ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ. 10, 11ರಂದು ಬೆಂಗಳೂರಿನಲ್ಲಿ ದಕ್ಷಿಣ ಬೃಂದಾವನ ಸಂಗೀತ ಸಮ್ಮೇಳನ

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 7: ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿಯವರ ಸಂಜೋಗ್ ಚ್ಯಾರಿಟೇಬಲ್ ಟ್ರಸ್ಟ್ ಹಾಗೂ ಟಾಟಾ ಕ್ಯಾಪಿಟಲ್ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಸಂಗೀತ ಸಮ್ಮೇಳ ಆಯೋಜಿಸಲಾಗಿದೆ. ಫೆ. 10, 11 ರಂದು ನಗರದ ಸೆಂಟ್ರಲ್ ಕಾಲೇಜ್ ಆವರಣದಲ್ಲಿರುವ ಜ್ನಾನ ಜ್ಯೋತಿ ಸಭಾಂಗಣದಲ್ಲಿ ಈ ದಕ್ಷಿಣ ಬೃಂದಾವನ ಸಂಗೀತ ಸಮ್ಮೇಳನ ನಡೆಯಲಿದೆ.

ಖ್ಯಾತ ನಾಮರಾದ ಉಸ್ತಾದ ಶಾಹಿದ್ ಪರ್ವೇಜ್, ಪಂಡಿತ್ ವೆಂಕಟೇಶ ಕುಮಾರ್, ಪ್ರವೀಣ ಗೋಡ್ಖಿಂಡಿ, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ, ಪಂಡಿತ್ ಯೋಗೇಶ್ ಸಂಸಿ, ಪಂಡಿತ್ ಶುಭಂಕರ ಬ್ಯಾನರ್ಜಿ, ರಾಜೇಂದ್ರ ಗಂಗಾನಿ-ರುಜುತಾ ಸೋಮನ್(ನೃತ್ಯ), ಶಡಜ್ ಗೋಡ್ಖಿಂಡಿ ಮತ್ತು ಇನ್ನೂ ಅನೇಕ ಕಲಾವಿದರು ಈ ಎರಡು ದಿವಸದ ಸಂಗೀತ-ನೃತ್ಯ ಮಹೋತ್ಸವದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

Two day classical music and dance festival on Feb 10 and 11 in Bengaluru

ಈ ಸಮ್ಮೇಳನದ ಆಕರ್ಷಣೆಯಾಗಿ ಅನೇಕ ಸೋಲೋ, ಜುಗಲ್ಬಂದಿ ಹಾಗೂ ವಿಶಿಷ್ಟ ನೃತ್ಯ ಕಾರ್ಯಕ್ರಮಗಳು ಇರಲಿವೆ. ಮುಂದಿನ ವರ್ಷಗಳಲ್ಲಿ ಈ 'ದಕ್ಷಿಣ ಬೃಂದಾವನ ಸಂಗೀತ ಸಮ್ಮೇಳನ'ವನ್ನು ರಾಷ್ಟ್ರ ಮಟ್ಟದ ಪ್ರಮುಖ ಕಲಾ ಸಮ್ಮೇಳನವಾಗಿಸುವುದು ಪ್ರವೀಣ್ ಗೋಡ್ಖಿಂಡಿಯವರ ಕನಸಾಗಿದೆ.

Two day classical music and dance festival on Feb 10 and 11 in Bengaluru

ಉಚಿತ ಪ್ರವೇಶ

ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ - 9845329954 ಸಂಪರ್ಕಿಸಬಹುದಾಗಿದೆ. ಜತೆಗೆ ಸಂಜೋಗ್ ಚ್ಯಾರಿಟೇಬಲ್ ಟ್ರಸ್ಟ್ ನ ಫೇಸ್ಬುಕ್ ಪೇಜನ್ನೂ ಸಂಪರ್ಕಿಸಬಹುದು.

ಸ್ಥಳ: ಜ್ನಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜ್ ಕ್ಯಾಂಪಸ್, ಬೆಂಗಳೂರು

ದಿನಾಂಕ: 10 ಮತ್ತು 11 ಫೆಬ್ರುವರಿ 2018.

ಸಮಯ: ಸಂಜೆ 5 ಗಂಟೆ

Two day classical music and dance festival on Feb 10 and 11 in Bengaluru
English summary
Godkhindi’s Sanjog Charitable trust in association with TATA Capital has organized this 2 day classical music and dance festival on Feb 10th, 11th 2018, at Jnana Jyothi auditorium, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X