ವೈಭವ್ ಸೂರ್ಯವಂಶಿಗೆ ಕನಸು ನನಸಾದ ಕ್ಷಣ, ಜರ್ಸಿ ಹಿಡಿದು ಕಣ್ಣೀರು ಹಾಕಿದ 'ಸಂಸ್ಕಾರವಂತ ಕಿಡ್'

Vaibhav Sooryavanshi: ಭಾರತೀಯ ಕ್ರಿಕೆಟ್‌ನ ವಂಡರ್ ಕಿಡ್ ಅಂತಲೇ ಪ್ರಸಿದ್ಧಯಾಗಿರುವ 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಹಿರಿಯರ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಆಗಿರುವ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ನೀಲಿ ಜೆರ್ಸಿಯನ್ನು ಹಸ್ತಾಂತರ ಮಾಡಿದೆ. ಈ ವಿಶೇಷ ಸಂದರ್ಭದಲ್ಲಿ ವೈಭವ್ ತೀವ್ರ ಭಾವುಕರಾಗಿ ಕಣ್ಣೀರಿಟ್ಟಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಟೀಮ್ ಇಂಡಿಯಾದ ಪ್ರಸಿದ್ಧ ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರು ಜೆರ್ಸಿ ಇರುವ ಬಾಕ್ಸ್ ಅನ್ನು ಹಿಡಿದುಕೊಂಡು ಹೋಟೆಲ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ರೂಮ್ ಬಾಗಿಲು ತಟ್ಟುತ್ತಾರೆ. ಬಾಗಿಲು ತೆರೆಯುತ್ತಿದ್ದಂತೆ ಎದುರಿಗಿದ್ದ ರಘು ಅವರನ್ನು ಕಂಡ ವೈಭವ್ ತಕ್ಷಣವೇ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದರು. ಕೇವಲ 15 ವರ್ಷ ವಯಸ್ಸಿನ ಈ ಯುವ ಆಟಗಾರನಲ್ಲಿರುವ ಸಂಸ್ಕಾರ ಮತ್ತು ಹಿರಿಯರ ಮೇಲಿರುವ ಗೌರವವನ್ನು ಕಂಡು ಇಡೀ ಕ್ರಿಕೆಟ್ ಜಗತ್ತೇ ಶ್ಲಾಘಿಸುತ್ತಿದೆ.

Vaibhav Sooryavanshi Gets Team India Jersey Emotional Moment Goes Huge Viral on Social media

ಜರ್ಸಿ ಕಂಡು ಕಣ್ಣೀರಿಟ್ಟ ವಂಡರ್ ಕಿಡ್

ತಮ್ಮ ಹೆಸರಿರುವ ಹಾಗೂ 3ನೇ ನಂಬರ್ ಹೊಂದಿರುವ ಭಾರತದ ಜರ್ಸಿಯನ್ನು ಕೈಗೆತ್ತಿಕೊಂಡ ವೈಭವ್ ಅವರ ಮುಖದಲ್ಲಿ ಮಂದಹಾಸ ಮೂಡಿತು. ಅಲ್ಲದೆ, ಜೆರ್ಸಿಯನ್ನು ನೋಡುತ್ತಲೇ ಭಾವುಕರಾದ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. 'ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳೇ ಇಲ್ಲ. ಯಾವ ಒಂದು ದೊಡ್ಡ ಕನಸಿಗಾಗಿ ನಾನು ಮೊದಲ ಬಾರಿಗೆ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ತರಬೇತಿಗಾಗಿ ಕಾಲಿಟ್ಟಿದ್ದೆನೋ, ಆ ಮಹದಾಸೆ ಇವತ್ತು ಈಡೇರಿದೆ,' ಎಂದು ಹೇಳಿದ್ದಾರೆ.

ವೈಭವ್ ಸೂರ್ಯವಂಶಿ ಭಾವುಕ ಮಾತುಗಳು

'ನನ್ನ ಕ್ರಿಕೆಟ್ ಜೀವನದ ಅತ್ಯಂತ ದೊಡ್ಡ ಹೆಜ್ಜೆಯನ್ನು ನಾನು ಇಂದು ಇಟ್ಟಿದ್ದೇನೆ. ನಿಜಕ್ಕೂ ಇದೆಲ್ಲವೂ ಒಂದು ಸುಂದರ ಕನಸಿನಂತೆ ಭಾಸವಾಗುತ್ತಿದೆ. ಆ ಟಿ-ಶರ್ಟ್ ನೋಡಿದ ಕ್ಷಣ ನನಗೆ ಸಂತೋಷ ತಡೆಯಲು ಸಾಧ್ಯವಾಗಲಿಲ್ಲ. ಕೆಲವು ಬಾರಿ ನಾವು ಊಹಿಸದ ಸಂಗತಿಗಳು ನಮ್ಮ ಜೀವನದಲ್ಲಿ ನಿಜವಾದಾಗ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುವುದಿಲ್ಲ. ನನ್ನ ಪರಿಸ್ಥಿತಿಯೂ ಈಗ ಹಾಗೇ ಆಗಿದೆ,' ಎಂದು ಹೇಳಿದ್ದಾರೆ.

ತೆಂಡೂಲ್ಕರ್ ದಾಖಲೆ ಮುರಿಯುವ ಹೊಸ್ತಿಲಲ್ಲಿ ವೈಭವ್

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ 776 ರನ್ ಚಚ್ಚಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ವೈಭವ್, ಅತಿ ಕಿರಿಯ ವಯಸ್ಸಿನಲ್ಲಿ ಅತೀ ಹೆಚ್ಚು ರನ್‌ ಬಾರಿಸಿದ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಅಲ್ಲದೆ ಇಂಡಿಯಾ ಎ ತಂಡದ ಪರವಾಗಿ ಶ್ರೀಲಂಕಾ ಎ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 'ಲಿಸ್ಟ್ ಎ' ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಮಾಡಿದ್ದರು.

ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಭಾರತ ತಂಡದ ಪರ ಕಣಕ್ಕಿಳಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಸುದೀರ್ಘ ಅವಧಿಯ ದಾಖಲೆಯೊಂದನ್ನು ಮುರಿಯಲಿದ್ದಾರೆ. ವಯಸ್ಸಿಗಿಂತ ಸಾಧನೆ ಮತ್ತು ಸಂಸ್ಕಾರ ದೊಡ್ಡದು ಎಂಬುದನ್ನು ಸಾಬೀತುಪಡಿಸಿರುವ ಬಿಹಾರದ ಈ ಯುವ ಪ್ರತಿಭೆಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಆಟವನ್ನು ನೋಡಲು ಬರೀ ಭಾರತ ಅಷ್ಟೇ ಅಲ್ಲದೆ, ಇಡೀ ಪ್ರಪಂಚವೇ ಕಾತರದಿಂದ ಕಾದು ಕುಳಿತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+