ಜಯಲಲಿತಾರಿಂದ ಆಸ್ತಿ ಘೋಷಣೆ, 2 ಕೋಟಿ ರು ಖೋತಾ!
ಚೆನ್ನೈ, ಏಪ್ರಿಲ್ 26: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಆರ್ ಕೆ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಕಣಕ್ಕಿಳಿದಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿದ ಜಯಲಲಿತಾ ಅವರು ಆಸ್ತಿ ಘೋಷಣೆ ಮಾಡಿದ್ದಾರೆ.
2015ಕ್ಕೆ ಹೋಲಿಸಿದ ಜಯಲಲಿತಾ ಅವರ ಆಸ್ತಿಯಲ್ಲಿ 2 ಕೋಟಿ ರು ಕಡಿಮೆಯಾಗಿದೆ. 2016ರಲ್ಲಿ ಒಟ್ಟು ಆಸ್ತಿ 113.72 ಕೋಟಿ ರು ಇದ್ದು, 2.04 ಕೋಟಿ ರು ಸಾಲ ಕೂಡಾ ಹೊಂದಿದ್ದಾರೆ. 41,000 ರು ನಗದು ಕೈಯಲ್ಲಿದ್ದು, 41.63 ರು ಹೂಡಿಕೆ ಮಾಡಿದ್ದಾರೆ. 1,250 ಕೆಜಿ ಆಭರಣಗಳಿವೆ.

ಕೃಷಿ ಭೂಮಿ 14.78 ಕೋಟಿ ರು ಮೌಲ್ಯದ 17.93 ಎಕರೆ ಭೂಮಿ, 13.34 ಕೋಟಿ ರು ಮೌಲ್ಯದ 4 ಕಟ್ಟಡಗಳನ್ನು ಹೊಂದಿದ್ದಾರೆ. 43.96 ಕೋಟಿ ರು ಮೌಲ್ಯ ಒಂದು ಮನೆ ಅವರ ಹೆಸರಿನಲ್ಲಿದೆ.
ಜಯಲಲಿತಾ ಅವರ ಹೆಸರಿನಲ್ಲಿ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ, ಮೆಟ್ರಿಕುಲೇಷನ್ ತನಕ ವಿದ್ಯಾಭ್ಯಾಸ ಮಾಡಿದ್ದಾರೆ. ಎಐಎಡಿಎಂಕೆ ಪಕ್ಷದ ಮೂಲಕ ಡಾ. ರಾಧಾಕೃಷ್ಣನ್ ನಗರ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುತ್ತಿದ್ದಾರೆ.












Click it and Unblock the Notifications