Get Updates
Get notified of breaking news, exclusive insights, and must-see stories!

ಜಯಲಲಿತಾ ವಿರುದ್ಧ ಅಣ್ಣಾಮಲೈ ಪರೋಕ್ಷ ದಾಳಿ: ಮೈತ್ರಿ ಮುರಿಯುವ ಎಚ್ಚರಿಕೆ ನೀಡಿದ ಎಐಎಡಿಎಂಕೆ

ಚೆನ್ನೈ, ಜೂನ್. 13: ಕರ್ನಾಟಕದಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಗೆ ಈಗ ತಮಿಳುನಾಡಿನಲ್ಲಿ ಮತ್ತೊಂದು ಆಘಾತ ಎದುರಾಗಿದೆ. ತಮಿಳುನಾಡಿನಲ್ಲಿ ಅದರ ಏಕೈಕ ಮಿತ್ರಪಕ್ಷವಾದ ಎಐಎಡಿಎಂಕೆಯೊಂದಿಗಿನ ಮೈತ್ರಿ ಮುರಿದು ಬೀಳುವ ಸಾಧ್ಯತೆ ಕಂಡು ಬರುತ್ತಿದೆ. ಇದಕ್ಕೆ ಕಾರಣ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಹೇಳಿಕೆಗಳು.

ಹೌದು, ಎಐಎಡಿಎಂಕೆ ಕೇಂದ್ರ ನಾಯಕತ್ವದೊಂದಿಗೆ "ಉತ್ತಮ ಸಂಬಂಧ" ಹೊಂದಿದ್ದರೂ ಕೇಸರಿ ಪಕ್ಷದೊಂದಿಗಿನ ಮೈತ್ರಿಯನ್ನು ಮರುಪರಿಶೀಲಿಸುವಂತೆ ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಕೆ ಅಣ್ಣಾಮಲೈ ಒತ್ತಾಯಿಸುತ್ತಿದ್ದಾರೆ ಎಂದು ಎಐಎಡಿಎಂಕೆ ಸೋಮವಾರ ಹೇಳಿದೆ. ಈ ಹೇಳಿಕೆ ಬಂದಿರುವುದು ಅಣ್ಣಾಮಲೈ ತಮಿಳುನಾಡು ಮಾಜಿ ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು ಮತ್ತು ಅವರಲ್ಲಿ ಕೆಲವರು ಶಿಕ್ಷೆಗೊಳಗಾದರು ಎಂದು ಹೇಳಿಕೆ ನೀಡಿದ ಮೇಲೆ.

Tamil Nadu BJP Chief Annamalais Dig At Jayalalithaa, AIADMK Talks Break-Up

ಸೋಮವಾರ ಪ್ರಕಟವಾದ ಆಂಗ್ಲ ದೈನಿಕವೊಂದಕ್ಕೆ ಕೆ. ಅಣ್ಣಾಮಲೈ ಸಂದರ್ಶನದಲ್ಲಿ "ತಮಿಳುನಾಡು "ಮಾಜಿ ಮುಖ್ಯಮಂತ್ರಿಗಳು" ಅಪರಾಧಿಗಳಾಗಿರುವ ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು. ಆದರೆ, ಯಾವುದೆ ನಾಯಕರನ್ನು ಹೆಸರಿಸಿರಲಿಲ್ಲ. ಆದರೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸೆಂಬರ್ 2016 ರಲ್ಲಿ ಅಂತಿಮ ತೀರ್ಪಿಗೆ ಮುಂಚೆಯೇ ಜಯಲಲಿತಾ ನಿಧನರಾದರು. ಅವರ ಸಹಾಯಕಿ ವಿಕೆ ಶಶಿಕಲಾ ಮತ್ತು ಇತರ ಕೆಲವರನ್ನು ಸುಪ್ರೀಂ ಕೋರ್ಟ್ ಅಂತಿಮವಾಗಿ ದೋಷಿ ಎಂದು ಘೋಷಿಸಿತು.ಇದು 1991-1996 ರ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣ.

ಈ ಹೇಳಿಕೆಗಳು ಎಐಎಡಿಎಂಕೆಯನ್ನು ಕೆರಳಿಸಿದ್ದು, ಕೆ. ಅಣ್ಣಾಮಲೈ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಅವರು "ಮೈತ್ರಿಕೂಟದ ಬಗ್ಗೆ ಮರುಚಿಂತನೆ" ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ಅಣ್ಣಾಮಲೈ ಅವರ ವಿವಾದಾತ್ಮಕ ಹೇಳಿಕೆಗಳಿಂದ ಕಂಗೆಟ್ಟಿರುವ ಎಐಎಡಿಎಂಕೆ "ಅವರನ್ನು ಹಿಡಿತದಲ್ಲಿಟ್ಟುಕೊಳ್ಳಿ, ಇಲ್ಲದಿದ್ದರೆ..." ಎಂದು ಕೊನೆಯ ಎಚ್ಚರಿಕೆ ರವಾನಿಸಿದೆ.

ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್, "ಅಣ್ಣಾಮಲೈ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಲು ಅರ್ಹರಲ್ಲ, ಅವರು ಅವರ ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವರು ಮೈತ್ರಿ ಮುಂದುವರಿಸಲು ಬಯಸುವುದಿಲ್ಲ ಅಥವಾ ಪ್ರಧಾನಿ ಮೋದಿ ಮತ್ತೊಮ್ಮೆ ಗೆಲ್ಲಲು ಬಯಸುತ್ತಿಲ್ಲ ಎಂದು ನಮಗೆ ಅನ್ನಿಸುತ್ತಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

"ಕೇಂದ್ರ ನಾಯಕತ್ವ (ಬಿಜೆಪಿ) ನಮ್ಮೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೂ ಸಹ ಅಣ್ಣಾಮಲೈ ಅವರು ಮೈತ್ರಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಸಾಮಾನ್ಯ ಮತ್ತು ಶಾಶ್ವತ ಶತ್ರು ಡಿಎಂಕೆಯನ್ನು ಟೀಕಿಸುವ ಬದಲು, ಅಣ್ಣಾಮಲೈ ಅವರು ನಿಧನರಾದ ನಮ್ಮ ನಾಯಕನನ್ನು ಟೀಕಿಸಿದ್ದಾರೆ. ಅಣ್ಣಾಮಲೈ ಇಂದು ಪ್ರತಿ ಎಐಎಡಿಎಂಕೆ ಕಾರ್ಯಕರ್ತರನ್ನು ಕೆರಳುವಂತೆ ಮಾಡಿದ್ದಾರೆ" ಎಂದು ಎಐಎಡಿಎಂಕೆ ವಕ್ತಾರ ಡಿ ಜಯಕುಮಾರ್ ಚೆನ್ನೈನಲ್ಲಿ ಹೇಳಿದ್ದಾರೆ.

"ಅಣ್ಣಾಮಲೈ ಅವರ ಈ ಹೇಳಿಕೆಗಳು, ನಡವಳಿಕೆಗಳು ಮೈತ್ರಿ ಮುಂದುವರಿಯುವುದನ್ನು ಅವರು ಬಯಸುವುದಿಲ್ಲ ಎಂದು ತೋರಿಸುತ್ತದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಗೆಲ್ಲುವುದನ್ನು ಅವರು ಬಯಸುವುದಿಲ್ಲವೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ" ಎಂದು ಜಯಕುಮಾರ್ ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ನಡೆಗಳು ಎಐಎಡಿಎಂಕೆ ಪಾಳಯದಲ್ಲಿ ಆಗಾಗ್ಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿವೆ. ಮಾರ್ಚ್‌ನಲ್ಲಿ, ಅವರು 2024 ರ ಚುನಾವಣೆಗೆ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದರ ವಿರುದ್ಧ ಮಾತನಾಡಿದ್ದರು. ಇದು ಜಯಲಲಿತಾ ಅವರ ಮರಣದ ನಂತರ ಬಿಜೆಪಿಯೊಂದಿಗೆ ಬಹುನಿರೀಕ್ಷಿತ ಮೈತ್ರಿಯನ್ನು ರಚಿಸಿದ್ದ ಎಐಎಡಿಎಂಕೆಯ ಹಿರಿಯ ನಾಯಕರನ್ನು ಕೆರಳಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+