'ಓಲ್ಡ್ ಮಾಂಕ್' ಪರಿಚಯಿಸಿದ ಕಪಿಲ್ ಮೋಹನ್ ಇನ್ನಿಲ್ಲ

Posted By:
Subscribe to Oneindia Kannada

ನವದೆಹಲಿ, ಜನವರಿ 09: ದೇಶದ ಚಿರಪರಿಚಿತ ರಮ್ 'ಓಲ್ಡ್ ಮಾಂಕ್' ಪರಿಚಯಿಸಿದ ನಿವೃತ್ತ ಬ್ರಿಗೇಡಿಯರ್ ಕಪಿಲ್ ಮೋಹನ್ ಅವರು ನಿಧನರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಕಪಿಲ್‌ ಮೋಹನ್ ಅವರು ಹೃದಯಾಘಾತದಿಂದ ಜನವರಿ 06ರಂದು ಮೃತಪಟ್ಟಿದ್ದಾರೆ.

ಮದ್ಯಪ್ರಿಯರಿಗೆ ಕಿಕ್ ಕೊಡುವ ಸುದ್ದಿ : ಓಲ್ಡ್ ಮಾಂಕ್ ಅಲೈವ್!

ಮೋಹನ್ ಮೆಕಿನ್ ಮದ್ಯ ಉತ್ಪಾದನಾ ಸಂಸ್ಥೆಯ ಎಂಡಿಯಾಗಿದ್ದ ಮೋಹನ್ ಅವರು ಗಾಜಿಯಾಬಾದ್‌ನ ಮೋಹನ್ ನಗರದಲ್ಲಿ ವಾಸಿಸುತ್ತಿದ್ದರು. ಜನವರಿ 07ರಂದು ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. 2010ರಲ್ಲಿ ಪದ್ಮಶ್ರೀ ಪುರಸ್ಕೃತರಾದ ಮೋಹನ್ ಅವರು ಪತ್ನಿ ಪುಷ್ಪ ಅವರನ್ನು ಅಗಲಿದ್ದಾರೆ.

1954ರ ಡಿಸೆಂಬರ್ 19ರಂದು ಮಾರುಕಟ್ಟೆ ಪ್ರವೇಶಿಸಿದ ಓಲ್ಡ್ ಮಾಂಕ್, ಎರಡು ವರ್ಷಗಳ ಕೆಳಗೆ ಮಾರಾಟ ಸ್ಥಗಿತವಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಮದ್ಯಪ್ರಿಯರು ಅತ್ಯಂತ ಕಡಿಮೆ ಬೆಲೆಯ ದೇಸಿ ರಮ್ ಉಳಿಯುವಂತೆ ಮಾಡಿದ್ದರು.

ರುಚಿ ಹೆಚ್ಚಲು ಸ್ವಲ್ಪ ನಿಂಬೆ ರಸ ಬೆರೆಸಬಹುದು

ರುಚಿ ಹೆಚ್ಚಲು ಸ್ವಲ್ಪ ನಿಂಬೆ ರಸ ಬೆರೆಸಬಹುದು

ಉತ್ತರಪ್ರದೇಶದ ಗಾಜಿಯಾಬಾದಿನಿಂದ ವಿಶ್ವದ ಅನೇಕ ಕಡೆ ಪ್ರಚಾರಗೊಂಡ ರಮ್ ಬ್ರ್ಯಾಂಡ್. ಶೇ 42.8ರಷ್ಟು ಎಥಾನಾಲ್ ಹೊಂದಿರುವ ರಮ್ ಜೊತೆಗೆ ಥಮ್ಸ್ ಅಪ್ ಚೆನ್ನಾಗಿ ಬಳಸಲಾಗುತ್ತದೆ. ಇಲ್ಲದಿದ್ದರೆ ಗಾಢವಾದ ಕೋಲಾ, ಸೋಡಾ ಅಥವಾ ನೀರು ಬೆರೆಸಿಕೊಂಡು ಕುಡಿಯಬಹುದು. ರುಚಿ ಹೆಚ್ಚಲು ಸ್ವಲ್ಪ ನಿಂಬೆ ರಸ ಬೆರೆಸಬಹುದು.

ಓಲ್ಡ್ ಮಾಂಕ್ ಮಂಕಾದರೂ ಮಾರುಕಟ್ಟೆಯಲ್ಲಿದೆ

ಮೆಕ್ ಡೋನಾಲ್ಡ್ ನಂ.1 ಸೆಲೆಬ್ರೇಷನ್ ರಮ್ ಮುಂದೆ ಓಲ್ಡ್ ಮಾಂಕ್ ಮಂಕಾದರೂ xxx ರಮ್ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.

ಕೆನಡಾದಲ್ಲೂ ಓಲ್ಡ್ ಮಾಂಕ್

ರಷ್ಯಾ, ಯುಎಸ್ಎ, ಯುಕೆ, ಜಪಾನ್, ಯುಎಇ, ಫಿನ್ ಲ್ಯಾಂಡ್, ನ್ಯೂಜಿಲೆಂಡ್, ಕೆನಡಾದಲ್ಲೂ ಓಲ್ಡ್ ಮಾಂಕ್ ಕಾಲಿಟ್ಟಿದ್ದಾನೆ.

'ಓಲ್ಡ್ ಮಾಂಕ್' ಪರಿಚಯಿಸಿದ ಮೋಹನ್ ಸ್ಮರಣೆ

ದೇಶದ ಅನೇಕ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಓಲ್ಡ್ ಮಾಂಕ್ ಮದ್ಯದ ವಹಿವಾಟು ಕುಸಿದಿದೆ ಎಂಬ ಸುದ್ದಿ ಮೋಹನ್ ಸಂಸ್ಥೆಗೆ ಆಘಾತಕಾರಿಯಾಗಿ ಪರಿಣಮಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It is a sad day for the Old Monk fans. Brigadier (retd) Kapil Mohan(88), the man behind the iconic Old Monk rum has passed away. Old Monk was launched in 1954 and was the largest selling rum brand in the world for long.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ