ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾನ್ಯಗಳ ದರ ಕೊಂಚ ಇಳಿಕೆ, ಈರುಳ್ಳಿ ದಿಢೀರ್ ಕುಸಿತ

|
Google Oneindia Kannada News

ನವದೆಹಲಿ, ಅಕ್ಟೋಬರ್. 20: ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದ್ದ ಬೆಳೆ ಕಾಳುಗಳ ದರದಲ್ಲಿ ಕೊಂಚ ಇಳಿಕೆಯಾಗಿದೆ. ಬೇಳೆಕಾಳುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತುರ್ತು ಕ್ರಮ ಘೊಷಿಸಿದ ಮರುದಿನವೇ ಬೆಲೆ ಇಳಿಕೆ ಕಂಡಿದೆ.

ಕೆಜಿಗೆ 200 ರು. ತಲುಪಿರುವ ತೊಗರಿ ಬೆಳೆ ಇಳಿಕೆಯ ಹಾದಿಗೆ ಮರಳಿಲ್ಲ. ಉದ್ದಿನ ಬೆಳೆ ಸಹ ಕೆಜಿಗೆ 150 ರು. ದಲ್ಲಿ ಮಾರಾಟವಾಗುತ್ತಿದೆ. ಉದ್ದು, ಹೆಸರು, ತೊಗರಿ ಬೆಳೆಗಳು ದೆಹಲಿ ಮಾರುಕಟ್ಟೆಯಲ್ಲಿ ಕೊಂಚ ಇಳಿಕೆ ಸಾಧಿಸಿವೆ. ಅಕ್ಟೋಬರ್ 18ಕ್ಕೆ ಹೋಲಿಕೆ ಮಾಡಿದರೆ ಕ್ವಿಂಟಾಲ್ ಗೆ 500 ರು. ಕಡಿಮೆಯಾಗಿದೆ.[ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು]

tur

ದರ ಇನ್ನಷ್ಟು ಕಡಿಮೆಯಾಗಲಿದ್ದರೂ ಸಹ ಚಿಲ್ಲರೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಲು ಒಂದೆರಡು ವಾರ ತೆಗೆದುಕೊಳ್ಳಬಹುದು.

ಸೋಮವಾರದ ದರ(ಕ್ವಿಂಟಾಲ್ ಗೆ)
* ಉದ್ದು: 9500-10500
* ಹೆಸರು: 7600-8200
* ತೊಗರಿ : 12500-12800

ಈರುಳ್ಳಿ ದರ ದಿಢೀರ್ ಕುಸಿತ
ರಫ್ತು ಸ್ಥಗಿತ ಹಾಗೂ ದಾಖಲೆ ಪ್ರಮಾಣದ ಆವಕದಿಂದಾಗಿ ಈರುಳ್ಳಿ ಬೆಲೆ ಏಕಾಏಕಿ ಕುಸಿದಿದೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಕಾರಣ ಕೋಲ್ಕತ್ತಾ, ಮೆಹದಿಪುರ ಹಾಗೂ ಹೀಲಿ ಗಡಿ ಮೂಲಕ ವ್ಯವಹಾರ ಸ್ಥಗಿತ ಮಾಡಲಾಗಿದ್ದು ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ಸ್ಥಗಿತಗೊಂಡಿದೆ. ಹೊಸ ಬೆಳೆ ಕೈಗೆ ಬಂದಿದ್ದು ಮಾರುಕಟ್ಟೆಗೆ ದಾಖಲೆ ಪ್ರಮಾಣದಲ್ಲಿ ಈರುಳ್ಳಿ ಆಗಮಿಸಿದೆ. ಕ್ವಿಂಟಾಲ್ ಗೆ 3,800 ಎಉ. ಇದ್ದ ಈರುಳ್ಳಿ ಏಕಾಏಕಿ 2,500ಕ್ಕೆ ಕುಸಿದಿದೆ. ದರ ಇಳಿಕಯನ್ನು ಖಂಡಿಸಿ ರೈತರು ಪ್ರತಿಭಟನೆಯನ್ನು ಆರಂಭ ಮಾಡಿದ್ದಾರೆ.

English summary
After the Central Government instructions Dal price slightly fall down in New Delhi. Tur dal, Urad have fallen 500 rupees per 100 kg on Monday Market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X