ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟವಾಡುವಾಗ ಕಾಲುವೆಗೆ ಬಿದ್ದು ಮೂರು ವರ್ಷದ ಮಗು ಸಾವು

|
Google Oneindia Kannada News

ಬೆಂಗಳೂರು, ಜನವರಿ 09: ರಾಜಾಕಾಲುವೆಗೆಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದ ದೊಡ್ಡ ಬೊಮ್ಮಸಂದ್ರದ ರಾಘವೇಂದ್ರ ಮಠದ ಬಳಿ ಮಂಗಳವಾರ ನಡೆದಿದೆ.

ತನುಶ್ರೀ(3) ಮೃತ ಮಗು, ಯಾದಗಿರಿಯ ಮುಂಡರಗಿ ಮೂಲದ ದಂಪತಿ ಗಾರೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದಾರೆ. ರಾಜಕಾಲುವೆ ಪಕ್ಕದಲ್ಲೇ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಬೆಳಗ್ಗೆ 10 ರ ಸುಮಾರಿಗೆ ಆಟ ಆಡುವಾಗ ರಾಜಾಕಾಲುವೆಗೆ ಬಿದ್ದು ದುರ್ಘಟನೆ ಸಂಭವಿಸಿದೆ.

ಜಗತ್ತು ಏನೆಂದು ಅರಿಯದ ಮಗು, ಆದರೆ ವಿಧಿ ಅ ಪುಟ್ಟ ಜೀವದ ಜತೆ ಆಟ ಆಡಿದೆ. ಆಟ ಆಡಲು ಹೋದ ಮಗು ಹೋಗಿದ್ದು ಮಾತ್ರ ಸಾವಿನ ಮನೆಗೆ. ರಾಜಾಕಾಲುವೆಗೆ ತಡೆಗೋಡೆಯನ್ನು ನಿರ್ಮಿಸದೆ ಬಿಬಿಎಂಪಿ ನಿರ್ಲಕ್ಷಿಸಿರುವುದೇ ಮಗುವಿನ ಸಾವಿಗೆ ಕಾರಣವಾಗಿದೆ.

Three year kid washed away in Rajakaluve

ಸ್ಥಳಕ್ಕೆ ಆಗಮಿಸಿರುವ ಮೇಯರ್ ಸಂಪತ್ ರಾಜ್ ಮಗುವಿನ ಹೆತ್ತವರಿಗೆ 5 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಬಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

English summary
Tanushree, a Three year old girl who was playing near Rajakaluve at Vidyaranyapura of Dodda Bommasandra was washed away on Tuesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X