Get Updates
Get notified of breaking news, exclusive insights, and must-see stories!

ಮ್ಯಾಕ್ಸ್‌ವೆಲ್‌, ಗೇಲ್‌ ರೆಕಾರ್ಡ್‌ ಬ್ರೇಕ್‌: ವಿಶ್ವದಾಖಲೆ ಮಾಡಿದ ಫಿನ್ ಅಲೆನ್‌ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ

Sachin Tendulkar: ಟಿ20 ವಿಶ್ವಕಪ್‌ 2026 ಅತ್ಯಂತ ನಿರ್ಣಾಯಕ ಪಂದ್ಯವಾದ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ ಪರ ಫಿನ್ ಅಲೆನ್ ಸ್ಫೋಟಕ ಶತಕ ಸಿಡಿಸಿ ಹೊಸ ದಾಖಲೆ ಮಾಡಿದರು. ಅವರ ಈ ಅಮೋಘ ಇನಿಂಗ್ಸ್ ಈಗ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಕುರಿತು ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಟ್ವೀಟ್‌ ಮಾಡಿ ಅಲೆನ್‌ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಿನ್ ಅಲೆನ್ ಅವರ ಈ ಇನಿಂಗ್ಸ್ ನ್ಯೂಜಿಲೆಂಡ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಅಲ್ಲದೆ, ಟಿ20 ಕ್ರಿಕೆಟ್‌ನ ಹೊಸ ದಾಖಲೆಯಾಯಿತು. ಇವರ ಆಟಕ್ಕೆ ಮನಸೋತ ಭಾರತೀಯ ಕ್ರಿಕೆಟ್‌ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಸಚಿನ್‌ ಮಾಡಿರುವ ಈ ಸಂದೇಶ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

T20 World Cup Finn Allen s 33-Ball Century Sends New Zealand to Final Sachin Tendulkar Appreciation

ಶತಕ ಸಿಡಿಸಿ ಹೊಸ ದಾಖಲೆ ಬರೆದ ಅಲೆನ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಆರಂಭಿಕ ಆಟಗಾರ ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಟಿ20 ಮತ್ತು 50 ಓವರ್‌ಗಳ ಎರಡೂ ವಿಶ್ವಕಪ್‌ಗಳ ಇತಿಹಾಸದಲ್ಲೇ ಅತಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆದರು.

ಸಚಿನ್ ತೆಂಡೂಲ್ಕರ್ ಮೆಚ್ಚುಗೆ

ಬುಧವಾರ ನಡೆದ ಪಂದ್ಯದಲ್ಲಿ 170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್, ಅಲೆನ್ ಅವರ ಸ್ಫೋಟಕ ಆಟದ ನೆರವಿನಿಂದ ಸುಲಭವಾಗಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತು. ಸಚಿನ್ ತೆಂಡೂಲ್ಕರ್ ಅವರು ಅಲೆನ್ ಆಟಕ್ಕೆ ಟ್ವೀಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, "ಸೆಮಿಫೈನಲ್ ಪಂದ್ಯಗಳು ಸಾಮಾನ್ಯವಾಗಿ ಕೊನೆಯ ಕ್ಷಣದವರೆಗೂ ರೋಮಾಂಚನ ಮೂಡಿಸುತ್ತವೆ. ಆದರೆ ಆದರೆ ಇಂದು ಫಿನ್ ಅಲೆನ್ ನಾವು ಸರಿಯಾಗಿ ಕುಳಿತುಕೊಳ್ಳುವಷ್ಟರಲ್ಲಿ ಪಂದ್ಯವನ್ನು ಮುಗಿಸಿದರು. ಇದು ಅದ್ಭುತ ಪಂದ್ಯ," ಎಂದು ಬರೆದುಕೊಂಡಿದ್ದಾರೆ.

ಕಡಿಮೆ ಬಾಲ್‌ಗಳಿಗೆ ಶತಕ ಸಿಡಿಸಿದ ಅಲೆನ್

170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರರಾದ ಟಿಮ್ ಸೀಫರ್ಟ್ 33 ಎಸೆತಗಳಲ್ಲಿ 58 ರನ್ (7 ಬೌಂಡರಿ, 2 ಸಿಕ್ಸರ್) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ ಅಜೇಯ 100 ರನ್ ಸಿಡಿಸಿ ಮಿಂಚಿದರು. ಹೀಗೆ ಕೇವಲ 12.5 ಓವರ್‌ಗಳಲ್ಲಿ ಗುರಿ ತಲುಪಿ ನ್ಯೂಜಿಲ್ಯಾಂಡ್‌ ಫೈನಲ್‌ ಪ್ರವೇಶ ಮಾಡಿತು.

ಮ್ಯಾಕ್ಸ್‌ವೆಲ್‌, ಗೇಲ್‌ ದಾಖಲೆ ಉಡೀಸ್

ಫಿನ್ ಅಲೆನ್ 33 ಎಸೆತಗಳ ಶತಕ ಸಿಡಿಸಿದ್ದು, ಮೂಲಕ ಈ ಹಿಂದೆ ಕ್ರಿಸ್ ಗೇಲ್ (2016ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 47 ಎಸೆತಗಳಲ್ಲಿ ಶತಕ) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (2023ರ ಏಕದಿನ ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 40 ಎಸೆತಗಳಲ್ಲಿ ಶತಕ) ನಿರ್ಮಿಸಿದ್ದ ದಾಖಲೆಗಳನ್ನು ಮುರಿದರು. ಈ ಸಾಧನೆಯೊಂದಿಗೆ ಟಿ20 ಮತ್ತು ಏಕದಿನ ಎರಡೂ ಮಾದರಿಯ ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಫಿನ್ ಅಲೆನ್ ಭಾಜನರಾದರು. ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವು ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದೆ.

ಕೊಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ನಡೆದ ಈ ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಬೀಸಿದ ದಕ್ಷಿಣ ಆಫ್ರಿಕಾವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 169 ರನ್‌ಗಳನ್ನು ಕಲೆಹಾಕಿತು. ತಂಡದ ಪರ ಮಾರ್ಕೊ ಜಾನ್ಸೆನ್ ಅಜೇಯ ಅರ್ಧ ಶತಕ ಸಿಡಿಸಿದರೆ, ಡೆವಾಲ್ಡ್ ಬ್ರೆವಿಸ್ 34(27), ನಾಯಕ ಏಡೆನ್ ಮಾರ್ಕ್ರಮ್ 18(20), ಕ್ವಿಂಟನ್ ಡಿ ಕಾಕ್ 10(8), ಸ್ಟಬ್ಸ್‌ 29 ರನ್‌ಗಳನ್ನು ಸಿಡಿಸಿದ್ದು ಬಿಟ್ಟರೆ ಉಳಿದವರು ಒಂದಕ್ಕಿಗೆ ಸುಸ್ತು ಹೊಡೆದರು.

ದಕ್ಷಿಣ ಆಫ್ರಿಕಾ ನೀಡಿದ ಗುರಿಯನ್ನು ನ್ಯೂಜಿಲೆಂಡ್‌ 1 ವಿಕೆಟ್‌ ನಷ್ಟಕ್ಕೆ ಮುಟ್ಟುವಲ್ಲಿ ಯಶಸ್ವಿಯಾಯಿತು. ನ್ಯೂಜಿಲೆಂಡ್ ಪರ ಟೀಮ್ ಸಿಫರ್ಟ್‌ ಕೇವಲ 33 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 58 ರನ್‌ (ಅರ್ಧಶತಕ) ಸಿಡಿಸಿ ಉತ್ತಮ ಆರಂಭ ನೀಡಿದರು. ಇವರು ವಿಕೆಡ್‌ ಒಪ್ಪಿಸಿದ ಬಳಿಕ ರಚಿನ್ ರವೀಂದ್ರ ಹಾಗೂ ಫಿನ್ ಅಲೆನ್ ಕೊನೆವರೆಗೂ ನಿಂತು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+