ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಂಡಾ ಕಾಯ್ದೆಯಡಿ ಜಾಕಿ, ರಾಕಿ ಬಂಧನ

By Kiran B Hegde
|
Google Oneindia Kannada News

ಬೆಂಗಳೂರು, ನ. 24: ಗೂಂಡಾ ಕಾಯ್ದೆಯಡಿ ರಾಕೇಶ್ ಅಲಿಯಾಸ್ ಜಾಕಿ ಹಾಗೂ ರಾಜೇಶ್ ಅಲಿಯಾಸ್ ರಾಕಿ ಎಂಬ ರೌಡಿ ಶೀಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ ಅಲಿಯಾಸ್ ರಾಕಿ (24) ಮೈಸೂರು ರಸ್ತೆಯಲ್ಲಿರುವ ಆನಂದಪುರದ ನಿವಾಸಿ. ಈತನ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ. ರಾಕೇಶ್ ಅಲಿಯಾಸ್ ಜಾಕಿ (30) ದೊಡ್ಡಬಾಣಸವಾಡಿಯ ಎಕ್ಸ್ ಸರ್ವೀಸ್ ಮೆನ್ ಕಾಲೋನಿಯ ನಿವಾಸಿ. ಈತನ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿದೆ. [ಪೊಲೀಸ್ ಯಡವಟ್ಟು, ಒಂದು ವರ್ಷದ ಮಗು ರೌಡಿ ಶೀಟರ್]

rowdy

ಇಬ್ಬರೂ ಬೆಂಗಳೂರಿನ ವಿವಿಧ ಠಾಣೆಗಳ ಸರಹದ್ದಿನಲ್ಲಿ ತನ್ನ ಸಹಚರರ ಜತೆ ಸೇರಿ ಕೊಲೆ, ಹಲ್ಲೆ, ಕೊಲೆ ಯತ್ನ, ಬೆದರಿಕೆ, ದರೋಡೆ ಯತ್ನ ಮುಂತಾದ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಹಲವು ಠಾಣೆಗಳಲ್ಲಿ ಇವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಅನೇಕ ಬಾರಿ ಬಂಧಿಸಿದ್ದರೂ, ಜಾಮೀನಿನ ಮೇಲೆ ಹೊರಬಂದು ಮತ್ತೆ ಅಪರಾಧ ಚಟುವಟಿಕೆ ನಡೆಸುತ್ತಿದ್ದಾರೆ. [ರೌಡಿ ಅಜಂ ಬಂಧನ]

ಆದ್ದರಿಂದ ಇವರಿಬ್ಬರನ್ನೂ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ 'ಬಟ್ಟಿ ಸಾರಾಯಿ ವ್ಯವಹಾರ, ಮಾದಕ ವಸ್ತು ಸಾಗಣೆ, ಜೂಜು, ಗೂಂಡಾಗಿರಿ, ಅನೈತಿಕ ವ್ಯವಹಾರ ಮತ್ತು ಕೊಳಚೆ ಪ್ರದೇಶ ಅತಿಕ್ರಮಣ, ವಿಡಿಯೋ ಅಥವಾ ಆಡಿಯೋ ನಕಲು ಚಟುವಟಿಕೆಗಳ ತಡೆ ಅಧಿನಿಯಮ 1985' (ಗೂಂಡಾ ಕಾಯ್ದೆ) ಅಡಿ ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. [ಬೀದಿ ರೌಡಿ ಬಂಧನ]

English summary
Rowdy sheets Jaki and Raki are arrested as per police commissioner of Bengaluru order. They are involved in many crimes like murder, attempt to murder, robbery etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X