• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯಸಭೆ ಚುನಾವಣೆ, ಕರ್ನಾಟಕದಲ್ಲಿ 4 ಸ್ಥಾನ ಖಾಲಿ, ರೇಸ್‌ನಲ್ಲಿ ಯಾರಿದ್ದಾರೆ?

|

ಬೆಂಗಳೂರು, ಜೂನ್ 1: ರಾಜ್ಯಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, 18 ಸ್ಥಾನಗಳಿಗೆ ಎಲೆಕ್ಷನ್ ನಡೆಯಲಿದೆ. ಕರ್ನಾಟಕದಲ್ಲಿ 4 ಸ್ಥಾನಗಳು ತೆರವುಗೊಳ್ಳಲಿದ್ದು, ಈ ಸಲ ರಾಜ್ಯಸಭೆ ಪ್ರವೇಶ ಪಡೆಯುವ ಅದೃಷ್ಟವಂತರು ಯಾರು ಎಂಬ ಕುತೂಹಲ ಹೆಚ್ಚಿದೆ.

ನಾಲ್ಕು ಸ್ಥಾನಗಳ ಪೈಕಿ ಬಿಜೆಪಿ ಎರಡು ಸ್ಥಾನ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೆ ತಲಾ ಒಂದೊಂದು ಸ್ಥಾನ ಗೆಲ್ಲಬಹುದು. ಇದರಲ್ಲಿ ಹಾಲಿ ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆಯವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆ ಇದೆ.

ರಾಜ್ಯಸಭೆಯ 18 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟ

ಆದರೆ, ರಾಜ್ಯ ಬಿಜೆಪಿಯಲ್ಲಿ ಇದಕ್ಕೆ ವಿರೋಧ ಇದೆ. ಮಾಜಿ ಸಚಿವ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡಬೇಕು ಎಂಬ ಒತ್ತಡ ಇದೆ. ಯಡಿಯೂರಪ್ಪ ಅವರು ಈ ಹಿಂದೆ ಆಶ್ವಾಸನೆ ನೀಡಿದ್ದಾರೆ. ಹಾಗಾಗಿ, ಉಮೇಶ್ ಕತ್ತಿಗೆ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ.

ಪ್ರಭಾಕರ್ ಕೋರೆ ಅವರು ಈ ಹಿಂದೆ ಎರಡು ಬಾರಿ ರಾಜ್ಯಸಭೆ ಸದಸ್ಯರಾಗಿದ್ದಾರೆ. ಈ ಸಲ ಹೊಸಬರಿಗೆ ಅವಕಾಶ ಕೊಡಿ ಎಂದು ಉಮೇಶ್ ಕತ್ತಿ ಅಂಡ್ ಟೀಂ ಹೇಳುತ್ತಿದೆ. ಬಿಜೆಪಿಯ ಎರಡನೇ ಸ್ಥಾನಕ್ಕಾಗಿ ಹಲವು ಹೆಸರು ಚರ್ಚೆಯಲ್ಲಿದ್ದು, ಡಾ ವಾಮನಾಚಾರ್ಯ, ನಿರ್ಮಲ್ ಕುಮಾರ್ ಸುರಾನ, ಎಚ್ ವಿಶ್ವನಾಥ್ ರೇಸ್‌ನಲ್ಲಿದ್ದಾರೆ.

ರಾಜ್ಯಸಭಾ ಚುನಾವಣೆ; ಬಿಜೆಪಿ ಬಹುಮತ ಪಡೆಯುವುದು ಕಷ್ಟ

ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಉಭಯ ಪಕ್ಷಗಳ ಮೈತ್ರಿಯಿಂದ ಪಕ್ಷದಿಂದ ತಲಾ ಒಬ್ಬರನ್ನು ರಾಜ್ಯಸಭೆಗೆ ಕಳುಹಿಸಿಕೊಡುವ ಯೋಜನೆ ಹಾಕಲಾಗಿದೆ.

ಬಿಜೆಪಿಯ ಪ್ರಭಾಕರ ಕೋರೆ, ರಾಜೀವ್ ಗೌಡ, ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ಹಾಗೂ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವಧಿ ಜೂನ್ 25ಕ್ಕೆ ಅಂತ್ಯವಾಗಲಿದೆ.

English summary
Election Commission of India Issues notification for conducting Rajya Sabha election to fill the vacant seats. 4 people are contesting from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X