ಕೊಹ್ಲಿ ಫಿಫ್ಟಿ, ಪಾಟೀದಾರ್ ಮ್ಯಾನ್ ಆಫ್ ದಿ ಮ್ಯಾಚ್, ರಶೀದ್ ಖಾನ್ ಕಮ್‌ಬ್ಯಾಕ್: ಎಬಿಡಿ ಭವಿಷ್ಯ ಭಾರೀ ವೈರಲ್

AB de Villiers Prediction: ಅಹಮದಾಬಾದ್‌ನಲ್ಲಿ ಭಾನುವಾರ (ಮೇ 31) ನಡೆಯುತ್ತಿರುವ ಐಪಿಎಲ್ 2026ರ ಫೈನಲ್ ಪಂದ್ಯದ ಕಿಚ್ಚು ಜೋರಾಗಿ ಸದ್ದು ಮಾಡುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವೆ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಲಿದೆ. ಇದು ಜಿಟಿ ತಂಡದ ತವರು ಮೈದಾನವಾಗಿದ್ದರೂ, ಇದೇ ಕ್ರೀಡಾಂಗಣದಲ್ಲಿ 2025ರ ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಿದ ಸವಿ ನೆನಪು ಆರ್‌ಸಿಬಿಗಿದೆ. ಈ ಹೈವೋಲ್ಟೇಜ್ ಸಮರಕ್ಕೂ ಮುನ್ನ ಹಲವು ಮಾಜಿ ಕ್ರಿಕೆಟ್‌ ದಿಗ್ಗಜರು ತಮ್ಮದೇ ಆದ ವಿಶ್ಲೇಷಣೆಗಳನ್ನು ನೀಡಿದ್ದಾರೆ. ಇದೀಗ ಎಬಿ ಡಿವಿಲಿಯರ್ಸ್ ಮೂರು ರೋಚಕ ಭವಿಷ್ಯಗಳನ್ನು ನುಡಿದಿದ್ದಾರೆ.

ಎಬಿ ಡಿವಿಲಿಯರ್ಸ್ ನುಡಿದ 3 ಅಚ್ಚರಿ ಭವಿಷ್ಯಗಳು

* ವಿರಾಟ್ ಕೊಹ್ಲಿ ಅಬ್ಬರ: ಫೈನಲ್ ಪಂದ್ಯದಲ್ಲಿ ರನ್‌ಮಿಷಿನ್ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಲಿದ್ದಾರೆ.

AB de Villiers Predicts Kohli Fifty Patidar Heroics amp amp Rashid Khan Comeback in IPL 2026 Final

* ರಜತ್ ಪಾಟೀದಾರ್ ಮ್ಯಾನ್ ಆಫ್ ದಿ ಮ್ಯಾಚ್: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ತಮ್ಮ ಜವಾಬ್ದಾರಿಯುತ ಹಾಗೂ ಸ್ಫೋಟಕ ಆಟದ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.

* ರಶೀದ್ ಖಾನ್ ಕಮ್‌ಬ್ಯಾಕ್: ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ.

ಆಕಾಶ್ ಚೋಪ್ರಾ ಹೇಳಿದ್ದೇನು?

ಖ್ಯಾತ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಪ್ರಕಾರ ಇಂದು ಎರಡೂ ತಂಡಗಳಿಗೆ ಗೆಲ್ಲುವ ಸಮಾನ ಅವಕಾಶಗಳಿವೆ. ಆದರೆ ಆರ್‌ಸಿಬಿಯ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಬೇಗನೆ ಔಟ್ ಆಗುವ ಸಾಧ್ಯತೆ ಇದೆ. ಆದ್ದರಿಂದ ವಿರಾಟ್ ಕೊಹ್ಲಿ ಮೇಲಿನ ಒತ್ತಡ ಹೆಚ್ಚಾಗಬಹುದು. ಇಂತಹ ಸಮಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಅವರ ಆಟ ಅತ್ಯಂತ ನಿರ್ಣಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.

ಇರ್ಫಾನ್ ಪಠಾಣ್ ಹೇಳಿದ್ದೇನು?

'ಗುಜರಾತ್ ಟೈಟಾನ್ಸ್‌ ಬೌಲರ್‌ಗಳು ಪಿಚ್‌ನ ಲಾಭ ಪಡೆದು ಹೆಚ್ಚಿನ ಬೌನ್ಸರ್‌ ಹಾಗೂ ಶರ್ಟ್‌ ಪಿಚ್ ಎಸೆತಗಳನ್ನು ಎಸೆಯಲಿದ್ದಾರೆ. ಆರ್‌ಸಿಬಿ ಬ್ಯಾಟರ್‌ಗಳು ಅನಗತ್ಯ ರಿಸ್ಕ್ ತೆಗೆದುಕೊಳ್ಳದೆ ಸಂಯಮ ಕಾಯ್ದುಕೊಳ್ಳಬೇಕು. ಇನ್ನು ಬೌಲಿಂಗ್ ಮಾಡುವಾಗ ಸಾಯಿ ಸುದರ್ಶನ್‌ಗೆ ವಿಕೆಟ್-ಟು-ವಿಕೆಟ್ ದಾಳಿ ನಡೆಸಿ ಚೆಂಡನ್ನು ಆರಂಭದಲ್ಲೇ ಸ್ವಿಂಗ್ ಮಾಡಿದರೆ ಜಿಟಿ ಬ್ಯಾಟಿಂಗ್ ಲೈನ್‌ಅಪ್ ಅನ್ನು ಕಟ್ಟಿಹಾಕಬಹುದು,' ಎಂದು ಹೇಳಿದ್ದಾರೆ.

ಆರ್‌ಸಿಬಿ ಟ್ರೋಫಿ ಗೆಲ್ಲುವ ಬಗ್ಗೆ ಅಶ್ವಿನ್ ಭವಿಷ್ಯ

ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು, 'ಆರ್‌ಸಿಬಿ ಸದ್ಯ ಟೂರ್ನಿಯ ಅತ್ಯಂತ ಬಲಿಷ್ಠ ತಂಡವಾಗಿದೆ. ಅವರು ತಮ್ಮದೇ ಆದ ತಪ್ಪುಗಳನ್ನು ಮಾಡಿಕೊಳ್ಳದಿದ್ದರೆ ಪ್ರಶಸ್ತಿ ಗೆಲ್ಲುವುದು ನಿಶ್ಚಿತ. ಒಂದು ವೇಳೆ ಇಂದು ಬೆಂಗಳೂರು ಗೆದ್ದರೆ ಐಪಿಎಲ್ ಇತಿಹಾಸದಲ್ಲಿ ಯಶಸ್ವಿಯಾಗಿ ಪ್ರಶಸ್ತಿ ಉಳಿಸಿಕೊಂಡ ಕೇವಲ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಜಿಟಿ ತನ್ನ ತವರಿನ ಕೋಟೆಯಲ್ಲಿ ಸೇಡು ತೀರಿಸಿಕೊಳ್ಳುತ್ತಾ ಅಥವಾ ಆರ್‌ಸಿಬಿ ಸತತ ಎರಡನೇ ಬಾರಿ ಇತಿಹಾಸ ಬರೆಯುತ್ತಾ ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.

ಆರ್‌ಸಿಬಿ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಕೇಕಬ್ ಡಫಿ, ಜೋಶ್ ಹ್ಯಾಜಲ್‌ವುಡ್, ರಸಿಖ್ ಸಲಾಮ್ ದಾರ್. ಇಂಪ್ಯಾಕ್ಸ್‌ ಪ್ಲೇಯರ್: ವೆಂಕಟೇಶ್ ಅಯ್ಯರ್.

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+