ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿಗಳಿಗೆ ಕಹಿ ಸುದ್ದಿ, ವರ್ತೂರು ಸೇತುವೆ ಕಾಮಗಾರಿ ಮತ್ತಷ್ಟು ವಿಳಂಬ ಸಾಧ್ಯತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಸರ್ಜಾಪುರ ರಸ್ತೆ ಮೂಲಕ ವರ್ತೂರು ಕೋಡಿಗೆ ಆಗಮಿಸುವವರು ಇನ್ನೂ ಒಂದು ತಿಂಗಳು ಕಾಯಲೇ ಬೇಕಾಗಿದೆ.

ಈಗಾಗಲೇ ಮುಕ್ತಾಯದ ಹಂತದಲ್ಲಿರುವ ವರ್ತೂರು ಸೇತುವೆ ಕಾಮಗಾರಿ ಅಂತಿಮಗೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಿದೆ. ಬಿಬಿಎಂಪಿಯು ವರ್ತೂರು ಕೋಡಿ ಬಳಿ ಎರಡು ಸೇತುವೆ ಕಾರ್ಯವನ್ನು ಈ ತಿಂಗಳು ಪೂರ್ಣಗೊಳಿಸಬೇಕು. ಕೆಲವು ಬೇರಿಂಗ್‌ಗಳು ಕೊಲ್ಕತ್ತಾದಿಂದ ಆಗಮಿಸುತ್ತಿರುವ ಕಾರಣ ಕಾರ್ಯ ವಿಳಂಬವಾಗುತ್ತಿದೆ.

ಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿ

87 ಮೀಟರ್ ಅಂತರದಲ್ಲಿ ಎರಡು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು 30 ಕೋಟಿ ವೆಚ್ಚವಾಗಲಿದೆ. ಕಾಮಗಾರಿಯನ್ನು 2018ರಲ್ಲಿಯೇ ಆರಂಭಿಸಲಾಗಿದೆ. ಈ ಯೋಜನೆಯು ಜಾಗದ ತೊಂದರೆಯಿಂದಾಗಿ ಸಾಕಷ್ಟು ವಿಳಂಬವಾಗಿತ್ತು. ಆಸ್ತಿ ಮಾಲೀಕರು ಜಾಗವನ್ನು ಕೊಡಲು ಹಿಂದೇಟು ಹಾಕಿದ್ದರು.

Varthur bridges likely to be delayed further

ಬಳಿಕ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಸ್ಥಳವನ್ನು ನೀಡಿತ್ತು. ಇದೀಗ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಸೇತುವೆಗೆ ಬೇರಿಂಗ್ ಅಳವಡಿಸುವುದಷ್ಟೇ ಬಾಕಿ ಇದೆ.

ಇದರಲ್ಲಿ ಒಂದು ಸೇತುವೆಯ ಕಾಮಗಾರಿ ಮಾರ್ಚ್‌ನಲ್ಲಿ ಅಂತ್ಯಗೊಳ್ಳಲಿದ್ದು, ಮತ್ತೊಂದು ಸೇತುವೆ ಮೇ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.ವರ್ತೂರು ಕೋಡಿಯಿಂದ ಗಂಜೂರು ಮಾರ್ಗದಲ್ಲಿ ಹಲವು ವರ್ಷಗಳಿಂದ ಬಾಕಿ ಇದ್ದ ರಸ್ತೆ ಅಗಲೀಕರಣ ಕಾಮಗಾರಿ ಕೂಡ ನಡೆಯುತ್ತಿದೆ. 1.4 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಕಾಮಗಾರಿಯೂ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Commuters along varthur kodi via Sarjapur road and surrounding area may have to wait for ay least one month for an easy commute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X