊಂದಿಗೆ ಸೇರಿ 2022ರಲ್ಲಿ ಕರ್ಸರ್ ಅನ್ನು ಸ್ಥಾಾಪಿಸಿದರು.

ಬೆಂಗಳೂರಿಗೆ Tesla ಗ್ರ್ಯಾಂಡ್ ಎಂಟ್ರಿ; 681 ಕಿಮೀ ರೇಂಜ್‌ನ ಮಾಡೆಲ್ ವೈಎಲ್ ಕಾರು ಅನಾವರಣ
ಬೆಂಗಳೂರಿಗೆ Tesla ಗ್ರ್ಯಾಂಡ್ ಎಂಟ್ರಿ; 681 ಕಿಮೀ ರೇಂಜ್‌ನ ಮಾಡೆಲ್ ವೈಎಲ್ ಕಾರು ಅನಾವರಣ

ಕರ್ಸರ್ ಎಂದರೇನು?

ಇದೊಂದು ಎಐ ಆಧಾರಿತ ಕೋಡಿಂಗ್ ಸಹಾಯಕ ಸಾಧನ. ಪ್ರೋಗ್ರಾಮರ್‌ಗಳು ಸಾಫ್ಟ್‌ವೇರ್ ಬರೆಯುವಾಗ, ದೋಷಗಳನ್ನು ಪತ್ತೆೆಹಚ್ಚುವಾಗ ಅಥವಾ ಕೋಡ್ ಸುಧಾರಿಸುವಾಗ ಈ ಸಾಧನ ಸಹಾಯ ಮಾಡುತ್ತದೆ. ಬಳಕೆದಾರರು ಸರಳ ಭಾಷೆಯಲ್ಲಿ ಸೂಚನೆ ನೀಡಿದರೆ, ಎಐ ಆಧಾರದ ಮೇಲೆ ಕೋಡ್ ಬರೆಯಲು, ತಿದ್ದುಪಡಿ ಮಾಡಲು ಮತ್ತು ಪರಿಶೀಲಿಸಲು ಸಾಧ್ಯವಾಗುತ್ತದೆ. ಇದು ವಿವಿಧ ಎಐ ಮಾದರಿಗಳನ್ನು ಬಳಸುವ ಅವಕಾಶವನ್ನು ನೀಡುವುದರಿಂದ ಡೆವಲಪರ್‌ಗಳಲ್ಲಿ ವೇಗವಾಗಿ ಜನಪ್ರಿಯವಾಯಿತು.

ಎಐ ಕೋಡಿಂಗ್ ಕ್ಷೇತ್ರದಲ್ಲಿ ಈಗಾಗಲೇ ಅನೇಕ ದೊಡ್ಡ ಕಂಪನಿಗಳು ಸ್ಪರ್ಧೆಯಲ್ಲಿದ್ದವು. ಆದರೂ ಕರ್ಸರ್ ತನ್ನ ವಿಶೇಷ ಸಾಮರ್ಥ್ಯಗಳಿಂದ ಬೇಗನೆ ಮಾರುಕಟ್ಟೆಯಲ್ಲಿ ಸ್ಥಾಾನ ಗಳಿಸಿತು. ವಿದ್ಯಾರ್ಥಿಗಳ ಸಣ್ಣ ಯೋಜನೆಯಾಗಿ ಆರಂಭವಾದ ಕಂಪನಿ ಕೆಲವೇ ವರ್ಷಗಳಲ್ಲಿ ಲಕ್ಷಾಂತರ ಪ್ರೋಗ್ರಾಮರ್‌ಗಳು ಬಳಸುವ ಜಾಗತಿಕ ವೇದಿಕೆಯಾಗಿ ಬೆಳೆಯಿತು. ಹಲವು ಪ್ರಮುಖ ಕಂಪನಿಗಳು ಕೂಡ ಕರ್ಸರ್ ಸೇವೆಗಳನ್ನು ಬಳಸಲು ಆರಂಭಿಸಿದವು. ವಿಶೇಷವಾಗಿ ಭಾರತ ಅದರ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿ ಹೊರಹೊಮ್ಮಿತು.

ಬಿಲಿಯನೇರ್‌ಗಳಾದ ವಿದ್ಯಾಾರ್ಥಿಗಳು

Anysphere ಕಂಪನಿಯ ಮೌಲ್ಯ ಇದೀಗ 60 ಬಿಲಿಯನ್ ಡಾಲರ್‌ಗೆ ಏರಿದೆ. ಕೆಲವೇ ತಿಂಗಳುಗಳ ಹಿಂದೆ ಇದ್ದ ಮೌಲ್ಯದ ದುಪ್ಪಟ್ಟು ಇದು. ಈ ಒಪ್ಪಂದದ ಮೂಲಕ ಅಮನ್ ಸಾಂಗರ್ ಮತ್ತು ಸುವಾಲೆ ಆಸಿಫ್ ತಲಾ ಸುಮಾರು 2.7 ಬಿಲಿಯ ಡಾಲರ್ ಮೌಲ್ಯದ ಸ್ಪೇಸ್‌ಎಕ್ಸ್ ಷೇರುಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತವೆ. ಇದರಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿ ಅವರ ವಯಸ್ಸು. ಅಮನ್ ಸಾಂಗರ್ ಕೇವಲ 25 ವರ್ಷದವರು. ಸುವಾಲೆ ಆಸಿಫ್ 26 ವರ್ಷದವರು. ಕೆಲ ವರ್ಷಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳಾಗಿದ್ದ ಅವರು ಇಂದು ಜಗತ್ತಿನ ಅತಿ ಕಿರಿಯ ಸ್ವಯಂನಿರ್ಮಿತ ಬಿಲಿಯನೇರ್‌ಗಳ ಪಟ್ಟಿಗೆ ಸೇರುವ ಮಟ್ಟದ ಯಶಸ್ಸು ಸಾಧಿಸಿದ್ದಾರೆ.

Grok AI: ಗ್ರೋಕ್ - ಎಐ ಇದನ್ನೂ ಮಾಡುತ್ತೆ ಎಂದ ಎಲಾನ್ ಮಸ್ಕ್! Viral Video
Grok AI: ಗ್ರೋಕ್ - ಎಐ ಇದನ್ನೂ ಮಾಡುತ್ತೆ ಎಂದ ಎಲಾನ್ ಮಸ್ಕ್! Viral Video

ಅಮನ್ ಸಾಂಗರ್ ಯಾರು?

ಅಮನ್ ಸಾಂಗರ್ ಅಮೆರಿಕಕ್ಕೆೆ ವಲಸೆ ಹೋದ ಭಾರತೀಯ ದಂಪತಿಯ ಪುತ್ರ. ಅವರ ತಂದೆ ಅರವಿಂದ್ ಸಾಂಗರ್ ಐಐಟಿ ಬಾಂಬೆ ಹಳೆಯ ವಿದ್ಯಾರ್ಥಿ. ಅಮನ್ ತಾಯಿ ಶಿಲ್ಪ ಸಾಂಗರ್ ಅವರು ಆರ್ಥೊಡಾಂಟಿಸ್ಟ್, ಉದ್ಯಮಿ ಹಾಗೂ ಏಂಜಲ್ ಹೂಡಿಕೆದಾರರು. ಮುಂಬೈನಲ್ಲಿ ಬೆಳೆದವರು. ಅರವಿಂದ್ ಮತ್ತು ಶಿಲ್ಪ ನ್ಯೂಯಾರ್ಕ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಪರಿಚಯವಾಗಿ, ಪ್ರೀತಿಸಿ ವಿವಾಹವಾದರು. ಈ ದಂಪತಿಗೆ ಅಮನ್ ಜೊತೆಗೆ ಒಬ್ಬ ಮಗಳೂ ಇದ್ದಾಳೆ. ಅಮನ್ ಸಾಂಗರ್ ಅಮೆರಿಕದಲ್ಲೇ ಬೆಳೆದು, ನ್ಯೂಯಾರ್ಕ್‌ನ ಹೊರೇಸ್ ಮನ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಸ್ಕ್ವ್ಯಾಷ್ ಕ್ರೀಡೆಯಲ್ಲಿಯೂ ಆಸಕ್ತ.

ಎಲಾನ್ ಮಸ್ಕ್ ಖರೀದಿಸಿದ್ದೇಕೆ?

ಇದು ಕೇವಲ ಕೋಡಿಂಗ್ ಸಾಫ್ಟ್‌ವೇರ್ ಖರೀದಿಯಲ್ಲ. ಎಲಾನ್ ಮಸ್ಕ್ ಕಳೆದ ಕೆಲವು ವರ್ಷಗಳಿಂದ ಎಐ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಲಕ್ಷಾಂತರ ಬಳಕೆದಾರರನ್ನು ಹೊಂದಿರುವ ಮತ್ತು ಅತ್ಯಾಧುನಿಕ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಕರ್ಸರ್ ಅವರ ಎಐ ಕನಸುಗಳಿಗೆ ಬಲ ನೀಡಬಲ್ಲ ಕಂಪನಿಯಾಗಿದೆ. ಹೀಗಾಗಿ ಈ ಸ್ವಾಧೀನ ಮಸ್ಕ್ ಅವರ ಎಐ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆ.

ಭಾರತೀಯ ಮೂಲದ ಯುವಕ ಮತ್ತು ಪಾಕಿಸ್ತಾನಿ ಯುವಕ ಸಾವಿರಾರು ಕಿಲೋಮೀಟರ್ ದೂರದ ವಿಶ್ವವಿದ್ಯಾಲಯದಲ್ಲಿ ಭೇಟಿಯಾದರು. ಇಬ್ಬರೂ ಸೇರಿ ಕಂಪನಿ ಕಟ್ಟಿದರು. ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಸ್ಪರ್ಧಿಸಿದರು. ಕೊನೆಗೆ ಅವರ ತಂತ್ರಜ್ಞಾನವನ್ನು ಎಲಾನ್ ಮಸ್ಕ್‌ರಂತಹ ಉದ್ಯಮಿ ಖರೀದಿಸಲು ಮುಂದಾದ ಮಟ್ಟಕ್ಕೆ ಬೆಳೆಸಿದರು. ಪ್ರತಿಭೆ, ಸ್ನೇಹ ಮತ್ತು ನಾವೀನ್ಯತೆಗೆ ಗಡಿಗಳಿಲ್ಲ. ಸಹಕಾರ ಮತ್ತು ಕನಸುಗಳು ಗಡಿಗಳನ್ನು ಮೀರಬಲ್ಲವು.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+