• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನವರಿ 8 ರಂದು ದೇಶವ್ಯಾಪಿ ಬಂದ್‌ಗೆ ಕರೆಕೊಟ್ಟ ಸಿಪಿಐ

|

ಬೆಂಗಳೂರು, ಡಿಸೆಂಬರ್ 27: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊರಟಿರುವ ಎನ್‌ಆರ್‌ಸಿ, ಎನ್‌ಪಿಆರ್, ಸಿಎಎ ವಿರುದ್ಧ ಸಿಪಿಐ ಜನವರಿ 8ರಂದು ದೇಶವ್ಯಾಪಿ ಬಂದ್‌ಗೆ ಕರೆಕೊಟ್ಟಿದೆ.

ದೇಶದ ಜನರನ್ನು ವಿಭಜಿಸಲು ಸಿಎಎ, ಎನ್‌ಪಿಆರ್‌, ಎನ್‌ಆರ್‌ಸಿ ಜಾರಿಗೆ ತರಲಾಗುತ್ತಿದೆ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.‌ರಾಜಾ ಆರೋಪಿಸಿದ್ದಾರೆ.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬಿಜೆಪಿ ಮತ್ತು ಆರ್ ಎಸ್ ಎಸ್ ನಿಜವಾದ ತುಕುಡೆ ತುಕುಡೆ ಗ್ಯಾಂಗ್, ಜನವರಿ 1 ರಿಂದ 7ರವರೆಗೆ ದೇಶವ್ಯಾಪಿ ಕೇಂದ್ರ ಸರ್ಕಾರದ ವಿರುದ್ಧ ಅಭಿಯಾನಕ್ಕೆ ಎಡಪಕ್ಷಗಳು ಕರೆ ಕೊಡುತ್ತಿವೆ.

ಜನವರಿ 8 ರಂದು ದೇಶವ್ಯಾಪಿ ಬಂದ್ ಗೆ ಕರೆ ಕೊಡಲಾಗಿದೆ.ಬಿಜೆಪಿ, ಆರ್ ಎಸ್ ಎಸ್ ವಿರುದ್ಧ ಕರ್ನಾಟಕದಲ್ಲಿ ಕೂಡಾ ಬೃಹತ್ ಹೋರಾಟ ರೂಪಿಸುತ್ತೇವೆ.ಕೇಂದ್ರ ಸರ್ಕಾರವನ್ನು ಯಾರಾದರೂ ಪ್ರಶ್ನಿಸಿದರೆ ಅವರನ್ನು ದೇಶ ವಿರೋಧಿಗಳು ಎಂಬಂತೆ ಬಿಂಬಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದರೆ ಅರ್ಬನ್ ನಕ್ಸಲರು ಎನ್ನಲಾಗುತ್ತಿದೆ. ಸ್ವತಃ ಗೃಹಸಚಿವ ಅಮಿತ್ ಷಾ ಈ ಮಾತು ಹೇಳುತ್ತಾರೆ ಎಂದರು.

ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣ ಕುರಿತು ಮಾತನಾಡಿರುವ ಅವರು, ಇಂತಹ ಘಟನೆಗಳನ್ನು ನಾವು ಎಷ್ಟೋ ನೋಡಿದ್ದೇವೆ, ಸೈದ್ಧಾಂತಿಕವಾಗಿ, ರಾಜಕೀಯವಾಗಿ, ಸಂಘಟನಾತ್ಮಕವಾಗಿ ನಾವು ಹೋರಾಡುತ್ತೇವೆ.

ನಮ್ಮ ಕಾರ್ಯಕರ್ತರು ಗೂಂಡಾಗಳಿಗೆ ಹೆದರಿ ಓಡಿ ಹೋಗುತ್ತಾರೆ ಅಂತಾ ಯಾರೂ ಭಾವಿಸೋದು ಬೇಡ.ಸ್ವಾತಂತ್ರ್ಯ ಹೋರಾಟ ಮಾಡಿದ ಇತಿಹಾಸ ನಮ್ಮದು ಇದೆ.ಸಿಎಎ ವಿರುದ್ಧ ಹೋರಾಟ ನಡೆಯುತ್ತಿರುವ ಸಮಯದಲ್ಲೇ ಸಿಪಿಐ ಕಚೇರಿಗೆ ಬೆಂಕಿ ಹಚ್ಚುವ ಯತ್ನ ನಡೆದಿದೆ ಎಂದು ಆರೋಪಿಸಿದರು.

ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಹೋರಾಟ ಮುಂದುವರಿಯಲಿದೆ.ಸಿಎಎ ವಿಚಾರದಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶ ಮಾಡಬೇಕು.ನಮ್ಮ ಸೇನೆ ಭಾರತೀಯ ಸೇನೆ, ಸೇನಾ ಮುಖ್ಯಸ್ಥ ಹೇಗೆ ನಾಗರಿಕ ವಿಚಾರದಲ್ಲಿ ಪ್ರವೇಶ ಮಾಡುತ್ತಾರೆ? ಮೊದಲ ಬಾರಿಗೆ ಸರ್ಕಾರ ಸೇನಾ ಮುಖ್ಯಸ್ಥರಿಗೆ ನಾಗರಿಕ ವಿಚಾರದಲ್ಲಿ ಮಾತನಾಡಲು ಅವಕಾಶ ಕೊಟ್ಟಿದೆ, ಈವರೆಗೆ ನಮ್ಮಲ್ಲಿ ಅಂತಹ ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳಿದರು.

English summary
On January 8, the CPI called for a nationwide Bandh against the NRC, NPR and CAA, which is going to be implemented by the central government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X