ಬೆಂಗಳೂರಲ್ಲಿ ಉದ್ಯೋಗಕ್ಕೆ ಮಲಯಾಳಂ ಭಾಷಿಕರ ನೇಮಕ: ಕನ್ನಡ ಭಾಷಿಕರ ಕಡೆಗಣನೆ ಆರೋಪ, ಕನ್ನಡಿಗರು ಹೇಳಿದ್ದೇನು
ಬೆಂಗಳೂರಿನಲ್ಲಿ ಕನ್ನಡಿಗರನ್ನು ಕೆರಳಿಸುವ ಕೆಲಸವೊಂದನ್ನು ಕಂಪನಿಯೊಂದು ಮಾಡಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವ ಬದಲು ನೆರೆಯ ಕೇರಳದ ಮಲಯಾಳಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತಿದೆ. ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆ ಬರುವವರು ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದು ತನ್ನ ಕಚೇರಿಯ ಮುಂದೆ ಅಂಟಿಸಿರುವುದು ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಏನಿದು ವೈರಲ್ ಪೋಸ್ಟ್ ವಿಷಯ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿರುವ ಅಂಶವೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಬೆಂಗಳೂರಿನಲ್ಲಿ BlueDart ಕಂಪನಿಯು ಮಲಯಾಳಂ + ಇಂಗ್ಲಿಷ್ ತಿಳಿದಿರುವ ಅಭ್ಯರ್ಥಿಗಳ ಅಗತ್ಯವಿದೆ. ತಕ್ಷಣ ಕೆಲಸಕ್ಕೆ ಸೇರಬಹುದಾದವರು ಅಗತ್ಯ ನಗರದೊಳಗಿನ ಸಂಚಾರ / ಪ್ರಯಾಣಕ್ಕೆ ಸಿದ್ಧರಾಗಿರಬೇಕು. ಫ್ರಂಟ್ ಆಫೀಸ್ ಕೆಲಸಕ್ಕಾಗಿ ನೇಮಕಾತಿ ನಡೆಯುತ್ತಿದ್ದು, ಪದವಿ, ಕಂಪ್ಯೂಟರ್ ಜ್ಞಾನ,
ಇಂಗ್ಲಿಷ್ ಮಾತನಾಡುವ ಸಾಮರ್ಥ್ಯ ಹಾಗೂ ಸ್ಥಳೀಯ ಭಾಷೆಗಳ ಜ್ಞಾನ ಇರಬೇಕು - ಬ್ಲೂ ಡಾರ್ಟ್ ಎನ್ನುವ ಬರಹವಿರುವ ಚೀಟಿಯನ್ನು ಅಂಟಿಸಲಾಗಿದೆ. ಇದರಲ್ಲಿ ಕನ್ನಡ ಭಾಷೆಯ ಕಡೆಗಣನೆ ಮಾಡಲಾಗಿದೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತ್ಮೀಯ @BlueDart_Official, ನಿಮ್ಮ ಆರ್.ಆರ್. ನಗರ ಬೆಂಗಳೂರು ಶಾಖೆಯ ನೇಮಕಾತಿ ಸೂಚನೆಯು "ಮಲಯಾಳಂ + ಇಂಗ್ಲಿಷ್" ಅನ್ನು ಏಕೆ ಒತ್ತಾಯಿಸುತ್ತಿದೆ ಮತ್ತು ಕರ್ನಾಟಕದ ಸ್ಥಳೀಯ ಭಾಷೆಯಾದ ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಬೆಂಗಳೂರು ಕರ್ನಾಟಕದಲ್ಲಿದೆ ಮತ್ತು ಸ್ಥಳೀಯ ನೇಮಕಾತಿಯಲ್ಲಿ ಕನ್ನಡವು ಗೌರವ ಮತ್ತು ಆದ್ಯತೆಗೆ ಅರ್ಹವಾಗಿದೆ. ದಯವಿಟ್ಟು ಈ ನೀತಿಯನ್ನು ವಿವರಿಸಿ ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ vvi ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
Malayalam: ಕನ್ನಡಿಗರ ಆಕ್ರೋಶ: ಮಿಶ್ರ ಪ್ರತಿಕ್ರಿಯೆ
ಇನ್ನು ಕಂಪನಿಯು ಮಲಯಾಳಂ ಭಾಷೆಗೆ ಆದ್ಯತೆ ನೀಡುತ್ತಿದೆ ಎನ್ನುವ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡಿಗರು ಕಂಪನಿಯ ಈ ನಡೆಗೆ ಆಕ್ರೋಶ ಹೊರ ಹಾಕಿದ್ದಾರೆ. ಪ್ರವೀಣ್ ಗೌಡ ಎನ್ನುವವರು, ನೀವು ಜೀವನೋಪಾಯಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ನೆಲೆಸಿದ್ದೀರಿ; ಸ್ಥಳೀಯ ಭಾಷೆಯ ಬಗ್ಗೆ ನಿಮಗೆ ಏಕೆ ಇಷ್ಟೊಂದು ದ್ವೇಷವಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಕರ್ನಾಟಕದ ಜನರಿಗೆ ಉದ್ಯೋಗಗಳನ್ನು ಒದಗಿಸಲು ಕನ್ನಡದಲ್ಲಿ ಪ್ರಾವೀಣ್ಯತೆ ಖಂಡಿತವಾಗಿಯೂ ಪೂರ್ವಾಪೇಕ್ಷಿತವಾಗಿದೆ - ಹಾಗಾದರೆ ಮಲಯಾಳಂ ಅನ್ನು ಸ್ವೀಕರಿಸುವುದರ ಹಿಂದಿನ ತಾರ್ಕಿಕತೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಆ ನೋಟಿಸ್‌ನಲ್ಲಿ 'ಸ್ಥಳೀಯ' ಭಾಷೆ ಇದೆ ಅಂತ ನನಗೆ ಕಾಣುತ್ತೆ ಮತ್ತು ಆರ್.ಆರ್. ನಗರ ಬೆಂಗಳೂರಿನಲ್ಲಿ ಇದೆ, ಹಾಗಾಗಿ ಕನ್ನಡ ಕೂಡ ಅಷ್ಟೇ ಅರ್ಥ. ಬಹುಶಃ ಅವರಿಗೆ ಮಲಯಾಳಂ ತಿಳಿದಿರುವ ಯಾರಾದರೂ ಬೇಕಾಗಬಹುದು ಎಂದು ಕೃಷ್ಣ ಎನ್ನುವವರು ಪ್ರತಿಕ್ರಿಯೆ ನೀಡಿದ್ದಾರೆ. ಅಭಿಷೇಕ್ ಎನ್ನುವವರು ಮಲಯಾಳಿಗರ ಗುಂಪುಗಾರಿಕೆಯು ಕೆಟ್ಟದಾಗಿದೆ. ಅವರು ಇದನ್ನು ಸಾರ್ವಜನಿಕವಾಗಿ ಮಾಡಲು ಸಾಧ್ಯವಾದರೆ, ಮುಚ್ಚಿದ ಬಾಗಿಲುಗಳ ಹಿಂದೆ ಖಾಸಗಿಯಾಗಿ ಏನಾಗುತ್ತದೆ ಎಂದು ಊಹಿಸಿ. ನಮ್ಮ ಪೂರ್ವದ ನೆರೆಹೊರೆಯವರು ಮತ್ತು ಉತ್ತರದವರು ದಶಕಗಳಿಂದ ಕರ್ನಾಟಕದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಸ್ವಾತಂತ್ರ್ಯ ಇತ್ಯಾದಿಗಳ ಸಹಾಯದಿಂದ ಏನು ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
Dear @BlueDart_Official,why is your RR Nagar Bengaluru branch hiring notice demanding “Malayalam + English” while completely ignoring Kannada the local language of Karnataka? Bengaluru is in Karnataka&Kannada deserves respect and priority in local hiring.Pls explain this policy.. pic.twitter.com/kfMF8F7rQx
— VIV (@avirhm) May 30, 2026
ದಯವಿಟ್ಟು ಅಸುರಕ್ಷಿತ ಭಾವನೆ ಬೆಳೆಸಿಕೊಳ್ಳಬೇಡಿ. ಖಾಸಗಿ ಉದ್ಯೋಗದಾತರು ವ್ಯವಹಾರದ ಅವಶ್ಯಕತೆಗಳು ಮತ್ತು ಗ್ರಾಹಕರ ಅಗತ್ಯಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಾರೆ. ಕನ್ನಡದ ಮೇಲಿನ ಗೌರವ ಮುಖ್ಯ, ಆದರೆ ಹೆಚ್ಚುವರಿ ಭಾಷೆಗಳನ್ನು ತಿಳಿದುಕೊಳ್ಳುವುದು ಒಂದು ಪ್ರಯೋಜನವಾಗಿದೆ, ಬೆದರಿಕೆಯಲ್ಲ. ತ್ಯಾಜ್ಯ ನಿರ್ವಹಣೆ, ಅತಿಕ್ರಮಣಗಳು ಇತ್ಯಾದಿಗಳನ್ನು ಚರ್ಚಿಸಲು ಉತ್ತಮ ವಿಷಯಗಳಿವೆ ಎಂದು ನೆಟ್ಟಿಗರೊಬ್ಬರು ರಿಯಾಕ್ಟ್ ಮಾಡಿದ್ದಾರೆ.













Click it and Unblock the Notifications