'Water Crisis: ನೀರಿನ ಸಮಸ್ಯೆ ಬಗೆಹರಿಸುವುದು ಹೊಸ ಸಿಎಂ ಡಿಕೆ ಶಿವಕುಮಾರ್ ಆದ್ಯತೆ ಆಗಲಿ'

ಚಿಕ್ಕಬಳ್ಳಾಪುರ: ರಾಜ್ಯದ ಹೊಸ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಬರ ಪೀಡಿತ ಜಿಲ್ಲೆಗಳ ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರು, ನೆಲ, ಜನರ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಭಾನುವಾರ ಚಿಕ್ಕಬಳ್ಳಾಪುರದಲ್ಲಿ ನಡೆದ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಣ್ಣು ಬಹಳ ಶ್ರೇಷ್ಠವಾಗಿದ್ದು, ಇಲ್ಲಿಯ ರೈತರ ಬೆವರಿನ ಹನಿ ಭೂಮಿಗೆ ಬಿದ್ದರೆ ಭೂಮಿ ಉತ್ತಮ ಫಸಲು ಬರುತ್ತದೆ. ಒಂದು ಕಾಲದಲ್ಲಿ ಇಡೀ ಬೆಂಗಳೂರಿಗೆ ತರಕಾರಿ, ಹಣ್ಣು, ರೇಷ್ಮೆ, ಕೊಡುವ ಕೆಲಸ ಈ ಜಿಲ್ಲೆಗಳು ಮಾಡುತ್ತಿದ್ದವು. ಇಲ್ಲಿ ಐದು ನದಿಗಳಿದ್ದರೂ ಬತ್ತಿ ಹೋಗಿವೆ. ಪಶ್ಚಿಮ ಘಟ್ಟದಿಂದ ಹರಿದು ಬರುವ ಜೀವಸೆಲೆ ನಿಂತು ಹೋಗಿದೆ. ಪಶ್ಚಿಮ ಘಟ್ಟದಲ್ಲಿ ನೀರಿನ ಸೆಲೆಯನ್ನು ಉಳಿಸುವ ಪಯತ್ನ ಮಾಡದ ಕಾರಣ ಇದೆಲ್ಲ ಆಗಿದೆ ಎಂದರು.

CM DK Shivakumar

ಎತ್ತಿನಹೊಳೆ ಯೋಜನೆ: ಡಿಕೆಶಿ ಕುರಿತು ವ್ಯಂಗ್ಯ

ನಾನು ನೀರಾವರಿ ಸಚಿವನಿದ್ದಾಗ ಕೋಲಾರದಲ್ಲಿದ್ದ ಫ್ಲೋರೈಡ್ ಯುಕ್ತ ನೀರನ್ನು ಪರಿಶೀಲಿಸಿ ತಾಂತ್ರಿಕ ತಜ್ಞರೊಡನೆ ಚರ್ಚಿಸಿದ್ದೆ. ಅಂತಾರಾಜ್ಯ ವಿವಾದ ಇಲ್ಲದಂತೆ ಎತ್ತಿನ ಹೊಳೆ ಯೋಜನೆಯನ್ನು ಮಾಡಿದೆ. ಅದಕ್ಕೂ ಮೊದಲು ನೇತ್ರಾವತಿ ತಿರುವು ಯೋಜನೆ ಪ್ರಸ್ತಾಪ ಇತ್ತು. ಅದರಿಂದ ಸುಮಾರು 11 ಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತಿತ್ತು. ಹೀಗಾಗಿ ಅದು ಸಾಧ್ಯವಾಗದಾಯಿತು.

Bengaluru e-Khata: ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಆಸ್ತಿ ಮಾಲೀಕರಿಗೆ ತ್ವರಿತ ಖಾತಾ ಸೇವೆ
Bengaluru e-Khata: ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಆಸ್ತಿ ಮಾಲೀಕರಿಗೆ ತ್ವರಿತ ಖಾತಾ ಸೇವೆ

ಪೈಪ್‌ ಲೈನ್ ಮೂಲಕ ನೀರು ತಂದಿದ್ದರೆ ಹತ್ತು ಟಿಎಂಸಿ ನೀರು ಎರಡೂ ಜಿಲ್ಲೆಗೆ ಕೊಡಬಹುದಿತ್ತು. ಯಾರಿಗೆ ತಾಂತ್ರಿಕ ಜ್ಞಾನ ಇಲ್ಲವೋ ಅವರು ಅಲ್ಲಿ ನೀರೇ ಇಲ್ಲ ಎಂದು ಅಭಿಪ್ರಾಯ ಸೃಷ್ಟಿಸಿದರು. ಅದಕ್ಕಾಗಿ ಎರಡು ವರ್ಷ ಹಾಳಾಯಿತು. ಆ ನಂತರ ಕಾಲುವೆ ಮೂಲಕ ನೀರು ತರುವ ಪ್ರಯತ್ನ ನಡೆದಿದೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ನಾವು ಎತ್ತಿನಹೊಳೆ ಲಿಫ್ಟ್ ಮೂಲಕ ನೀರು ತರುವ ಕಾರ್ಯ ಮಾಡಿದ್ದೇವು ಅವರು ಅದಕ್ಕೆ ಬಟನ್ ಹೊಡೆಯುವ ಮೂಲಕ ಆರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಬರಪೀಡಿತ ಜಿಲ್ಲೆಗಳ ದಾಹ ನೀಗಿಸಬೇಕು

ಹೊಸ ಮುಖ್ಯಮಂತ್ರಿಗಳು ಬರ ಪೀಡಿತ ಜಿಲ್ಲೆಗಳಿಗೆ ನೀರು ತಂದು ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರಿನ ವಿಚಾರ, ಜನರ ವಿಚಾರದಲ್ಲಿ ನೆಲದ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಒಂದು ಸಮಯ ಕಳೆದರೆ ಅದರ ದೂರಗಾಮಿಯ ಪರಿಣಾಮವಾಗುತ್ತದೆ. ಒಂದು ಸಮಯ ಕಳೆದರು ಅದರ ವೆಚ್ಚ ಒಂದು ಸಾವಿರ ಕೋಟಿ‌ ಇದ್ದದ್ದು ಹತ್ತು ಪಟ್ಟು ಹೆಚ್ಚಾಗುತ್ತದೆ. ಒಂದು ಅಂತಾರಾಜ್ಯ ಜಲ ವಿವಾದ ಐವತ್ತು ವರ್ಷವಾದರೂ ಮುಗಿದಿಲ್ಲ. ಅದಕ್ಕೆ ನಾನು ಸಂಸತ್ತಿನಲ್ಲಿ ಅಂತಾರಾಜ್ಯ ಜಲವಿವಾದ ಕಾಯಿದೆ ಸಂಪೂರ್ಣ ಬದಲಾವಣೆ ಮಾಡಬೇಕು. ನದಿ ಅಭಿವೃದ್ಧಿ ನಿಟ್ಟಿನಲ್ಲಿ ಬದಲಾವಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ತಿಳಿಸಿದ್ಏನೆ. ಪ್ರಧಾನ ಮಂತಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಕಾನೂನು ಬದಲಾದರೆ ಬಹಳಷ್ಟು ಬದಲಾವಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜಕಾರಣಿಯಂತೆ ಪತ್ರಕರ್ತರಿಗೂ ಜವಾಬ್ದಾರಿ ಇದೆ

ರಾಜಕಾರಣಿ ಹಾಗೂ ಅಧಿಕಾರದಲ್ಲಿರುವವರಿಗೆ ಸಾರ್ವಜನಿಕವಾಗಿರುವ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಪತ್ರಕರ್ತರಿಗೂ ಇದೆ. ನಾವು ತೆಗೆದುಕೊಳ್ಳುವ ತೀರ್ಮಾನ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ತಾವು ಬರೆಯುವ ವರದಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಬುದ್ಧಿವಂತಿಕೆ ಸಮಾಜದ ಒಳಿತಿಗೆ ಬಳಕೆ ಆಗಬೇಕು. ಸಮಾಜದಲ್ಲಿನ ದೃಷ್ಕೃತ್ಯ ಮುಚ್ಚುವುದಕ್ಕೆ ಬಳಕೆ ಆಗಬಾರದು ಎಂದು ಪತ್ರಕರ್ತರನ್ನು ಉದ್ದೇಶಿಸಿ ಕಿವಿ ಮಾತು ಹೇಳಿದರು.

Bengaluru Metro: 3ನೇ ಮಾರ್ಗಕ್ಕೆ 12ನೇ ಮೆಟ್ರೋ ಆಗಮನ, ಹೊಸ ರೈಲುಗಳ ಸಂಚಾರ ನಿಯೋಜನೆ ವಿಳಂಬ
Bengaluru Metro: 3ನೇ ಮಾರ್ಗಕ್ಕೆ 12ನೇ ಮೆಟ್ರೋ ಆಗಮನ, ಹೊಸ ರೈಲುಗಳ ಸಂಚಾರ ನಿಯೋಜನೆ ವಿಳಂಬ

ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ ಅವರನ್ನು ಅತಿಥಿಯಾಗಿ ಆಹ್ವಾನಿಸುವುದು ಸಹಜ. ಆದರೆ ಅಧಿಕಾರದಲ್ಲಿ ಇಲ್ಲದಿರುವಾಗ ನನ್ನನ್ನು ಆಹ್ವಾನಿಸಿದ್ದು ನಿಮ್ಮ ದೊಡ್ಡ ಗುಣ ಎಂದು ಹೊಗಳಿದರು. ಜಾಗತೀಕರಣ, ಖಾಸಗೀಕರಣದ ನಡುವೆ ನಾವು ಅಂತಕರಣ ಮರೆಯುತ್ತಿದ್ದೇವೆ. ಅಂತಕರಣ ಇಲ್ಲದಿರುವ ಮನುಷ್ಯರ ಸಂಬಂಧವೇ ಇರುವುದಿಲ್ಲ. ಅಂತದರಲಿ ತಾವು ಅಂತಕರಣವನ್ನು ಪುನರ್ ಸ್ಥಾಪನೆ ಮಾಡಿದ್ದೀರಿ ಎಂದು ಅವರು ಬಣ್ಣಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+