ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಸಾವು ಪ್ರಕರಣ: ಎಲ್ಲಾ ವಿಚಾರಣೆಗಳನ್ನು ಎದುರಿಸಲು ಸಿದ್ಧ ಎಂದ ಶಶಿಕಲಾ

|
Google Oneindia Kannada News

ಚೆನ್ನೈ ಅಕ್ಟೋಬರ್ 19: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಅವರು ತಮ್ಮ ವಿರುದ್ಧದ ಎಲ್ಲಾ ವಿಚಾರಣೆಗಳನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಶಶಿಕಲಾ ಸೇರಿದಂತೆ ಇತರ ಮೂವರ ವಿರುದ್ಧ ಸಮಿತಿಯು ತನಿಖೆಗೆ ಕರೆ ನೀಡಿದ ನಂತರ ಅರುಮುಗಸ್ವಾಮಿ ಸಮಿತಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ಉಚ್ಚಾಟಿತ ನಾಯಕಿ "ವರದಿಯಲ್ಲಿ ನನ್ನ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ನಾನು ಎದುರಿಸುತ್ತೇನೆ" ಎಂದು ಹೇಳಿದರು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಅವರ ಸಾವಿನ ತನಿಖೆಗಾಗಿ ಅರುಮುಗಸ್ವಾಮಿ ಆಯೋಗವನ್ನು ರಚಿಸಲಾಗಿದ್ದು, ಈ ಆಯೋಗ ಶಶಿಕಲಾ ಸೇರಿದಂತೆ ಇತರ ಮೂವರ ವಿರುದ್ಧ ತನಿಖೆ ನಡೆಸುವಂತೆ ಕೋರಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಶಶಿಕಲಾ, 'ನಾನು ಈ ಆರೋಪವನ್ನು ದೊಡ್ಡ ವಿಷಯವಾಗಿ ತೆಗೆದುಕೊಳ್ಳುತ್ತಿಲ್ಲ. ಇದು ನನಗೆ ಹೊಸದಲ್ಲ. ನನ್ನನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಹಲವು ಮಾರ್ಗಗಳಿವೆ. ಆದರೆ ಅವರು ನಮ್ಮ ಅಮ್ಮನ (ಜಯಲಲಿತಾ) ಸಾವನ್ನು ವಿವಾದಾತ್ಮಕವಾಗಿ ಮಾಡಿರುವುದು ನನಗೆ ನೋವು ತಂದಿದೆ. ನಾನು ಮತ್ತು ಜಯಲಲಿತಾ ಒಡಹುಟ್ಟಿದವರಲ್ಲ, ಸಹೋದರಿಯರೇ. ಇದು ಉತ್ತಮ ಸ್ನೇಹದ ಉದಾಹರಣೆಯಾಗಿತ್ತು. ನಾವು ನಮ್ಮ ಜೀವನವನ್ನು ಹಾಗೆ ಮಾತ್ರ ನಡೆಸಿದ್ದೇವೆ' ಎಂದು ಹೇಳಿದರು.

ಎಲ್ಲಾ ವಿಚಾರಣೆಗಳನ್ನು ಎದುರಿಸಲು ಸಿದ್ಧ ಎಂದು ಶಶಿಕಲಾ

ಎಲ್ಲಾ ವಿಚಾರಣೆಗಳನ್ನು ಎದುರಿಸಲು ಸಿದ್ಧ ಎಂದು ಶಶಿಕಲಾ

'ಈಗ ಅವರು ಆರುಮುಗಸ್ವಾಮಿ ಆಯೋಗದ ವರದಿಯನ್ನು ರಾಜಕೀಯವಾಗಿ ಮಾಡಿದ್ದಾರೆ. ಅವರು ಎಷ್ಟು ಬಾರಿ ನನ್ನನ್ನು ತನಿಖೆ ಮಾಡಿದರೂ ಸತ್ಯ ಬದಲಾಗುವುದಿಲ್ಲ. ನಮ್ಮ ಅಮ್ಮ (ಜಯಲಲಿತಾ) ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ. ಜಯಲಲಿತಾ ಅವರ ವೈದ್ಯಕೀಯ ಚಿಕಿತ್ಸೆಯಲ್ಲಿ ನಾನು ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ನಾನು ವೈದ್ಯಕೀಯ ಅಧ್ಯಯನ ಮಾಡಿಲ್ಲ. ಆದರೂ ನನ್ನ ಮೇಲೆ ಆರೋಪವಿದೆ. ವರದಿಯಿಂದ ನನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ನಾನು ಎದುರಿಸುತ್ತೇನೆ. ಈ ಬಗ್ಗೆ ಎಲ್ಲಾ ವಿಚಾರಣೆಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಅವರ ಸಾವಿನ ತನಿಖೆಗಾಗಿ ರಚಿಸಲಾದ ಆರುಮುಗಸ್ವಾಮಿ ತನಿಖಾ ಆಯೋಗ ಶಶಿಕಲಾ ಸೇರಿದಂತೆ ಇತರ ಮೂವರ ವಿರುದ್ಧ ತನಿಖೆಗೆ ಕರೆ ನೀಡಿದೆ. ಶಶಿಕಲಾ, ಜಯಲಲಿತಾ ಅವರ ಆಪ್ತ ವೈದ್ಯ ಕೆಎಸ್ ಶಿವಕುಮಾರ್, ಆಗ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್, ಆಗ ಆರೋಗ್ಯ ಸಚಿವರಾಗಿದ್ದ ಸಿ.ವಿಜಯಭಾಸ್ಕರ್ ಅವರ ತಪ್ಪು ಕಂಡು ಬಂದಿದ್ದು, ತನಿಖೆಗೆ ಆದೇಶಿಸಬೇಕಿದೆ ಎಂದು ಆರುಮುಗಸ್ವಾಮಿ ತನಿಖಾ ಆಯೋಗ ತೀರ್ಮಾನಿಸಿದೆ.

ಜಯಲಲಿತಾ ಮರಣದವರೆಗೆ ಒದಗಿಸಿದ ಚಿಕಿತ್ಸೆ ಬಗ್ಗೆ ತನಿಖೆ

ಜಯಲಲಿತಾ ಮರಣದವರೆಗೆ ಒದಗಿಸಿದ ಚಿಕಿತ್ಸೆ ಬಗ್ಗೆ ತನಿಖೆ

ಆಗಸ್ಟ್‌ನಲ್ಲಿ, ಜೆ ಜಯಲಲಿತಾ ಅವರ ಸಾವಿನ ತನಿಖೆಗೆ ನೇಮಕಗೊಂಡ ನಿವೃತ್ತ ನ್ಯಾಯಮೂರ್ತಿ ಆರುಮುಗಸಾಮಿ ಅವರ ಏಕಸದಸ್ಯ ಆಯೋಗವು ಐದು ವರ್ಷಗಳ ನಂತರ ತನ್ನ ವರದಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಸಚಿವಾಲಯದಲ್ಲಿ ಸಲ್ಲಿಸಿತು.

ಡಿಸೆಂಬರ್ 2016 ರಲ್ಲಿ ಜಯಲಲಿತಾ ಅವರ ನಿಧನದ ನಂತರ, ಅವರ ಸಾವಿನ ಕಾರಣ ಮತ್ತು ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆ ರಾಜಕೀಯ ಆರೋಪಗಳು ರೂಪಗೊಂಡಿವೆ. ಆಕೆಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನರ್‌ಸೆಲ್ವಂ ಮನವಿ ಮಾಡಿದ್ದರು. ಇದು ಅರುಮುಘಸ್ವಾಮಿ ಆಯೋಗ ರಚನೆಗೆ ಕಾರಣವಾಯಿತು.

159 ಕ್ಕೂ ಹೆಚ್ಚು ಸಾಕ್ಷಿಗಳು

159 ಕ್ಕೂ ಹೆಚ್ಚು ಸಾಕ್ಷಿಗಳು

22 ಸೆಪ್ಟೆಂಬರ್ 2016 ರಂದು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭಗಳು, ಆರೋಗ್ಯ ಸ್ಥಿತಿ ಮತ್ತು ಪರಿಸ್ಥಿತಿ ಹಾಗೂ ನಂತರದ ಚಿಕಿತ್ಸೆ, ಅವರ ಮರಣದವರೆಗೆ ಒದಗಿಸಿದ ಚಿಕಿತ್ಸೆ ಬಗ್ಗೆ ತನಿಖೆ ಮಾಡಲು ಆಯೋಗವನ್ನು ನಿಯೋಜಿಸಲಾಗಿತ್ತು.

ಆರುಮುಗಸಾಮಿ ಅವರು 608 ಪುಟಗಳ ಅಂತಿಮ ವರದಿಯನ್ನು ತಮಿಳಿನಲ್ಲಿ ಮತ್ತು 500 ಪುಟಗಳ ವರದಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಿದ್ದಾರೆ. ಜಯಲಲಿತಾಗೆ ಸಂಬಂಧಿಸಿದಂತೆ 159 ಕ್ಕೂ ಹೆಚ್ಚು ಸಾಕ್ಷಿಗಳು ಆರುಮುಘಸ್ವಾಮಿ ಆಯೋಗದ ಮುಂದೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

ಜಯಲಲಿತಾ ಆಪ್ತರ ವಿಚಾರಣೆ

ಜಯಲಲಿತಾ ಆಪ್ತರ ವಿಚಾರಣೆ

ಗಮನಾರ್ಹವೆಂದರೆ, ಆರುಮುಗಸ್ವಾಮಿ ಆಯೋಗವು ನವೆಂಬರ್ 2017 ರಲ್ಲಿ ಜಯಲಲಿತಾ ಅವರ ಆಪ್ತ ಸಹಾಯಕರು ಮತ್ತು ಚಿಕಿತ್ಸೆ ನೀಡಿದ ವೈದ್ಯರು, ತಮಿಳುನಾಡು ಆರೋಗ್ಯ ಸಚಿವ ವಿಜಯಭಾಸ್ಕಕರ್, ನಂತರ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್, ತಮಿಳುನಾಡು ಹಣಕಾಸು ಸಚಿವ ಮತ್ತು ಎಐಎಡಿಎಂಕೆ ಹಿರಿಯ ನಾಯಕ ಓ ಪನ್ನರಸೆಲ್ವಂ ಅವರ ವಿಚಾರಣೆಗಳೊಂದಿಗೆ ತನ್ನ ತನಿಖೆಯನ್ನು ಪ್ರಾರಂಭಿಸಿತು.

ಏತನ್ಮಧ್ಯೆ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ವೈದ್ಯರ ಸಮಿತಿಯ ವರದಿಯು ದಿವಂಗತ ಜಯಲಲಿತಾ ಅವರಿಗೆ "ಸರಿಯಾದ ವೈದ್ಯಕೀಯ ಅಭ್ಯಾಸದ ಪ್ರಕಾರ ಚಿಕಿತ್ಸೆ ನೀಡಲಾಯಿತು ಮತ್ತು ಒದಗಿಸಿದ ಆರೈಕೆಯಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ" ಎಂದು ಪ್ರತಿಪಾದಿಸಿದೆ. ಸಮಿತಿಯು ಜಯಲಲಿತಾ ಅವರ ಆರೋಗ್ಯದ ಎಲ್ಲಾ ಅಂತಿಮ ರೋಗನಿರ್ಣಯ ಮತ್ತು ಘಟನೆಗಳ ಟೈಮ್‌ಲೈನ್ ಅನ್ನು ಸಂಪೂರ್ಣವಾಗಿ ಗಮನಿಸಿದೆ ಮತ್ತು ಅಪೊಲೊ ಚಿಕಿತ್ಸೆ ಮತ್ತು ರೋಗನಿರ್ಣಯವನ್ನು ಸಹ ಒಪ್ಪಿಕೊಂಡಿದೆ.

English summary
Expelled AIADMK leader Sasikala says she is ready to face all inquiries against former Tamil Nadu Chief Minister Jayalalithaa's death case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X