Get Updates
Get notified of breaking news, exclusive insights, and must-see stories!

ಕರ್ನಾಟಕ ಬಜೆಟ್ 2026: ನಮಗೆ ಹಣ ಬೇಡ, ಗುಣಮಟ್ಟದ ಶಾಲೆ, ಆಸ್ಪತ್ರೆ ಕೊಡಿ: ಸಾರ್ವಜನಿಕರ ಆಗ್ರಹ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಶುಕ್ರವಾರ 2026-27ನೇ ಸಾಲಿನ ಕರ್ನಾಟಕ ಬಜೆಟ್‌ ಮಂಡನೆಗೆ ಸಜ್ಜಾಗಿದ್ದಾರೆ. ಇದು ಅವರ ದಾಖಲೆಯ 17ನೇ ಬಜೆಟ್ ಆಗಲಿದೆ. ಆದರೆ ಈ ಬಾರಿಯ ಬಜೆಟ್‌ನಿಂದ ಜನಸಾಮಾನ್ಯರು ಕೇವಲ ಉಚಿತ ಯೋಜನೆಗಳನ್ನಷ್ಟೇ ನಿರೀಕ್ಷಿಸುತ್ತಿಲ್ಲ, ಬದಲಾಗಿ ದೀರ್ಘಕಾಲದ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥೆಯ ಸುಧಾರಣೆಗೆ ಒತ್ತಾಯಿಸಿದ್ದಾರೆ.

1. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನ

ಸರ್ಕಾರದ 5 ಪ್ರಮುಖ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಈ ಯೋಜನೆಗಳು ಸರಿಯಾಗಿ ಜನರಿಗೆ ದೊರೆಯುತ್ತಿಲ್ಲ ಮತ್ತು ದುರುಪಯೋಗವಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ.

Karnataka Budget 2026

ಶಕ್ತಿ ಯೋಜನೆಯಲ್ಲಿ ಸಮಸ್ಯೆ: ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಬಸ್‌ಗಳಲ್ಲಿ ಅತೀಯಾದ ಜನದಟ್ಟಣೆ ಉಂಟಾಗುತ್ತಿದೆ. ನಮಗೆ ಉಚಿತ ಪ್ರಯಾಣ ಬೇಡ, ಬಸ್ಸಿನಲ್ಲಿ ಗೌರವಯುತವಾಗಿ, ಯಾವುದೇ ತೊಂದರೆ ಇಲ್ಲದೆ ಕುಳಿತುಕೊಂಡು ಹೊದರೆ ಸಾಕು. ಮೊದಲು ಈ ಯೋಜನೆಯನ್ನು ನಿಲ್ಲಿಸಿ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪಡಿತರ ವಿತರಣೆಯಲ್ಲಿ ಲೋಪ: 10 ಕೆಜಿ ಅಕ್ಕಿ ವಿತರಣೆಯ ಭರವಸೆ ಸರಿಯಾಗಿ ಈಡೇರುತ್ತಿಲ್ಲ. ತೂಕದಲ್ಲಿ ವ್ಯತ್ಯಾಸ ಆಗುತ್ತಿದೆ. ಮತ್ತೊಂದೆಡೆ, ಅರ್ಹ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

2. ಶಿಕ್ಷಣ ಮತ್ತು ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡಿ

ಬಜೆಟ್‌ನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂಬುದು ಪೋಷಕರ ಹೇಳುತ್ತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಶೂ, ಯೂನಿಫಾರ್ಮ್ ಮತ್ತು ಸ್ಕಾಲರ್‌ಶಿಪ್‌ಗಳು ಸರಿಯಾಗಿ ಸಿಗುತ್ತಿಲ್ಲ. ಇವುಗಳನ್ನು ಮತ್ತೆ ಸರಿಯಾಗಿ ದೊರೆಯವಂತಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಾಕುವ ಹಣವನ್ನು ಉತ್ತಮ ಯೋಜನೆಗಳಿಗೆ ಬಳಸಬೇಕು. ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಯುವಜನತೆ ಮನವಿ ಮಾಡಿದ್ದಾರೆ.

3. ಹಿರಿಯ ನಾಗರಿಕರ ಆರೋಗ್ಯ ಸೇವೆ

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಳಿಕೊಂಡಿದ್ದಾರೆ. ನಮಗೆ ಸಂಪೂರ್ಣ ಉಚಿತ ಪ್ರಯಾಣ ಬೇಡ. ಕನಿಷ್ಠ 50% ರಿಯಾಯಿತಿ ನೀಡಿ ಸೀಟು ಮೀಸಲಿಟ್ಟರೆ ಸಾಕು. ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮತ್ತು ಸ್ಕ್ಯಾನಿಂಗ್ ಸೌಲಭ್ಯಗಳು ಬಡವರಿಗೆ ಸಿಗುವಂತಾಗಲಿ ಎಂದು ಹಿರಿಯ ನಾಗರಿಕರೊಬ್ಬರು ಮನವಿ ಮಾಡಿದ್ದಾರೆ.

4. ರೈತರಿಗೆ ಮೂಲಸೌಕರ್ಯ

ರೈತರಿಗೆ ಕೃಷಿ ಇಲಾಖೆಯಿಂದ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಆಧುನಿಕ ಉಪಕರಣಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕು ಮತ್ತು ಅವು ನೇರವಾಗಿ ರೈತರಿಗೆ ತಲುಪವಂತಾಗಬೇಕು. ಹಾಗೆಯೇ ಹಾಲು, ಪೆಟ್ರೋಲ್ ಮತ್ತು ದಿನಸಿ ಪದಾರ್ಥಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಇವುಗಳ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+