ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Jayalalithaa death case : ಜಯಲಲಿತಾ ಸಾವು ಪ್ರಕರಣ: ಶಶಿಕಲಾ ವಿರುದ್ಧ ತನಿಖೆಗೆ ಆದೇಶ

|
Google Oneindia Kannada News

ಚೆನ್ನೈ, ಅಕ್ಟೋಬರ್‌ 18: ತಮಿಳುನಾಡು ಮಾಜಿ ಸಿಎಂ ಮತ್ತು ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಆರುಮುಗಸ್ವಾಮಿ ತನಿಖಾ ಆಯೋಗವು ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ತನ್ನ ತನಿಖಾ ವರದಿಯನ್ನು ಮಂಡಿಸಿದ್ದು, ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಿರುದ್ಧ ತನಿಖೆಗೆ ಆದೇಶಿಸಿದೆ.

ವರದಿಗಳ ಪ್ರಕಾರ, ಜಯಲಲಿತಾ ಅವರ ಸಾವಿನ ತನಿಖೆ ಬಗ್ಗೆ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ, ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್ ಮತ್ತು ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ವೈದ್ಯ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಲು ಆದೇಶಿಸಲಾಗಿದೆ. ಇದಕ್ಕೂ ಮುನ್ನ ಸಮಿತಿ ವರದಿಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು. 2016ರ ಸೆಪ್ಟೆಂಬರ್ 22ರಿಂದ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ನಿಧನ ಹೊಂದಿದ್ದರು. ಈ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿತ್ತು.

ಜಯಲಲಿತಾ ಸಾವಿನ ತನಿಖೆ: ತಮಿಳುನಾಡು ಸರ್ಕಾರಕ್ಕೆ ವರದಿ ಸಲ್ಲಿಕೆಜಯಲಲಿತಾ ಸಾವಿನ ತನಿಖೆ: ತಮಿಳುನಾಡು ಸರ್ಕಾರಕ್ಕೆ ವರದಿ ಸಲ್ಲಿಕೆ

ವಿಕೆ ಶಶಿಕಲಾ, ಶಿವಕುಮಾರ್, ಆಗಿನ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಮತ್ತು ಆಗಿನ ಮುಖ್ಯ ಕಾರ್ಯದರ್ಶಿ ರಾಮಮೋಹನ ರಾವ್ ಸೇರಿದಂತೆ (ಅವರ) ವಿರುದ್ಧ ಸರ್ಕಾರಿ ತನಿಖೆಗೆ ಆದೇಶಿಸುವ (ಆಯೋಗ) ವರದಿಯ ಕುರಿತು ಕಾನೂನು ತಜ್ಞರ ಅಭಿಪ್ರಾಯವನ್ನು ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸಂಪುಟ ನಿರ್ಧರಿಸಿದೆ. ಅಲ್ಲದೆ ಅದನ್ನು ವರದಿಯೊಂದಿಗೆ ತಮಿಳುನಾಡು ವಿಧಾನಸಭೆಯ ಮುಂದೆ ಇರಿಸಿ ಎಂದು ಸಿಎಂ ಕಚೇರಿಯ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು.

Jayalalithaas death case: Probe ordered against Former General Secretary of AIADMK Sasikala

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ತನಿಖೆಗೆ ನೇಮಕಗೊಂಡ ನಿವೃತ್ತ ನ್ಯಾಯಮೂರ್ತಿ ಆರುಮುಗಸ್ವಾಮಿ ಅವರ ಏಕಸದಸ್ಯ ಆಯೋಗವು ಐದು ವರ್ಷಗಳ ನಂತರ ಆಗಸ್ಟ್‌ 27ರಂದು ತನ್ನ ವರದಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು. ಡಿಸೆಂಬರ್ 2016 ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅವರ ಸಾವಿನ ಕಾರಣ ಮತ್ತು ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆ ರಾಜಕೀಯ ಕದನ ಆರಂಭವಾಗಿತ್ತು. ಇದು ಹಲವು ಗಲಾಟೆ, ರಾಜಕೀಯ ದ್ವೇಷದ ಜಗಳಗಳಿಗೂ ಕಾರಣವಾಗಿತ್ತು.

Jayalalithaas death case: Probe ordered against Former General Secretary of AIADMK Sasikala

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸುವಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಮನವಿ ಮಾಡಿದ್ದರು. ಇದರಿಂದ ಇದು ಅರ್ಮುಗಸ್ವಾಮಿ ಆಯೋಗ ರಚನೆಗೆ ಕಾರಣವಾಯಿತು. 22 ಸೆಪ್ಟೆಂಬರ್ 2016 ರಂದು ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭಗಳು, ಆರೋಗ್ಯ ಸ್ಥಿತಿ ಮತ್ತು ಪರಿಸ್ಥಿತಿ ಮತ್ತು ನಂತರದ ಚಿಕಿತ್ಸೆಯು 5 ಡಿಸೆಂಬರ್ 2016 ರಂದು ಅವರ ನಿಧನದವರೆಗೆ ಒದಗಿಸಿದ ಸಂದರ್ಭಗಳ ಕುರಿತು ವಿಚಾರಣೆ ನಡೆಸಲು ಆಯೋಗವನ್ನು ನಿಯೋಜಿಸಲಾಗಿತ್ತು.

English summary
The Justice Arumugaswamy Commission of Inquiry, probing the death of former Tamil Nadu CM and AIADMK leader J Jayalalithaa, on Tuesday presented its inquiry report in the Tamil Nadu Assembly and ordered an inquiry against former AIADMK general secretary Sasikala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X