Viral : ರ‍್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ‍್ಯಾಪಿಡೋ ರೈಡರ್
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ಮತ್ತು ಕಥೆಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮ ಮುಖದಲ್ಲಿ ನಗು ತರಿಸಿದರೆ, ಮತ್ತೆ ಕೆಲವು ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತವೆ. ಜೊತೆಗೆ ಇನ್ನು ಕೆಲವು ಬದುಕಿನ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತವೆ. ಇದೀಗ ಇಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಹೃದಯ ಮುಟ್ಟಿದೆ.
ಕೆಲಸದ ಅವಸರದಲ್ಲಿದ್ದ ಯುವಕನೊಬ್ಬ ರ‍್ಯಾಪಿಡೋ (Rapido) ಬೈಕ್ ಬುಕ್ ಮಾಡಿದ್ದ. ಆದರೆ, ತನ್ನನ್ನು ಕರೆದೊಯ್ಯಲು ಬಂದ ರೈಡರ್ ಯಾರೆಂದು ತಿಳಿದಾಗ ಆತನಿಗೆ ಆಶ್ಚರ್ಯವಾಯಿತು. ಏಕೆಂದರೆ ಆ ರೈಡರ್ ಶಾಲೆಯ ದಿನಗಳಲ್ಲಿ ಆತನದೇ ತರಗತಿಯ 'ಕ್ಲಾಸ್ ಟಾಪರ್' ಆಗಿದ್ದ. ಈ ಆಕಸ್ಮಿಕ ಭೇಟಿ ಮತ್ತು ಅವರ ನಡುವೆ ನಡೆದ ಸಂಭಾಷಣೆಯನ್ನು ಎಕ್ಸ್ (ಟ್ವಿಟರ್) ಖಾತೆಯೊಂದು ಹಂಚಿಕೊಂಡಿದ್ದು, ಈಗ ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಘಟನೆಯ ಹಿನ್ನೆಲೆ ಏನು?
ಉಮರ್ ಎಂಬ ಯುವಕನಿಗೆ ಕೆಲಸಕ್ಕೆ ಹೋಗಲು ತಡವಾಗುತ್ತಿತ್ತು. ಹೀಗಾಗಿ ಆತ ಆತುರದಿಂದ ರ‍್ಯಾಪಿಡೋ ರೈಡ್ ಒಂದನ್ನು ಬುಕ್ ಮಾಡಿದ್ದ. ಬುಕ್ಕಿಂಗ್ ಖಚಿತವಾದಾಗ ಆತನ ಮೊಬೈಲ್ ಪರದೆಯ ಮೇಲೆ ರೈಡರ್ ಹೆಸರು 'ಚಂದನ್' ಎಂದು ತೋರಿಸಿದೆ. ಮೊದಲು ಉಮರ್ ಇದನ್ನು ಅಷ್ಟಾಗಿ ಗಮನಿಸಲಿಲ್ಲ. ಆದರೆ, ಆ ಹೆಸರನ್ನು ಮತ್ತೆ ಮತ್ತೆ ನೋಡಿದಾಗ, ಇದು ಶಾಲೆಯಲ್ಲಿ ತನ್ನ ತರಗತಿಗೆ ಪ್ರಥಮ ಸ್ಥಾನ ಪಡೆಯುತ್ತಿದ್ದ ಅದೇ ಚಂದನ್ ಇರಬಹುದೇ ಎಂಬ ಅನುಮಾನ ಮೂಡಿದೆ.
ಸ್ವಲ್ಪ ಸಮಯದ ನಂತರ ರ‍್ಯಾಪಿಡೋ ರೈಡರ್ ಅಲ್ಲಿಗೆ ಬಂದಿದ್ದಾನೆ. ಆತನನ್ನು ನೋಡಿದ ಉಮರ್, ತಮಾಷೆಯಾಗಿ "ಹೇ, ರ‍್ಯಾಪಿಡೋ ಭೈಯಾ!" ಎಂದು ಕರೆದಿದ್ದಾನೆ. ಇದಕ್ಕೆ ನಗುಮುಖದಿಂದಲೇ ಪ್ರತಿಕ್ರಿಯಿಸಿದ ಚಂದನ್, "ಅರೆ, ಮೊದಲು ನನಗೆ ಓಟಿಪಿ (OTP) ಹೇಳು" ಎಂದಿದ್ದಾನೆ. ಆ ಕ್ಷಣದಲ್ಲಿ ಇಬ್ಬರ ನಡುವೆ ನಡೆದ ಸಣ್ಣ ಸಂಭಾಷಣೆ ಬದುಕಿನ ದೊಡ್ಡ ಪಾಠವನ್ನು ಸಾರುವಂತಿತ್ತು.
ಬದುಕು ಅನಿರೀಕ್ಷಿತ ಎಂದ ಟಾಪರ್
ನೀನು ರ‍್ಯಾಪಿಡೋ ಓಡಿಸಲು ಯಾವಾಗ ಶುರು ಮಾಡಿದೆ? ಎಂದು ಉಮರ್ ಅಚ್ಚರಿಯಿಂದ ಕೇಳಿದ್ದಾನೆ. ಇದಕ್ಕೆ ಅತ್ಯಂತ ಸರಳವಾಗಿ ಉತ್ತರಿಸಿದ ಚಂದನ್, "ಗೆಳೆಯಾ, ಜೀವನ ಯಾವಾಗಲೂ ನಾವು ಅಂದುಕೊಂಡಂತೆಯೇ ಸಾಗುವುದಿಲ್ಲ. ಆದರೆ, ಪರವಾಗಿಲ್ಲ. ನೀನು ಚಿಂತೆ ಮಾಡಬೇಡ, ನಾನು ನಿನ್ನಿಂದ ಹಣ ಪಡೆಯುವುದಿಲ್ಲ" ಎಂದು ಸಮಾಧಾನದ ಮಾತುಗಳನ್ನಾಡಿದ್ದಾನೆ.
ನೀನು ನಮ್ಮ ಕ್ಲಾಸ್ ಟಾಪರ್ ಆಗಿದ್ದೆ ಎಂಬುದನ್ನು ಉಮರ್ ನೆನಪಿಸಿದಾಗ, ಮೃದುವಾಗಿ ನಕ್ಕ ಚಂದನ್, "ನಾನು ರ‍್ಯಾಪಿಡೋ ಓಡಿಸುತ್ತೇನೆ ಮತ್ತು ನೀನು ನನ್ನ ಗ್ರಾಹಕನಾಗುತ್ತೀಯ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ಬದುಕು ಬಹಳ ಅನಿರೀಕ್ಷಿತ. ಈಗ ಸುಮ್ಮನೆ ಕೂತ್ಕೋ, ನಾನು ನಿನ್ನನ್ನು ಸುರಕ್ಷಿತವಾಗಿ ಡ್ರಾಪ್ ಮಾಡುತ್ತೇನೆ" ಎಂದು ಹೇಳಿ ಬೈಕ್ ಚಲಾಯಿಸಿದ್ದಾನೆ.
ಅಂಕಗಳೇ ಭವಿಷ್ಯವನ್ನು ನಿರ್ಧರಿಸುವುದಿಲ್ಲ
'ಭಾರತ್ ಮಾತಾ ಕೆ ಸೇವಕ್' ಎಂಬ ಎಕ್ಸ್ ಖಾತೆಯಲ್ಲಿ ಈ ಕಥೆಯನ್ನು ಹಂಚಿಕೊಳ್ಳಲಾಗಿದೆ. ಕಥೆಯ ಕೊನೆಯಲ್ಲಿ, "ಅಂಕಗಳು, ಪದವಿಗಳು ಅಥವಾ ತರಗತಿಗೆ ಟಾಪರ್ ಆಗಿರುವುದು ಮಾತ್ರವೇ ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಯಾವುದೇ ಕೆಲಸವೂ ಚಿಕ್ಕದಲ್ಲ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮತ್ತು ನಿಮ್ಮನ್ನು ನೀವು ಗೌರವಿಸಿದರೆ, ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಘನತೆ ಇರುತ್ತದೆ" ಎಂಬ ಸಂದೇಶವನ್ನು ನೀಡಲಾಗಿದೆ. ಈ ಪೋಸ್ಟ್ ಜೊತೆಗೆ ಉಮರ್ ಮತ್ತು ಚಂದನ್ ಅವರ ಫೋಟೋಗಳನ್ನು ಸಹ ಹಂಚಿಕೊಳ್ಳಲಾಗಿದೆ.
https://kannada.oneindia.com/jobs/fired-employees-savage-reply-to-former-boss-asking-for-help-goes-viral-on-reddit-netizens-reacts-445765.html?ref_source=OI-KN&ref_medium=Home-Page&ref_campaign=News-Cardsನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಹಲವರು ಈ ಕಥೆ ತಮ್ಮ ಕಣ್ಣು ತೆರೆಸಿದೆ ಎಂದಿದ್ದಾರೆ. "ಒಂದು ಕ್ಷಣದಲ್ಲಿ ಜೀವನ ಯಾರ ಕಥೆಯನ್ನು ಬೇಕಾದರೂ ಬದಲಾಯಿಸಬಹುದು. ಕ್ಲಾಸ್ ಟಾಪರ್ ಒಬ್ಬ ರ‍್ಯಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಸ್ವಲ್ಪ ಬೇಸರವಾಗುತ್ತದೆ" ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ಯಶಸ್ಸು ಯಾವಾಗಲೂ ನೇರ ರೇಖೆಯಲ್ಲ ಎಂಬುದನ್ನು ಈ ಕಥೆ ನಮಗೆ ನೆನಪಿಸುತ್ತದೆ. ಸಂದರ್ಭಗಳು ಬದಲಾಗುತ್ತವೆ. ಆದರೆ ಘನತೆಯು ಪ್ರಾಮಾಣಿಕ ಕೆಲಸದಲ್ಲಿ ಇರುತ್ತದೆ" ಎಂದು ಹೇಳಿದ್ದಾರೆ. ಇದರ ಜೊತೆಗೆ, ಆರ್ಥಿಕ ಒತ್ತಡ, ಕೌಟುಂಬಿಕ ಜವಾಬ್ದಾರಿಗಳು ಅಥವಾ ಬದಲಾಗುತ್ತಿರುವ ಅವಕಾಶಗಳ ಕೊರತೆಯಿಂದಾಗಿ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ತಮ್ಮ ಸಹಪಾಠಿಗಳು ಕೂಡ ಇದೇ ರೀತಿ ಅನಿರೀಕ್ಷಿತ ವೃತ್ತಿಜೀವನವನ್ನು ಆರಿಸಿಕೊಂಡಿದ್ದನ್ನು ಹಲವರು ಸ್ಮರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಈ ವೈರಲ್ ಸ್ಟೋರಿ ಬದುಕಿನ ವಾಸ್ತವಿಕ ಚಿತ್ರಣವನ್ನು ಕಟ್ಟಿಕೊಟ್ಟಿದೆ.
-
ಕರ್ನಾಟಕದ ಕರಾವಳಿಯಲ್ಲಿ ಕಾಣದ ಅಗ್ನಿಕುಂಡದ ಮೇಲೆ ಘನತ್ಯಾಜ್ಯ ವಿಲೇವಾರಿಗೆ ವೀರಾವೇಶದ ಜಿದ್ದಾಜಿದ್ದಿ: ರಾಜಾರಾಂ ತಲ್ಲೂರು ಬರಹ -
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಶ್ರೀ ಕೃಷ್ಣನ ಪರೀಕ್ಷೆ: ಧರ್ಮರಾಯನ ಗುಣಗಳಿಂದ ಕಲಿಯುವ ಜೀವನ ಪಾಠ: ವಿಶ್ವನಾಥ್ ಬಿ ಬರಹ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ











Click it and Unblock the Notifications